ಮೇಷ: ಏ.14ರಿಂದ ಮೇಷ ಸಂಕ್ರಮಣ, ಸೌರಯುಗಾದಿಯ ಆರಂಭವಾಗಿ ಮೇಷ ರಾಶಿಗೆ ಸೂರ್ಯ ಉಚ್ಚನಾಗಿರುತ್ತಾನೆ. ನಿಮ್ಮ ಕೆಲಸ ಕಾರ್ಯವನ್ನು ಮಾಡಲು ಮುಂಜಾಗ್ರತೆ ವಹಿಸಬೇಕು. ರಾಹು ಜತೆಯಾಗಿದ್ದು, ವ್ಯಾಪಾರದಲ್ಲಿ ಹೆಚ್ಚುಕಡಿಮೆ ಆಗಬಹುದು ಅಥವಾ ನಿಮ್ಮ ಅದೃಷ್ಟದ ಬಾಗಿಲು ತೆರೆಯಬಹುದು. ರಾಶ್ಯಾಧಿಪತಿಯಾದ ಅಂಗಾರಕನನ್ನು ಪೂಜಿಸಿದರೆ ಒಳ್ಳೆಯ ಫಲ.
ವೃಷಭ: ಈ ರಾಶಿಯವರಿಗೆ 12ರಲ್ಲಿ ಶುಕ್ರನಿದ್ದು ಅನವಶ್ಯಕ ಖರ್ಚು, ಧನದ ಕೊರತೆ ಇರುತ್ತದೆ. ರಾಶಿಗೆ 2ನೇ ಮನೆಯಲ್ಲಿ ಗುರುವಿರುವುದರಿಂದ ಎಂತಹ ಪ್ರವಾಹ ಬಂದರೂ ನದಿಯನ್ನು ದಾಟುವ ಸಾಮರ್ಥ್ಯವಿದೆ. ಶಿಸ್ತುಬದ್ಧರಾಗಿ ಸಜ್ಜನರ ಆಶ್ರಯದಲ್ಲಿದ್ದ ಅಶ್ವತ್ಥ ವೃಕ್ಷದ ಕೆಳಗೆ ಕುಳಿತು ಯೋಚಿಸಿದರೆ ಆ ಗಾಳಿಯಿಂದ ಮನಸ್ಸು, ಸ್ಥಿರವಾಗಿ, ಶಾಂತವಾಗಿ ಕೆಲಸವು ನಿಮ್ಮಂತೆ ನಡೆದು ಆನಂದ ಸಿಗುತ್ತದೆ.
ಮಿಥುನ: ಗುರುವು ಮಿಥುನ ರಾಶಿಯಲ್ಲಿದ್ದಾನೆ. 9 ದಿನ ಮಹಾಸಂಕಲ್ಪ ಮಾಡಿ ಸೂರ್ಯೂದಯಕ್ಕೆ ಸ್ನಾನ ಮುಗಿಸಿ ಔದುಂಬರ ವೃಕ್ಷ ಪೂಜಿಸಿ, 9 ಪ್ರದಕ್ಷಿಣೆ ಹಾಕಿದರೆ ಪ್ರತ್ಯಕ್ಷ ಗುರುದತ್ತಾತ್ರೇ ಯನೇ ನಿಮ್ಮ ಅಭೀಷ್ಟ ಸಿದ್ಧಿಸುತ್ತಾನೆ. ನಿಮ್ಮ ಸಂಕಲ್ಪ ಸಾಧಿಸಲು ದತ್ತದೇವರನ್ನು ಪೂಜಿಸಿ. ಆರೋಗ್ಯ, ಧನಸಮೃದ್ಧಿ ಹಾಗೂ ತೇಜೋ ಬಲಕೊಟ್ಟು ನಿಮ್ಮನ್ನು ಕಾಪಾಡುತ್ತಾರೆ.
ಕಟಕ: ಈ ರಾಶಿಯವರಿಗೆ 12ನೇ ಮನೆಯ ಗುರುವು ಶಿವನೇ ಆಗಿರುವುದರಿಂದ ಓಂ ನಮಃ ಶಿವಾಯ ಎಂಬ ಮಹಾಮಂತ್ರವನ್ನು ಉಸಿರಾಗಿಸಿಕೊಳ್ಳಿ. ಶಿವಧ್ಯಾನ ಮಾಡುವುದರಿಂದ ಏನನ್ನೂ ಗಳಿಸಬಹುದು. ನೀವು ಮಾಡುವ ಕೆಲಸವು ಶರೀರಕ್ಕೆ ಹೊರೆಯಾಗಬಾರದು. ಬೇರೆಯವರಿಗೆ ಆತಂಕ ಉಂಟಾಗದಂತೆ ನೋಡಿಕೊಳ್ಳಿ. ತುಳಸಿ ಪೂಜೆಯನ್ನು ಉಷಾಕಾಲದಲ್ಲಿ ಮಾಡಿದರೆ ಮಹಾವಿಷ್ಣುವೇ ನಿಮ್ಮನ್ನು ಹರಸುತ್ತಾನೆ.
ಸಿಂಹ: ಲಗ್ನದಲ್ಲಿ ಕೇತುವಿದ್ದು, 11ನೇ ಮನೆಯ ಗುರು ಬಲಾಢ್ಯನೂ-ಬಲ ಶಾಲಿಯೂ ಹೌದು. ಗಜಮುಖನ ಪೂಜೆ ಮಾಡಿದರೆ ನಿಮಗೆ ರಾಜಯೋಗವನ್ನು ಕೊಟ್ಟು, ನಿಮ್ಮ ಮನೋಕಾಮನೆಯನ್ನು ಪೂರೈ ಸುತ್ತಾನೆ, ಸಿಂಹ ರಾಶಿಯಲ್ಲಿ ಜನಿಸಿದವರು ಪುರಿಜಗನ್ನಾಥ ನನ್ನು ಸಾಧ್ಯವಾದಲ್ಲಿ ದರ್ಶಿಸಿದರೆ ನಿಮ್ಮ ಬಾಳು ನೇರವಾಗಿ ಸಾಗುತ್ತದೆ.
ಕನ್ಯಾ: ಈ ರಾಶಿಯವರು ಸಪ್ತಮ ಶನಿಯಿಂದ ನಲುಗಿ ಹೋಗಿದ್ದಾರೆ. ದಶಮ ಗುರುವು ಅಲ್ಪಮಟ್ಟಿಗೆ ಬಾಧೆಯನ್ನು ಪರಿಹರಿಸಿದರೂ ಪೂರ್ವ ಜನ್ಮದ ಪಾಪ ಕಳೆದುಕೊಳ್ಳಲು ಆಗದು. ನೀವು ಎಲ್ಲಿ ತಪ್ಪಿ ನಡೆದಿದ್ದೀರಿ ಎಂಬುದನ್ನು ಚಿಂತಿಸಿ, ತಿದ್ದಿಕೊಂಡು ನಡೆದರೆ ಶನಿಯು ನಿಮ್ಮನ್ನು ಹರಸುತ್ತಾನೆ. ಅಷ್ಟಮಕ್ಕೆ ಶನಿ ಬಂದಾಗ ಆರೋಗ್ಯವನ್ನು ಎಲ್ಲಾ ರೀತಿಯಿಂದಲೂ ಕಾಪಾಡಿಕೊಳ್ಳಬೇಕು. ರುದ್ರದೇವರ ಪೂಜೆ ಮಾಡಿರಿ.
ತುಲಾ: ಈ ರಾಶಿಯವರಿಗೆ ಜಾಣ್ಮೆಯೂ ಚಾಲಾಕಿತನವೂ ಇದೆ. ಬಿದ್ದವರನ್ನು ಎಬ್ಬಿಸಿ ಮಾರ್ಗವನ್ನು ತೋರಿಸಿ ಅವರ ಜೀವನ ಶೈಲಿಯನ್ನು ತಿದ್ದುವಂಥವರು. ಗುರು 9ರಲ್ಲಿ ಶನಿ 5ರಲ್ಲಿದ್ದು, ನೀವು ನಿಮ್ಮ ಸುತ್ತಮುತ್ತಲಿನವರೂ ಚೆನ್ನಾಗಿರುವ ಸಮಯ. ನಿತ್ಯವೂ ದೈವ ಪ್ರಾರ್ಥನೆ ಅಗತ್ಯ. ವೆಂಕಟೇಶ್ವರನನ್ನು ಪೂಜಿಸಿ, ಜಗತ್ತೇ ನಿಮ್ಮದಾಗುತ್ತದೆ.
ವೃಶ್ಚಿಕ: ಸೂರ್ಯೋದಯಕ್ಕೂ ಮುನ್ನ, ಸೂರ್ಯನ ಕಿರಣ ಅಗ್ನಿಯ ಬಣ್ಣ, ಕಿತ್ತಲೆ ಹಣ್ಣಿನ ಬಣ್ಣದಲ್ಲಿರುತ್ತದೆ. ಅದನ್ನು ನೋಡುವುದೇ ಒಂದು ಭಾಗ್ಯ. ಆ ನಿಟ್ಟಿನಲ್ಲಿ ನಿಮಗೆ ಜೀವನದಲ್ಲಿ ಬೆಳಕು ಬರುತ್ತಿದೆ ಎಂಬುದೇ ಅರ್ಥ. ನಿಮ್ಮ ಶಿಸ್ತು, ನಿಯಮ, ಮುನ್ನೋಟ ಹಾಗೂ ಆಗುಹೋಗುಗಳನ್ನು ಸರಿಪಡಿಸಿಕೊಂಡು ಎಲ್ಲದರ ಮೇಲೆ ಗಮನ ಹರಿಸಿದರೆ ಬರುವ ದಿನಗಳಲ್ಲಿ ಒಳ್ಳೆಯ ದಿನಗಳನ್ನು ಕಾಣುತ್ತೀರಿ.
ಧನು: ಪಂಚಮಕ್ಕೆ ಸೂರ್ಯನು ಏ.14ನೇ ತಾರೀಖು ಬರುತ್ತಾನೆ. ಅಲ್ಲಿಯವರೆಗೂ ನೀವು ನಿಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಪಂಚಮ ಸೂರ್ಯ, ಸಪ್ತಮದಲ್ಲಿ ಗುರು ವಿಶೇಷವಾದ ಸೂಕ್ತ ಮಾರ್ಗದಲ್ಲಿ ನಿಮ್ಮನ್ನು ನಡೆಸಿ, ಪೂರ್ವ ಪುಣ್ಯಕ್ಕೆ ನೀರು, ಗೊಬ್ಬರ ಹಾಕಿ ಲಾಭವನ್ನು ನೀಡುತ್ತಾನೆ. ಓಂಶ್ರೀ ಹ್ರೀಂ ರಂ ರಾಮಾಯಾ ನಮಃ ಎಂಬ ನಾಮವು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
ಮಕರ: ಮೂರರಲ್ಲಿ ಶನಿ ಒಬ್ಬನಿದ್ದರೆ ಸಾಕು, ಯಾವ ಒಲವೂ ಬೇಡ, ದೇವ ಮಹಾದೇವರೇ ನಿಮ್ಮನ್ನು ಕಾಪಾಡಿ ಇಷ್ಟಾರ್ಥ ಪೂರೈಸಿ ಬೇಕಾದ್ದನ್ನು ಕೊಟ್ಟು ಸಲಹುತ್ತಾರೆ. ಜನ್ಮ ಕೊಟ್ಟ ತಂದೆ-ತಾಯಿ ಮಹಾಗುರು ಎಂದು ಶಾಸ್ತ್ರಗಳು ಸಾರುತ್ತವೆ. ಅದಾದನಂತರ ಅರಿವನ್ನು ಜ್ಞಾನವನ್ನು ವಿದ್ಯೆಯನ್ನು ಕೊಡುವವರು ಗುರುಗಳು. ಇಂತಹ ಗುರುಗಳನ್ನು ಪೂಜಿಸಿದರೆ ಆಕಾಶವನ್ನೇ ಮುಟ್ಟಬಹುದು.
ಕುಂಭ: ಈ ರಾಶಿಯಲ್ಲೇ ಬುಧ-ರಾಹುವಿದ್ದು, ದ್ವಿತೀಯದಲ್ಲಿ ರವಿ-ಶನಿ -ಕುಜರು ಸೇರಿದ್ದಾರೆ. ವ್ಯಾಪಾರ- ವ್ಯವಹಾರದಲ್ಲಿ ಒತ್ತಡವಿದ್ದು, ಎಲ್ಲಿಯೂ ನಿಮ್ಮ ಹಣವನ್ನು ಹೂಡದಿರಿ. ಎಚ್ಚರಿಕೆಯಿಂದ ಮುಂದೆ ಸಾಗಿದರೆ ಶನಿಯು ಮೇಷ ರಾಶಿಗೆ ಹೋದ ನಂತರ ಒಳ್ಳೆಯ ದಿನಗಳನ್ನು ಕಾಣಬಹುದು. ಸಾಯಂಕಾಲದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಮೀನ: ರವಿ-ಶನಿ, ಕುಜರು ಒಂದೆ ಮನೆಯಲ್ಲಿದ್ದು, ಈ ಸಮಯದಲ್ಲಿ ಸಾಮಾನ್ಯ ವಾಗಿ ಭಯ-ಭೀತಿಯು ಉಂಟಾಗುತ್ತದೆ. ಗುರುವೇ ಅಧಿಪತಿಯಾದ ರಾಶಿಯವರಾದ ನೀವು 142 ಕೋಟಿ ಜನಕ್ಕೆ ಆರೋಗ್ಯವನ್ನು ಕೊಟ್ಟು, ದೇವರು ಶಾಂತಿ ಕೊಡಲಿ ಎಂಬ ಪ್ರಾರ್ಥನೆ ಇಟ್ಟರೆ ನಿಮ್ಮ ಗುರುವೇ ನಿಮ್ಮನ್ನೂ ಕಾಯುತ್ತಾ ಮುಂದೆ ಕೊಂಡೊಯ್ಯುತ್ತದೆ. ಅನ್ಯರಿಗಾಗಿ ಪ್ರಾರ್ಥನೆ ಮಾಡುವುದು ಮಾನವ ಧರ್ಮ ಎಂಬುದು ನೆನಪಿರಲಿ.