ವೃಷಭ: ಈ ರಾಶಿಯವರಿಗೆ ಅಷ್ಟಮಕ್ಕೆ ಸೂರ್ಯನು ಬಂದು ಅಲ್ಲೇ ಅಂಗಾರಕನೂ ಇರುವುದರಿಂದ ಯಾರನ್ನೂ ಕೆಣಕದೆ ಯಾವ ವಿಚಾರಕ್ಕೂ ಹೋಗದೆ ಮೌನ ಧರಿಸಿದರೆ ಲಾಭವು ಹೆಚ್ಚಾಗುತ್ತದೆ. ಏಕೆಂದರೆ ದ್ವಿತೀಯದಲ್ಲಿ ಗುರುವಿದ್ದಾನೆ. ಹಗ್ಗವೇ ಹಾವಿನಂತೆ ಕಾಣುವ ಸಮಯ. ಸುತ್ತ ಮುತ್ತಲು ಇರುವ ಜನರಿಂದ ಎಚ್ಚರ ವಹಿಸಿ. ಜೀವನದ ಸಮುದ್ರವನ್ನು ದಾಟಿಸುವ ದುರ್ಗೆಯ ಪ್ರಾರ್ಥನೆ ಅವಶ್ಯ ಮಾಡಲೇಬೇಕು. ತ್ರಿವಿಕ್ರಮನಂತೆ ಹೋರಾಡಿ ಬೇಕಾದದ್ದನ್ನು ಗಳಿಸಿಕೊಳ್ಳಿ.
ಮಿಥುನ: ಲಗ್ನದಲ್ಲಿ ಗುರು, ಸಪ್ತಮದಲ್ಲಿ ಸೂರ್ಯನು ಕುಳಿತಿರುವುದರಿಂದ ಯಾವ ತೊಂದರೆ ತಾಪತ್ರಯ-ತಕರಾರು ಬರುವುದಿಲ್ಲ. ಆದರೆ ಆರೋಗ್ಯದ ಬಗ್ಗೆ ಎಚ್ಚರವನ್ನು ವಹಿಸಿ. ಕಾಲಿಗೆ ಪೆಟ್ಟನ್ನು ಮಾಡಿಕೊಳ್ಳದಿರಿ. ಕರ್ತವ್ಯದಲ್ಲಿ ಪ್ರಜ್ಞೆ ಇರಲಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ದೇವರೇ ಸಹಾಯ ಮಾಡುತ್ತಾನೆ. ಲಕ್ಷ್ಮೀ ಸಹಿತ ಮಹಾವಿಷ್ಣುವನ್ನು ಪೂಜಿಸಿ.
ಕಟಕ: ದ್ವಾದಶದಲ್ಲಿ ಗುರುವಿದ್ದಾನೆ. ಲಗ್ನಕ್ಕೆ ದ್ವಿತೀಯದಲ್ಲಿ ಕೇತು ಇದ್ದು ಶರೀರಕ್ಕೆ ಎಷ್ಟು ಕೆಲಸ ಮಾಡಲು ಸೂಚಿಸುತ್ತದೋ ಅಷ್ಟೇ ಮಾಡಬೇಕು. ಅದನ್ನು ದಾಟಿ ಮಾಡಿದರೆ ಅತಿಯಾದ ಆಲಸ್ಯ ಮುಖದಲ್ಲಿ ಕಾಣುತ್ತದೆ. ಅತಿಯಾದ ಕೆಲಸ ಮಾಡದೇ ಶೀತಬಾಧೆಯಿಂದ ಎಚ್ಚರವಹಿಸಿ. ಜಲರಾಶಿಯವರು ಉಸಿರಾಟದ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಿ. ಶರೀರಾರೋಗ್ಯಕ್ಕಾಗಿ ಮೃತ್ಯುಂಜಯನನ್ನು ಪ್ರಾರ್ಥಿಸಿ.
ಸಿಂಹ: ಏಕಾದಶದಲ್ಲಿ ಗುರು, ಲಗ್ನದಲ್ಲಿ ಕೇತು, ಗಣೇಶನನ್ನು ಮರೆಯದೆ ಪ್ರಾರ್ಥಿಸಿ. ಕಾರ್ಯಸಿದ್ದಿಯಾಗಿ ಸಂಪತ್ತು, ಶರೀರಕ್ಕೆ ಆರೋಗ್ಯ ದೊರೆಯುತ್ತದೆ. ಸೂರ್ಯ ಹಾಗೂ ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಸಾಕು. ಕಲ್ಪನೆ ಇಲ್ಲದೆಯೇ ಕೆಲಸವು, ವ್ಯವಹಾರವು ಪೂರ್ಣಗೊಳ್ಳುವುದು.
ಕನ್ಯಾ: 10ರಲ್ಲಿ ಗುರು ಬಂದು, ಲಗ್ನಕ್ಕೆ 12ರಲ್ಲಿ ಕೇತುವಿದ್ದಾನೆ. ಮಾತಿನಲ್ಲಿ ಇತಿಮಿತಿ ಇರಲಿ. ಕಲಹಕ್ಕೆ ಕೈ ಹಾಕದೆ ಮನೆಯವರೊಂದಿಗೆ ಒಳ್ಳೆಯ ಬಾಂದವ್ಯವಿರಲಿ. ಸೌಂದರ್ಯ ಲಹರಿ ಪಾರಾಯಣ ಮಾಡಿಸಿ ಅಥವಾ ನಡೆಯುವ ಕಡೆ ಹೋಗಿ ದೇವರ ಸ್ತುತಿಯನ್ನು ಕೇಳಿರಿ. ಹಣದ ಕೊರತೆ ನಿವಾರಣೆಗೆ ಮಹಾಲಕ್ಷ್ಮೀಯನ್ನು ಪೂಜಿಸಿ.
ತುಲಾ: ಈ ರಾಶಿಯವರಿಗೆ ಬುಧನು ಅಲ್ಲೇ ಇದ್ದು,ಮಾಡುವ ವ್ಯಾಪಾರ-ವ್ಯವಹಾರ ಗಳಲ್ಲಿ ಅನಿರೀಕ್ಷಿತ ಧನಾಗಮನ, ಒಳ್ಳೆಯ ಜನಮನ್ನಣೆ, ಮಾಡಿದ ಕೆಲಸದಲ್ಲಿ ತೃಪ್ತಿ ದೊರೆಯುವ ಹಾಗೂ ಹಲವರ ಮೆಚ್ಚ್ಚುಗೆ ಗಳಿಸುವ ಸಮಯ. 9ರ ಗುರುವಿಗೆ ದುರ್ಗಾ ಸಹಿತ ಈಶ್ವರನನ್ನು ಪ್ರಾರ್ಥಿಸಿ, ಪೂಜಿಸಿ.
ವೃಶ್ಚಿಕ: ಪಂಚಮಕ್ಕೆ ಶನಿಯು ಬರುತ್ತಾನೆಂಬ ಅರಿವಿರಲಿ. ಅಷ್ಟಮ ಗುರುವು ಕಷ್ಟ ಕೊಡದಿದ್ದರೂ, ಕೆಲಸ ಕಾರ್ಯ ಸುಲಭವಾಗಿ ಮಾಡಿಕೊಳ್ಳಲಾಗದು. ಶನಿಯು ಬದಲಾಗುವವರೆಗೆ ದೈವಪ್ರಾರ್ಥನೆ ಬಿಡಲೇಬಾರದು. ಸಮಲೋಚಿತ ಬುದ್ದಿಯನ್ನು ಭಗವಂತನೇ ಕೊಡುತ್ತಾನೆ.
ಧನಸ್ಸು: ಧನುರ್ ರಾಶಿಗೆ ಖರ್ಚು ಜಾಸ್ತಿ. ಶ್ರಮವು ಅತಿಯಾಗುವುದು. ಸೂರ್ಯನು 12ರಲ್ಲಿರುವಾಗ ಜಾಣ್ಮೆಯಲ್ಲಿ ಜೀವನ ನಡೆಸಬೇಕು. ಯಾರು ಏನೇ ಹೇಳಿದರು ಕೇಳಿಸಿಕೊಳ್ಳಿ. ಸಲಹೆ ಕೊಟ್ಟ ನೀವು ಕೆಟ್ಟವರಾಗುವುದು ಬೇಡ. ನೀವು ಉಪಕಾರ ಮಾಡಿದರೆ ಅದನ್ನು ಕಡಿಮೆ ಎಂದು ಭಾವಿಸುವವರೇ ಹೆಚ್ಚು. ಸಪ್ತಮ ಗುರು ಎಲ್ಲವನ್ನೂ ಕೊಡುತ್ತಾನೆ. ಸರಸ್ವತಿ ಪ್ರಾರ್ಥನೆ ಇರಲಿ.
ಮಕರ: ಈ ರಾಶಿಗೆ ಷಷ್ಠಕ್ಕೆ ಗುರು ಬಂದು ಬುಧನ ಮನೆಯಲ್ಲಿದ್ದುದರಿಂದ ಕೆಡಕುಗಳು ಬರುವುದಿಲ್ಲ. ಸತ್ಕಾರ್ಯ, ಯಥೋಚಿತ ಉಪಕಾರ, ಹೂಡಿದ ಹಣಕ್ಕೆ ಆಕಸ್ಮಿಕವಾಗಿ ಧನಲಾಭ, ಶರೀರಕ್ಕೆ ಆರೋಗ್ಯ ಸಿಗುವುದರಲ್ಲಿ ಸಂದೇಹವಿಲ್ಲ. ಶನಿಯ ಸೃಷ್ಟಿಯು ಮಹಾದೇವರ ಕೈಯಲ್ಲಿದ್ದುದರಿಂದ ಉಮಾಮಹೇಶ್ವರನನ್ನು ಪೂಜಿಸಿ. ಉಮಾಮಹೇಶ್ವರ ಕಥೆ ಓದಿರಿ. ಹೆಚ್ಚಿನ ಕೀರ್ತಿ ಲಾಭವು ದೊರೆಯುತ್ತದೆ.
ಕುಂಭ: ಲಗ್ನದಲ್ಲಿ ರಾಹು ಇದ್ದಾನೆ. ಪಂಚಮಕ್ಕೆ ಗುರು ಬಂದಿದ್ದಾನೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದೇ ಅತ್ಯುತ್ತಮವಾದ ದಾರಿ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ನಡೆದರೂ ಮನಸ್ಸಿಗೆ ಹಿಂಸೆ ಮಾಡಿಕೊಳ್ಳಬೇಡಿ. ಮಾನಕ್ಕಿಂತ ಒಡವೆ ಮತ್ತೊಂದಿಲ್ಲ. ನಿಮ್ಮ ಕಾರ್ಯ ನಡಸಿಕೊಡಲು ಗುರು ರಾಹು ಇಬ್ಬರೇ ಸಾಕು.
ಮೀನ: ಶನಿಯು ವಕ್ರನಾಗಿ ಕುಂಭರಾಶಿಯಲ್ಲಿದ್ದು ಚತುರ್ಥದಲ್ಲಿ ಗುರು ಇದ್ದು, ಕೆಲಸವು ಮುಂದೆ ಸಾಗಬೇಕಾದರೆ ಗುರು ನರಸಿಂಹನ ಮೊರೆ ಹೋಗಲೇಬೇಕು. ನರಸಿಂಹಾಷ್ಟಕ ಹಾಗೂ ಕರಾವಲಂಬನ ಸ್ತೋತ್ರ ಪಠಿಸಿದರೆ ಕೆಲಸಗಳು ನೆರವೇರುತ್ತವೆ. ನಗು ಮುಖದಿಂದ ಎಲ್ಲವನ್ನೂ ಎದುರಿಸಿ ಸಾಧಿಸಬಹುದು.