ವಾರ ಭವಿಷ್ಯ

ವಾರಭವಿಷ್ಯ: ಈ ರಾಶಿಯವರಿಗಿಂದು ವಾರಾಂತ್ಯದಲ್ಲಿ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮ

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ನಿಮ್ಮ ದಕ್ಷತೆಯಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಕುಟುಂಬದಲ್ಲಿ ಶುಭ ಸಮಾರಂಭ ಆಯೋಜಿಸುವ ಕುರಿತು ಚರ್ಚೆ ನಡೆಯಲಿದೆ. ಆರೋಗ್ಯದ ಕಡೆಗೆ ವಿಶೇಷ ಗಮನವಿರಲಿ. ವಾರಾಂತ್ಯದಲ್ಲಿ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ವಾಗಲಿದೆ. ಹೊಸ ಅವಕಾಶಗಳು ಒದಗಿಬರಲಿವೆ. ಮನಸ್ಸು ಉತ್ಸಾಹದಿಂದ ಕೂಡಿರಲಿದೆ.

ವೃಷಭ: ವ್ಯಾಪಾರ-ವಹಿವಾಟಿನಲ್ಲಿ ನಿರೀಕ್ಷೆಗೂ ಮೀರಿದ ಧನಲಾಭ ದೊರೆತು ಮನಸ್ಸಿಗೆ ಉತ್ಸಾಹ ಸಿಗಲಿದೆ. ಆಸ್ತಿ ಖರೀದಿ ಅಥವಾ ಮಾರಾಟದ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಲಿವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಪ್ರಗತಿ ಕಂಡುಬರಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹಾಗೂ ಅನ್ಯೋನ್ಯತೆ ಹೆಚ್ಚಾಗಲಿದೆ. ನಿಮ್ಮ ಎಲ್ಲ ಒಳ್ಳೆಯ ಕೆಲಸಕ್ಕೆ ಹಿರಿಯರ ಬೆಂಬಲವಿರಲಿದೆ. ಶುಭ ಸುದ್ದಿಗಳು ಸಿಗಲಿವೆ.

ಮಿಥುನ: ಸೃಜನಶೀಲ ಮತ್ತು ಕಲಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉನ್ನತ ಮಟ್ಟದ ಮನ್ನಣೆ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಲು ಹೊಸ ಆದಾಯದ ಮೂಲಗಳು ಗೋಚರಿಸಲಿವೆ. ದೂರಪ್ರಯಾಣದಿಂದ ಲಾಭವಾಗಲಿದೆ. ಸ್ನೇಹಿತರೊಡನೆ ಕಾಲಕಳೆಯುವ ಸುಯೋಗವಿದೆ. ಹೊಸ ಯೋಜನೆಗಳು ಆರಂಭವಾಗಲಿವೆ. ಆರ್ಥಿಕ ಪ್ರಗತಿ ಇರಲಿದೆ.

ಕಟಕ: ಕಚೇರಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಸಹಕಾರದಿಂದ ಬಾಕಿ ಇರುವ ಕೆಲಸಗಳು ಶೀಘ್ರವಾಗಿ ಮುಗಿಯಲಿವೆ. ಮನಸ್ಸಿನಲ್ಲಿ ಹೊಸ ಯೋಜನೆಗಳ ರೂಪುರೇಷೆಗಳು ಸಿದ್ಧಗೊಳ್ಳಲಿವೆ. ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು. ಹಿರಿಯರ ಸಲಹೆ ಪಡೆಯಿರಿ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವಿರಿ.

ಸಿಂಹ: ನಿಮ್ಮ ನೇರ ಮಾತು ಹಾಗೂ ನಾಯಕತ್ವದ ಗುಣಗಳು ಸಮಾಜದಲ್ಲಿ ಹೊಸ ಗೌರವ ತಂದುಕೊಡಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ಧಾರ್ವಿುಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಆರೋಗ್ಯ ಸುಧಾರಿಸಲಿದೆ. ಆಕಸ್ಮಿಕ ಧನಾಗಮದಿಂದ ಸಂತಸವಾಗಲಿದೆ. ನೂತನ ಅವಕಾಶಗಳು ಸಿಗಲಿವೆ.

ಕನ್ಯಾ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಷೇರು ಮಾರುಕಟ್ಟೆ ಅಥವಾ ಊಹಾತ್ಮಕ ಹೂಡಿಕೆಗಳಿಂದ ದೂರವಿರಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕಂಡು ಬರುತ್ತವೆಯಾದರೂ ಮಾತುಕತೆಯಿಂದ ಎಲ್ಲವೂ ಬಗೆಹರಿಯಲಿವೆ. ಹಿರಿಯರ ಆಶೀರ್ವಾದವಿರಲಿದೆ. ಹೊಸ ಸಂಪರ್ಕಗಳು ಸಿಗಲಿವೆ. ಆರೋಗ್ಯ ಸುಧಾರಿಸಲಿದೆ.

ತುಲಾ: ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ಲಭಿಸುವ ಶುಭ ಸುದ್ದಿ ಕೇಳಲಿದ್ದೀರಿ. ಸಂಗಾತಿಯಿಂದ ಸಂಪೂರ್ಣ ಬೆಂಬಲ, ಪ್ರೀತಿ ಸಿಗಲಿದೆ. ಕಾನೂನು ವಿವಾದಗಳಲ್ಲಿ ನಿಮ್ಮ ಪರವಾಗಿಯೇ ತೀರ್ಪು ಬರುವ ಸಾಧ್ಯತೆಯಿದೆ. ಹೊಸ ವಸ್ತುಗಳನ್ನು ಖರೀದಿಸುವಿರಿ. ವಾರಾಂತ್ಯವು ಸಂತಸದಾಯಕವಾಗಿರುವುದು. ಆರ್ಥಿಕ ಸದೃಢತೆ ಇರಲಿದೆ.

ವೃಶ್ಚಿಕ: ಕೆಲಸದ ಒತ್ತಡ ಹೆಚ್ಚಿದ್ದರೂ ನೀವು ಎದೆಗುಂದುವುದಿಲ್ಲ. ನಿಮ್ಮ ಇಚ್ಛಾಶಕ್ತಿಯಿಂದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಂಬಂಧಪಟ್ಟವರ ಮೆಚ್ಚುಗೆಗೆ ಪಾತ್ರರಾಗುವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ. ವಾರಾಂತ್ಯದಲ್ಲಿ ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಅಪಾರ ನೆಮ್ಮದಿ ಸಿಗಲಿದೆ. ಆರ್ಥಿಕ ಪ್ರಗತಿ ಕಂಡುಬರಲಿದೆ. ಹೊಸ ಜವಾಬ್ದಾರಿಗಳು ಸಿಗಲಿವೆ.

ಧನಸ್ಸು: ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶದಿಂದ ಅಥವಾ ಪ್ರಮುಖ ಸಂಸ್ಥೆಗಳಿಂದ ಉತ್ತಮ ಅವಕಾಶಗಳು ಒದಗಿಬರಲಿವೆ. ಪ್ರಮುಖ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಸಮಾಜಸೇವೆಯಲ್ಲಿ ಆಸಕ್ತಿ ವೃದ್ಧಿಸಲಿದೆ. ಆರ್ಥಿಕವಾಗಿ ಸದೃಢವಾದ ವಾರವಿದು. ಮನಸ್ಸು ಪ್ರಫುಲ್ಲವಾಗಿರುತ್ತದೆ. ಹಿರಿಯರ ಮಾರ್ಗದರ್ಶನ ಪಡೆದರೆ ಎಲ್ಲವೂ ಸಸೂತ್ರವಾಗಿ ಸಾಗಲಿವೆ.

ಮಕರ: ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಆಯಾಮಗಳು ಹಾಗೂ ಯಶಸ್ಸು ನಿಮ್ಮದಾಗಲಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುವಿರಿ. ಮನೆಯಲ್ಲಿ ಪ್ರಮುಖ ಚರ್ಚೆಗಳು ನಡೆಯಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಗಾತಿಯ ಬೆಂಬಲ ಸಿಗಲಿದೆ.

ಕುಂಭ: ನಿಮ್ಮ ವಿಶಿಷ್ಟ ಆಲೋಚನೆಗಳು ಎಲ್ಲರ ಗಮನ ಸೆಳೆಯಲಿವೆ. ಸಾಮಾಜಿಕ ವಲಯದಲ್ಲಿ ಜನಪ್ರಿಯತೆ ಹೆಚ್ಚಾಗಲಿದೆ. ಹಠಾತ್ ಧನಲಾಭ ಅಥವಾ ಬಡ್ತಿ ಸಿಗುವ ಸಂಭವ ಡಾಳವಾಗಿದೆ. ಆರೋಗ್ಯ ಹಿಂದೆಂದಿಗಿಂತ ಉತ್ತಮವಾಗಿರಲಿದೆ. ಸ್ನೇಹಿತರ ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಇದೆ.

ಮೀನ: ಮನಸ್ಸಿನಲಿ ಎಷ್ಟೋದಿನಗಳಿಂದ ಇದ್ದ ಆತಂಕ ಹಾಗೂ ಗೊಂದಲಗಳು ದೂರವಾಗಿ ನೆಮ್ಮದಿ ನೆಲೆಸಲಿದೆ. ಧಾರ್ವಿುಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇರುವಿರಿ. ಮಕ್ಕಳಿಂದ ಸಮಾಧಾನಕರ ಸುದ್ದಿ ಕೇಳಲಿದ್ದೀರಿ. ದಾಂಪತ್ಯ ಜೀವನ ಸುಮಧುರವಾಗಿರುತ್ತದೆ. ಹೊಸ ಯೋಜನೆಗಳಿಗೆ ಚಾಲನೆ ನೀಡುವಿರಿ.