ಜ್ಯೋತಿಷ್ಯ

ವಾರಭವಿಷ್ಯ: ಈ ರಾಶಿಯವರು ಗುರುವಿನಿಂದ ಅಡೆ ತಡೆ ಸರಿ ಹೋಗಿ ದೈವ ಕೃಪೆಯಿಂದ ಕೆಲಸಗಳು ಸುಸ್ಥಿತಿ ಮುಟ್ಟುತ್ತವೆ

ಮೇಷ: ಮೇಷ ರಾಶಿಯವರಿಗೆ ಶನಿಯು ವಕ್ರದಲ್ಲಿದ್ದು, ಉತ್ತರಾಭಾದ್ರ ನಕ್ಷತ್ರದಲ್ಲಿ ರಾಹು, 6ರಲ್ಲಿ ಕೇತು ಮನುಷ್ಯನ ಜೀವನದಲ್ಲಿ ಆಗಲಿ, ದೇಶದಲ್ಲಿ ಆಗಲಿ, ಎಂದೂ ಕಂಡರಿಯದ ವಿಚಿತ್ರ ಘಟನೆಗಳು ಜರುಗಿ ಮನಸ್ಸನ್ನು ಹಾಳು ಮಾಡಿ ದಿಕ್ಕು ತಪ್ಪಿಸುತ್ತವೆ. ವಕ್ರಿ ಗುರುವು ಇರುವುದರಿಂದ ಗುರುವಿಗಾಗಿ ವಿಶೇಷ ಪ್ರಾರ್ಥನೆ ಇರಿಸಿ. ಮೇಷಾಧಿಪತಿ ಕುಜನಿಗೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಒಳ್ಳೆಯ ಘಟನೆ ನಡೆದು ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ.

ವೃಷಭ: ವೃಷಭದಲ್ಲಿ ಗುರು ಇದ್ದು ವಕ್ರಿಯಾಗಿರುವುದರಿಂದ ದ್ವಾದಶದ ಫಲ ಬಂದು ನಿಮಗೆ ನೀವೇ ಶತ್ರುಗಳಾಗಿ ಸೋಲನ್ನು ಅಶಾಂತಿಯನ್ನು ಅನುಭವಿಸುವ ಸಮಯ. ಮೇಷದಲ್ಲಿ ಕುಜ ಇರುವುದರಿಂದ ಮಾಡುವ ಕೆಲಸಗಳಲ್ಲಿ ಎಚ್ಚರಿಕೆಯಿಂದಇರುವುದು ಒಳ್ಳೆಯದು.

ಮಿಥುನ: ವಕ್ರ ಗುರು ಏಕಾದಶಕ್ಕೆ ಬಂದಿರುವುದರಿಂದ ಗುರುವಿನಿಂದ ಅಡೆ ತಡೆ ಸರಿ ಹೋಗಿ ದೈವ ಕೃಪೆಯಿಂದ ಕೆಲಸಗಳು ಸುಸ್ಥಿತಿ ಮುಟ್ಟುತ್ತವೆ. ದೈವ ಪ್ರಾರ್ಥನೆ ಮನುಷ್ಯ ಪ್ರಯತ್ನ ಇಲ್ಲದೇ ಯಾವುದೂ ಜರುಗದು. ದತ್ತಾತ್ರೇಯನನ್ನು ಪ್ರಾರ್ಥಿಸಿ.

ಕಟಕ: ಗುರುವು ದಶಮಕ್ಕೆ ಹೋಗಿ ವಕ್ರ ಗತಿಯಲ್ಲಿದ್ದು ಕೆಡಕು ಅಸಂತೋಷ ಘಟಿಸದು. ಜೀವನವು ಸಮತೋಲನವಾಗಿದ್ದು ಗುರು ಉಚ್ಚ ಸ್ಥಾನದಲ್ಲಿ ಶುಕ್ರ ಇರುವುದರಿಂದ ಕೆಲವೊಂದು ವಿಚಾರದಲ್ಲಿ ಆಗಬೇಕಾದ ಕೆಲಸ ಆಗಿ ಮನಸ್ಸಿಗೆ ಹಿತವು ಉಂಟಾಗುತ್ತದೆ. ಶಿವ ಪ್ರಾರ್ಥನೆ ಇರಲಿ. ಈಶ್ವರ ಅಷ್ಟೋತ್ತರ ಪಠಿಸಿ.

ಸಿಂಹ: ಈ ರಾಶಿಯ ಗುಣಕ್ಕೆ ಅನುಗುಣವಾಗಿ ರಾಶ್ಯಾಧಿಪತಿ ಸೂರ್ಯನ ಮನೆಯಲ್ಲಿ ಬುಧನು ಇರುವುದರಿಂದ ವಕ್ರ ಗುರುವಿನ ಸ್ಥಾನದ ಫಲವನ್ನೂ ಸುಖವನ್ನು, ಕಾರ್ಯ ಸಿದ್ಧಿಗೆ ಬೇಕಾದ ಬುದ್ಧಿ ಕೊಟ್ಟು ಹರಸುತ್ತಾನೆ. ಸೂರ್ಯ ನಮಸ್ಕಾರ ಮಾಡಿರಿ. ಸೂರ್ಯ ಕವಚ ಪಠಿಸಿ.

ಕನ್ಯಾ: ವಕ್ರ ಗತಿಯಲ್ಲಿ ಕನ್ಯಾ ರಾಶಿಗೆ ಗುರು ಅಷ್ಟಮಕ್ಕೆ ಬಂದು ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿರುತ್ತವೆೆ. ಆದರೆ ಶನಿ 6ರಲ್ಲಿ ಇದ್ದು ಸಮತೋಲನ ನೀಡಿ ಬೇಕಾದ ವರ ನೀಡಿ ಕೈ ಹಿಡಿದು ನಡೆಸುತ್ತಾನೆ. ಮಾತನ್ನು ಕೊಟ್ಟು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಮನುಷ್ಯನಿಗೆ ನಾಲಿಗೆಯೇ ಶತ್ರು. ಇದನ್ನು ಅರಿತು ಜೀವನದಲ್ಲಿ ಎಚ್ಚರಿಕೆಯಿಂದ ಸಾಗಬೇಕು. ನರಸಿಂಹನನ್ನು ಪ್ರಾರ್ಥಿಸಿ ಪೂಜಿಸಿ.

ತುಲಾ: ರಾಶ್ಯಾಧಿಪತಿ ಗುರುವಿನ ಉಚ್ಚ ಸ್ಥಾನ ತಲುಪಿದ್ದಾನೆ. 7 ದಿನಗಳ ಕಾಲ ನಿಮ್ಮ ಕಾರ್ಯ ವೈಖರಿ ಬದಲಿಸಿಕೊಂಡು ವ್ಯಾಪಾರ ವ್ಯವಹಾರಗಳಲ್ಲಿ ಸುಧಾರಣೆ ತರಲು ಅತ್ಯುತ್ತಮ ಕಾಲ. ನೀವು ಪಂಚಮದಲ್ಲಿದ್ದರೂ ತುಲಾ ರಾಶಿಯು ಶನಿಯ ಉಚ್ಚ ಸ್ಥಾನವಾಗಿರುವುದರಿಂದ ಯಾವುದೇ ಕೆಡುಕು ಉಂಟಾಗದು. ದುರ್ಗಾಸ್ತವವನ್ನು ಪಾರಾಯಣ ಮಾಡಿದರೆ ಎಲ್ಲಾ ಕಷ್ಟಗಳಿಂದ ಪಾರಾಗಬಹುದು.

ವೃಶ್ಚಿಕ:  ಸಪ್ತಮ ಗುರು ವಕ್ರಿಯಾಗಿದ್ದು ಮನುಷ್ಯನು ತನ್ನ ವಕ್ರ ಮನಸನ್ನು ತಿದ್ದಿಕೊಂಡು ಸಮತೋಲನ ಮನಸ್ಸಿಗಾಗಿ ದೈವವನ್ನು ಪ್ರಾರ್ಥಿಸಬೇಕು. ಕುಜನು ಗುರುವಿನಜೊತೆಗೆ ಇರುವುದರಿಂದ ಕೆಲಸ ಕಾರ್ಯಗಳು ಅಂದುಕೊಂಡಂತೆ ನಡೆಯಲು ಸುಬ್ರಹ್ಮಣ್ಯನ ಕೃಪೆಗಾಗಿ ಬೇಡಿ ಬೇಕಾದ್ದನ್ನು ಪಡೆದುಕೊಳ್ಳಿ.

ಧನಸ್ಸು: ಪಂಚಮ ಗುರು ವಕ್ರ ಸ್ಥಿತಿಯಲ್ಲಿ ಇದ್ದು ವಕ್ರ ಬುದ್ಧಿ ಬಿಟ್ಟು ಸಕಾರಾತ್ಮಕ ಚಿಂತನೆ ಇರಿಸಿಕೊಂಡರೆ ಸಾಕ್ಷಾತ್ ಗುರುವೇ ನಿಮ್ಮನ್ನು ಕಾಪಾಡುತ್ತಾನೆ. ಗುರುವನ್ನೂ ಶಿವ ವಿಷ್ಣು ರೂಪದಲ್ಲಿ ಪೂಜಿಸಿ. ಶನಿಯು 3ನೇ ಮನೆಯಲ್ಲಿ ಇರುವುದರಿಂದ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಗುರುವಿನಲ್ಲಿ ನಂಬಿಕೆ ಇಟ್ಟು ಮುಂದುವರೆಯಿರಿ.

ಮಕರ: ವಕ್ರ ಗುರು, ಸ್ವಕ್ಷೇತ್ರದಲ್ಲಿ ಶನಿ ಇರುವುದರಿಂದ ಸ್ವಲ್ಪ ಕಾಲ ಯೋಚಿಸಿ ಕೆಲಸಗಳಲ್ಲಿ ಮುಂದೆ ಸಾಗಬೇಕು. ವಾಹನಗಳಲ್ಲಿ ಯಂತ್ರದೋಷ ಉಂಟಾಗಿ ಆಕಾಶದಲ್ಲಿ ಹಾರುವ ವಿಮಾನವಾಗಲಿ, ಕಂಬಿಯ ಮೇಲೆ ಚಲಿಸುವ ರೈಲು ಇರಲಿ, ಮೊದಲು ದೈವವನ್ನು ಪ್ರಾರ್ಥಿಸಿ ಎಚ್ಚರಿಕೆಯಿಂದ ಪ್ರಯಾಣ ಬೆಳೆಸಿ. ನೀವು ಸಾವಧಾನವಾಗಿ ಸುಖವನ್ನು ಅನುಭವಿಸಲು ಶನಿ ಸಹಿತ ಗುರು ಅಷ್ಟೋತ್ತರ ಪಠಿಸಿ.

ಕುಂಭ: ಕುಂಭದಲ್ಲಿ ಶನಿ ಇದ್ದು 3ನೇ ಮನೆಯ ಫಲ ಕೊಡಲು ಗುರುವು ಇದ್ದಾನೆ. ದ್ವಿತೀಯದಲ್ಲಿ ರಾಹು ಇರುವುದರಿಂದ ಮನೆಯಲ್ಲಿ ಅಶಾಂತಿ, ಮನಸಿನ ಗುದ್ದಾಟ ನಡೆದು ಮಾನಸಿಕವಾಗಿ ಕುಗ್ಗುತ್ತೀರಿ. ದೈವ ಚಿಂತನೆಯಿಂದ ಚಿತ್ತವನ್ನು ಇಟ್ಟುಕೊಂಡು ಸಾಗಿರಿ. ಶನಿ ಪ್ರಾರ್ಥನೆ ಮುಂದುವರಿಸಿ.

ಮೀನ: ಲಗ್ನದಲ್ಲಿ ರಾಹು ಇದ್ದು ವಕ್ರಿಗುರು 2ಕ್ಕೆ ಬರುವುದರಿಂದ ಕೌಟುಂಬಿಕ ವಿಚಾರ ಸರಿ ಪಡಿಸಿಕೊಳ್ಳುವ ಕಾಲವಿದು. ಮನಸನ್ನು ಪೂರ್ವ ನಿರ್ಣಯ ಮಾಡಿ ರಾಹುವಿನಿಂದ ಉಂಟಾಗುವ ವಿಷವನ್ನು ವಿಷಯಕ್ಕೆ ಬೆರೆಸದೆ ದೃಢ ಮನಸ್ಸಿನಿಂದ ಸ್ಥಿರವಾದ ಭಕ್ತಿ ಮಾಡಿ. ರಾಹು ಮೀನ ರಾಶಿಯಲ್ಲಿ ಇರುವವರೆಗೂ ಶಂಕುಲ ನಾಗನ ಅನುಗ್ರಹವು ಬೇಕಾಗಿಯೇ ಬೇಕಾಗುವುದು. ಸಾಧ್ಯವಾದಲ್ಲಿ ಸರ್ಪ ಶಾಂತಿ ಮಾಡಿ ವಿಶೇಷ ಅದೃಷ್ಟ ಪಡೆದುಕೊಳ್ಳಿ.