ಜ್ಯೋತಿಷ್ಯ 
ವಾರ ಭವಿಷ್ಯ

ವಾರ ಭವಿಷ್ಯ: ಈ ರಾಶಿಯವರು ಹಯಗ್ರೀವ ದೇವರನ್ನು ಪೂಜಿಸಿದರೆ ಕೆಲಸದಲ್ಲಿ ಉನ್ನತಿ ಕಾಣುವಿರಿ

ಮೇಷ

ಶ್ರಾವಣ-ಭಾದ್ರಪದ ಇನ್ನು ಕೆಲವೇ ದಿನಗಳಿದ್ದು, ರಾಜ್ಯದ ಬರನೀಗಿಸಲು ಮಳೆಯ ಕೊರತೆ ಉಂಟು. ನೆಲ-ನೀರು ಇದ್ದರೆ ಮನುಷ್ಯನು ಸಂತೃಪ್ತ. ಇಂತಹ ಪರಿಸ್ಥಿತಿಯಲ್ಲಿ 7 ಕೋಟಿ ಕರ್ನಾಟಕದ ಜನರು ತಮ್ಮ ಸ್ವಾರ್ಥ ಬದಿಗಿಟ್ಟು ಋಷ್ಯಶೃಂಗದಲ್ಲಿ ಪ್ರಾರ್ಥನೆ ಸಲ್ಲಿಸಿ. ಮೇಷದಿಂದ ಮೀನ ರಾಶಿಯವರು ಧೈವಭಕ್ತಿಯಿಂದ ದೇವರಲ್ಲಿ ವರ್ಷಧಾರೆಯಾಗಲೆಂದು ಪ್ರಾರ್ಥಿಸಲಿ. ನಾಡಿಗಾಗಿ ಬೇಡಿದರೆ ದೇವರೇ ನಿಮ್ಮ ಜೀವನವನ್ನು ಈ ಶನಿಸಂಚಾರ ಸಮಯದಲ್ಲಿ ರಕ್ಷಿಸುತ್ತಾನೆ.

ವೃಷಭ

ವೃಷಭ ರಾಶಿಗೆ 11ರಲ್ಲಿ ಶನಿಯಿದ್ದು, ಗುರುವು ಕಟಕ ರಾಶಿಯಲ್ಲಿ ತೃತೀಯದಲ್ಲಿ ಇದ್ದಾನೆ. ಅವನೊಂದಿಗೆ ಅಂಗಾರಕನಿದ್ದು, ಗೊಂದಲು ಉಂಟು ಮಾಡಿಕೊಳ್ಳದಿರಿ. ರಾಶ್ಯಾಧಿಪತಿ ದುರ್ಗೆಯನ್ನು ಪ್ರಾರ್ಥಿಸಿ ತಮಗೂ ಒಳ್ಳೆಯದನ್ನು ಮಾಡಿಕೊಂಡು ನಾಡಿಗಾಗಿ ಪ್ರಾರ್ಥಿಸುವುದು ಅತ್ಯಂತ ಅವಶ್ಯಕತೆ ಇದೆ. ದುರ್ಗೆಯೇ ನಿಮ್ಮನ್ನು ಕಾಪಾಡುತ್ತಾಳೆ.

ಮಿಥುನ

ದ್ವಿತೀಯದಲ್ಲಿ ಗುರುವಿರುವುದು ಒಳ್ಳೆಯ ವಿಚಾರವೇ. ಹರಿಹರರು ಕೊಡದ್ದನ್ನು ಗುರು ಕೊಡುತ್ತಾನೆ. ಸೆ. 26 ರಿಂದ ಗುರು-ಶುಕ್ರರು ಒಂದಾಗಿ ನಿಮ್ಮ ಕರ್ತವ್ಯದಲ್ಲಿ ದೊಡ್ಡ ಬದಲಾವಣೆ ತಂದು ನಿಮಗೆ ಸಮತೋಲವಾದ ಭಾಗ್ಯವನ್ನು ಕೊಡಲು ಸಾಧ್ಯವಿಲ್ಲ. ಆದರೆ ಕೆಲಸ ಕಾರ್ಯಗತವಾಗಬೇಕಾದರೆ ವರಸಿದ್ಧಿ ವಿನಾಯಕನನ್ನು ಅಂಗಾರಕ ಚೌತಿಯಂದು ಪ್ರಾರ್ಥಿಸಿ.

ಕಟಕ

ಕಟಕ ರಾಶಿಯವರಿಗೆ ಜಲ ರಾಶಿಯಲ್ಲೇ ಗುರುವಿದ್ದು ದ್ವಿತೀಯದಲ್ಲಿ ಕೇತುವಿರುವುದರಿಂದ ನಿಧಾನವಾಗಿ ಸಾಗಬೇಕು. ಅವಾಂತರ-ಅಪಾಯದಲ್ಲಿ ಸಿಲುಕಿಕೊಳ್ಳದಿರಲು ಈಶ್ವರನ ಪ್ರಾರ್ಥನೆ ಮಾಡಿ. ತಮ್ಮ ಕೆಲಸವನ್ನು ಮಾಡಿಕೊಂಡು ಮುನ್ನಡೆಯಿರಿ.

ಸಿಂಹ

ಸಿಂಹ ರಾಶಿಗೆ ದ್ವಾದಶದಲ್ಲಿ ಗುರುವು ಉಚ್ಚನಾಗಿದ್ದು ಲಗ್ನದಲ್ಲಿ ಕೇತುವಿರುವುದರಿಂದ ಅಡೆ-ತಡೆ ಸಹಜ. ಬಲಧನ ಮನೆಯಲ್ಲಿ ರವಿಯಿದ್ದು ರಾಶ್ಯಾಧಿಪತಿ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿ. ಹಾಗೂ ಪ್ರಾತಃಕಾಲದಲ್ಲಿ ಅರುಣನಿಗೆ 24 ನಮಸ್ಕಾರವನ್ನು ಮಾಡಿದರೆ ಒಳ್ಳೆಯ ದಿನಗಳನ್ನು ಕಾಣಬಹುದು. ಪೂಜೆಯೂ ಅವಶ್ಯವಾಗಿರುತ್ತದೆ.

ಕನ್ಯಾ

11ರಲ್ಲಿ ಗುರು ಕುಜನ ಸಂಬಂಧದಲ್ಲಿರುವುದು ತುಂಬಾ ವಿಶೇಷವಾದ ಸಮಯ. ಆದರೆ ಸಪ್ತಮದಲ್ಲಿ ಶನಿಯು ಸ್ವತಂತ್ರವಾಗಿರಲು ನಿಮ್ಮನ್ನು ಬಿಡುವುದಿಲ್ಲ. ಕೆಲಸದಲ್ಲಿ ಉತ್ಸಾಹದಿಂದ ತೊಡಗಿಕೊಳ್ಳಬೇಕು. ಹಯಗ್ರೀವ ದೇವರನ್ನು ಪೂಜಿಸಿ. ಅಷ್ಟೋತ್ತರ ಪಠಿಸಿ. ಯಶಸ್ಸು ಕೀರ್ತಿಯು ಏಕಕಾಲದಲ್ಲಿ ಬರುತ್ತದೆ.

ತುಲಾ

ರಾಶ್ಯಾಧಿಪತಿ ಶುಕ್ರ- ಬುಧನ ಜತೆಯಿದ್ದು, ಬುಧ-ಶುಕ್ರ ಯೋಗವು ನಡೆದಿರುತ್ತದೆ. 10ರಲ್ಲಿ ಗುರು, 6ರಲ್ಲಿ ಶನಿಯಿದ್ದು, ನಿಮ್ಮ ಕೀರ್ತಿಯನ್ನು ಹೆಚ್ಚಿಸಿ ಏನನ್ನು ಬೇಕಾದರೂ ಸಾಧಿಸುವ ಸಮಯವಿದು. ಧೈರ್ಯದಿಂದ ಮುನ್ನುಗ್ಗಿ ಕೆಲಸ ಕಾರ್ಯವನ್ನು ಮಾಡಿದರೆ ದೈವವೇ ನಿಮ್ಮನ್ನು ಕಾಯುತ್ತದೆ.

ವೃಶ್ಚಿಕ

ಗುರುವು 9ನೇ ಮನೆಯಲ್ಲಿದ್ದರೂ ಪಂಚಮ ಶನಿಯು ಕೆಲವು ಸಂದಿಗ್ಧ ಸನ್ನಿವೇಶ ತಂದು ಕೆಲಸ ಕಾರ್ಯದಲ್ಲಿ ಗುರಿಮುಟ್ಟಲು ಸಾಧ್ಯವಾಗುತ್ತಿಲ್ಲ. ಹಣಕ್ಕೆ ಒತ್ತಡವಿದೆ. ನಿರೀಕ್ಷಿಸಿದ ಹಣ ಬರುತ್ತಿಲ್ಲ. ಇದರ ಜೊತೆಯಾಗಿ ಬೇಡವಾದ ಅಡ್ಡಿ ಆತಂಕ ಬಂದು ನ್ಯಾಯಕ್ಕಾಗಿ ಅಲೆದಾಡುವ ಸಮಯವನ್ನು, ದೈವ ಶಕ್ತಿಯನ್ನು ಕಾಯ್ದುಕೊಳ್ಳಿ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.

ಧನಸ್ಸು

ಧನುರ್ ವಿದ್ಯೆಯಲ್ಲಿ ಶ್ರೀರಾಮಚಂದ್ರನನ್ನು ಮೀರಿಸಿದವರು ಯಾರೂ ಇಲ್ಲ. ಮೂಲತಃ ರಾಮನು ಮಾನವ ಉಪಕಾರಕ್ಕಾಗಿ ಜನ್ಮತಾಳಿ ರಾಕ್ಷಸರನ್ನು ಸದೆ ಬಡಿದು ಅದ್ಭುತವಾದ ಭರತರಾಷ್ಟ್ರ ನಿರ್ಮಾಣ ಮಾಡಿದ್ದಾನೆ. ಅಂತಹ ಶ್ರೀರಾಮನನ್ನು ಪೂಜಿಸಿ, ರಾಮ ಅಷ್ಟೋತ್ತರ ಪಠಿಸಿ. ಹನುಮಂತನನ್ನು ಪ್ರಾರ್ಥಿಸಿ. ಶರವೇಗದಲ್ಲಿ ನಿಮ್ಮ ಕಾರ್ಯವು ಮುಂದೆ ಸಾಗಿ, ಸಂತಸ ಪಡುತ್ತೀರಿ.

ಮಕರ

ಸಪ್ತಮದಲ್ಲಿ ಗುರುವಿದ್ದು, ಮೂರರಲ್ಲಿ ಶನಿಯಿರುವುದರಿಂದ ಅಸಾಧ್ಯ ಕಾರ್ಯಗಳನ್ನು ಹನುಮ ಕೃಪೆಯಿಂದ ಸಾಧಿಸಿ ನಿಮ್ಮ ಇಷ್ಟಾರ್ಥ ಪಡೆಯುವ ಶುಭದಿನ ನಿಮ್ಮೊಂದಿಗಿದೆ. ಸುಂದರಕಾಂಡ ಪಾರಾಯಣ ಮಾಡಿ. ಯಾವುದೇ ಅಶುಭ ವಾರ್ತೆಯಾಗಲಿ, ಕೆಟ್ಟ ಸನ್ನಿವೇಶವಾಗಲಿ ಬಾರದಂತೆ ನಿಮ್ಮ ಜೀವನ ಮುಂದೆ ಸಾಗುತ್ತದೆ. ಆಂಜನೇಯನನ್ನು ಪ್ರಾರ್ಥಿಸಿ.

ಕುಂಭ

ಗುರು ಬಲವೂ ಇಲ್ಲ. ಗುರುವಿನ ಜತೆಯಲ್ಲಿ ಕುಜನಿದ್ದು, ದ್ವಿತೀಯ ಶನಿಯ ಉಪದ್ರವದಿಂದ ಬಳಲಿದ್ದೀರಿ. ಆದರೂ ತಂದೆ-ತಾಯಿಯು ಮಾಡಿಟ್ಟ ವಿಶೇಷ ಪುಣ್ಯದಿಂದ ಹೇಗೋ ದಡವನ್ನು ಸೇರುತ್ತೀರಿ. ಈ ಸಮಯದಲ್ಲಿ ಗುರುವನ್ನು ಚೆನ್ನಾಗಿ ಪ್ರಾರ್ಥಿಸಿ. ದೇವರ ದೇವ ಮಹಾದೇವರ ಸೃಷ್ಟಿಯಾದ ಶನಿಯ ಅವತಾರವೇ ಶಿವ ಸೃಷ್ಟಿ. 2027ರ ಜೂನ್ 7ರ ವರೆಗೂ ಪ್ರದೋಷ ಕಾಲದಲ್ಲಿ ಶಿವ ಪೂಜೆ ಮಾಡಿರಿ. ಸಂಕಟವು ದೂರವಾಗುತ್ತದೆ.

ಮೀನ

ಪಂಚಮದಲ್ಲಿ ಗುರು ಉಚ್ಛನಾಗಿದ್ದಾನೆ. ಆದರೆ ಲಗ್ನದಲ್ಲಿ ಶನಿಯಿದ್ದು, ಕೆಲವೊಂದು ತಾತ್ಕಾಲಿಕ ತಡೆಯೊಡ್ಡುತ್ತಾನೆ. ಎಷ್ಟೇ ವೇಗದಲ್ಲಿ ರೈಲು ಓಡಿದರೂ ಮತ್ತೊಂದು ಸ್ಥಳವನ್ನು ಸೇರುವಾಗ ಕೆಲವೊಂದು ನಿಲ್ದಾಣದಲ್ಲಿ ನಿಲ್ಲಲೇಬೇಕು. ಹಾಗೆಯೇ ನಿಮ್ಮ ಜೀವನವು ಶನಿಯಿಂದ ನಿಂತುಬಿಡುವ ಭಯವಿದ್ದರೂ, ಮುಂದೆ ಸಾಗಲು ಗುರುವೇ ನಿಮ್ಮ ರೈಲುಗಾಡಿಯನ್ನು ಓಡಿಸುತ್ತಾನೆ. ಧರ್ಮದಲ್ಲಿ ಸಾಗಿ. ದಾರಿದ್ರ್ಯವು ದೂರವಾಗಿ ಸಂತೋಷ ಕಾಣಬಹುದು.