ಜ್ಯೋತಿಷ್ಯ

ವಾರಭವಿಷ್ಯ| ಈ ರಾಶಿಯವರ ಕೆಲಸಗಳಿಗೆ ಜನ್ಮ ಶನಿ ಹಾಗೂ ವಕ್ರೀಗುರುವಿನ ತಡೆ ಇದೆ..

ಮೇಷ ರಾಶಿ- ಅಧಿಪತಿ ಕುಜ

ಏಕಾದಶದ ಮಂಗಳ ಹಾಗೂ ದಶಮ ಶನಿ ನಿಮ್ಮ ರಾಶಿಯ ಮೇಲೆ ಪೂರ್ಣ ಪ್ರಭಾವ ಬೀರುವುದು. ಯಾವುದೇ ರೀತಿಯ ಧೋರಣೆ, ಉದಾಸೀನತೆ ಬೇಡ. ನಿಮ್ಮ ಕೆಲಸದಲ್ಲಿ ಜಾಗರೂಕರಾಗಿದ್ದಲ್ಲಿ ಶುಕ್ರ ಭ್ರಮಣವು ಫಲ ನೀಡುವುದು. ಆಸ್ತಿಯ ವ್ಯವಹಾರ ಪೂರ್ಣಗೊಂಡು ಸೂರ್ಯ ಗ್ರಹಣದ ಹಾಗೂ ಚಂದ್ರನಿಂದ ಸಮೀಪದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು. ವಿದ್ಯಾರ್ಥಿಗಳು ಸ್ನೇಹಿತರನ್ನು ನಂಬದೆ ವಿದ್ಯಾರ್ಜನೆಯಲ್ಲಿ ತೊಡಗಿದರೆ ಯಶಸ್ಸು ನಿಮ್ಮದು. ಶಾರದೆಯನ್ನು ಪೂಜಿಸಿ ಶೃಂಗೇರಿ ಶ್ರೀ ಗುರುದ್ವಯರನ್ನು ಪ್ರಾರ್ಥಿಸಿ. ದರ್ಶನ ಪಡೆಯಿರಿ.

ವೃಷಭ ರಾಶಿ- ಅಧಿಪತಿ ಶುಕ್ರ.

ಈ ಮಾಸದ ಪ್ರಾರಂಭ ಕೆಲವೊಂದು ನೈಸರ್ಗಿಕ ಅಡ್ಡಿಗಳಿಂದಲೂ ಮಾನವೀಯ ಸಂಬಂಧಗಳಿಂದ ತೊಂದರೆ ಕಂಡಿದೆ. ಸೂರ್ಯಗ್ರಹಣವು ಕೆಲವೊಂದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಯಾರನ್ನು ಹಿತೈಷಿಗಳೆಂದು ಪರಿಗಣಿಸುವಿರೋ ಅವರಿಂದ ಮನಸ್ಸಿಗೆ ನೋವು ಉಂಟು. ಏಳು - ಬೀಳುಗಳ ಸಂಖ್ಯಾಶಾಸ್ತ್ರ ಅನುಸರಿಸಿ ಕಾರ್ಯದಲ್ಲಿ ತೊಡಗಿ. ಶುಕ್ರ ಅಸ್ತದಿಂದ ಧನ ದೌರ್ಬಲ್ಯ ಕಾಡುತ್ತದೆ. ಕಾಂತಿ ಹೀನರನ್ನಾಗಿ ಮಾಡುತ್ತದೆ. ಬೆಲ್ಲ. ಹುರಿಕಡಲೆ ದಾನ ಮಾಡಿ ಕೊಲ್ಹಾಪುರದ ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ.

ಮಿಥುನ ರಾಶಿ - ಅಧಿಪತಿ ಬುಧ

ಗ್ರಹಗಳ ಚಲನಗಳು ಶುಕ್ರ ಅಸ್ತ, ಅಷ್ಟಮ ಶನಿ, ಗುರು ನಿಮ್ಮ ಸಮಸ್ಯೆಗಳನ್ನು ಉಲ್ಬಣ ಮಾಡಿದೆ. ಮನೆಯಲ್ಲಿ ಹಿರಿಯರಿಗೆ ಆರೋಗ್ಯದ ಏರುಪೇರಿನಿಂದ ನಿಮಗೆ ಒತ್ತಡ ಉಂಟಾಗುತ್ತದೆ. ಮಹಾವಿಷ್ಣು ಸ್ವರೂಪಿ ಧನ್ವಂತರಿ ದೇವತೆಯನ್ನು ಪ್ರಾರ್ಥಿಸಿ. ಸುಖವನ್ನು ಕಾಣಿ. ಜೂನ್ 29 ರಿಂದ ಸಪ್ತಮ ಗುರು ನಿಮ್ಮ ಕಾಲವನ್ನು, ಅದೃಷ್ಟವನ್ನು ಬದಲಾಯಿಸುತ್ತಾನೆ.

ಕಟಕ ರಾಶಿ- ಅಧಿಪತಿ ಚಂದ್ರ

ಜಗದ ರಕ್ಷಕರು ಪಾರ್ವತಿ ಪರಮೇಶ್ವರರು ಎಂಬಂತೆ ನಿಮ್ಮ ಧ್ಯಾನ, ನಿಮ್ಮ ನಡೆ - ನುಡಿ ಎಲ್ಲವೂ ಪರಮೇಶ್ವರನ ಅನುಗ್ರಹದಂತೆ ಪ್ರೀತಿಯಿಂದ ಕೂಡಿರಲಿ. ಗೌರಿಶಂಕರನು ಚಂದ್ರನನ್ನು ಶಿರದಲ್ಲಿರಿಸಿದ್ದಾನೆ. ಎಚ್ಚರವಾಗಿ ನಡೆದಲ್ಲಿ ಮುಂದೆ ಕೀರ್ತಿ ಯಶಸ್ಸು ಮಾಡುವ ಕಾರ್ಯದಲ್ಲಿ ವಿಜಯವನ್ನು. ಆನಂದವನ್ನು ಕಾಣುವಿರಿ. ಸೋಮವಾರ ಪ್ರದೋಷ ಕಾಲದಲ್ಲಿ ಈಶ್ವರನನ್ನು ಪೂಜಿಸಿ. ಪ್ರಾರ್ಥಿಸಿ.

ಸಿಂಹ ರಾಶಿ- ಅಧಿಪತಿ ರವಿ

ಷಷ್ಠ ಗುರು. ಧನವಿಲ್ಲದೆ ಜೀವನವಿಲ್ಲ. ಸೂರ್ಯೋದಯವಾಗದೆ ಕತ್ತಲು ಸರಿಯವುದಿಲ್ಲ. ತಾಳಿದವನು ಬಾಳಿಯಾನು ಎಂಬಂತೆ ಜೂನ್ 21 ರ ಗ್ರಹಣದ ನಂತರ ನಿರ್ದಿಷ್ಟವಾದ ಶುಭಫಲಗಳು ನಿಮ್ಮನ್ನು ಹಸನ್ಮುಖಿಯಾಗಿ ಹಾಗೂ ಹೆಚ್ಚಿನ ಕಾರ್ಯಗಳು ಕೈಗೂಡುವುದರಲ್ಲಿ ಸಂದೇಹವಿಲ್ಲ. ಸೂರ್ಯನಾರಾಯಣನ ಪ್ರಾರ್ಥನೆಯೇ ನಿಮ್ಮ ಪರಮ ಧ್ಯೇಯವಾಗಿರಲಿ. ನಿಂತುಹೋಗಿರುವ ಕಾರ್ಯಗಳು ಮುನ್ನಡೆಯಲು ನಾರಾಯಣನನ್ನು, ಯೋಗಾನರಸಿಂಹನನ್ನು ಧ್ಯಾನ ಮಾಡಿ. ಸುಖ- ಶಾಂತಿಯಿರಲಿ.

ಕನ್ಯಾರಾಶಿ - ಅಧಿಪತಿ ಬುಧ

ದುಃಖದಿಂದ ಹೊರಬರಬೇಕಾದರೆ ದೈವ ಸಹಾಯ ಬೇಕು. ಅನಾರೋಗ್ಯದಿಂದ ದಾಟಬೇಕಾದರೆ ವೈದ್ಯರ ಸಲಹೆ ಬೇಕು. ನಿಮಗೆ ನಿಮ್ಮಲ್ಲಿ ನಂಬಿಕೆ ಇಲ್ಲ. ಬೇರೆಯವರು ಹೇಳಿದ್ದಕ್ಕೆ ಬೆಲೆ ಇಲ್ಲ. ಅಶಾಂತ ಜೀವನ ನಡೆಸುವವರಿಗೆ ಅರಣ್ಯವು ದೂರವಿರುವುದಿಲ್ಲ.

ಪಂಚಮ ಶನಿಯಲ್ಲಿ ಕಾಲವನ್ನು ಬದಲಾಯಿಸಿ ಆರೋಗ್ಯ, ಮನಃಶಾಂತಿಯನ್ನು ಕೊಡುವವನು ಶನೈಶ್ಚರ. ನಿತ್ಯವೂ ಪ್ರಾತಃಕಾಲದಲ್ಲಿ ನವಗ್ರಹ ಸ್ತೋತ್ರವನ್ನು ಪಠಿಸಿ. ಇದ್ದದ್ದಕ್ಕೆ ತೃಪ್ತಿಯಿರಲಿ. ಬಯಸಿದ್ದೆಲ್ಲಾ ಸಿಗುವುದಿಲ್ಲ ಎಂಬುದು ಗೊತ್ತಿರಲಿ. ದೈವಮಾರ್ಗವೇ ಜಯಕ್ಕೆ ದಾರಿ.

ತುಲಾ ರಾಶಿ- ಅಧಿಪತಿ ಶುಕ್ರ

ನಿತ್ಯವೂ ಅಮಾವಾಸ್ಯೆ- ಹುಣ್ಣಿಮೆ ಬರುವುದಿಲ್ಲ. ಚತುರ್ಥ ಶನಿ ಅರ್ಧಭಾಗದಲ್ಲಿ ಯಶಸ್ಸು, ತೃಪ್ತಿಯನ್ನು ಕೊಟ್ಟು ಯಾರೋ ಮಾಡಿದ ತಪ್ಪಿಗೆ ನಿಮ್ಮನ್ನು ಗುರಿ ಮಾಡಿಸಿ ಚಿಂತೆ ತಂದೊಡ್ಡುತ್ತಾನೆ. ದುರ್ಗಾ ಪ್ರಾರ್ಥನಂ, ಯಶಂ, ಸುಖಂ, ಸಕಲ ಸೌಭಾಗ್ಯ ಮೇವಚ, ದುರ್ಗೇ ನಾನಾಲಂಕಾರ ಭೂಷಿತೆ ಸ್ವರೂಪದಲ್ಲಿ ಸ್ಮರಣೆ ಮಾತ್ರದಲ್ಲಿ ನಿಮಗೆ ಜಯವನ್ನು ತಂದುಕೊಡುತ್ತಾಳೆ.

ದೇವರ ಪ್ರಾರ್ಥನೆ ಇರಲಿ.

ವೃಶ್ಚಿಕ ರಾಶಿ- ಅಧಿಪತಿ ಕುಜ.

ತೃತೀಯ ಶನಿಯು ಈಗಾಗಲೇ ನಿಮ್ಮ ಕಲ್ಪನೆ, ಶ್ರಮದಿಂದ ಮಾಡಿದ ಕೆಲಸ ಪೂರ್ಣಗೊಂಡು ಶ್ರಮಕ್ಕೆ ತಕ್ಕ ಫಲ ಜೂನ್ 29 ರ ನಂತರ ನಿಮ್ಮ ಕೈ ಸೇರಲಿದೆ. ಗೋಧಿ, ಹುರಳಿ, ಅಕ್ಕಿಯನ್ನು ದಾನ ಮಾಡಿ ಬಿಳಿ ವಸ್ತ್ರವನ್ನು ಯೋಗ್ಯರಿಗೆ ಕೊಟ್ಟು ಸ್ವಚ್ಛವಾಗಿರಿ. ಗುರು ಸ್ಮರಣ ಮಾತ್ರೇಣ ಲಭ್ಯತೆ ಸರ್ವಸುಖಂ, ಧನಂ, ಯಶೋಕೀರ್ತಿ ಲಾಭಂ.

ಧನಸ್ಸು ರಾಶಿ- ಅಧಿಪತಿ ಗುರು

ದ್ವಿತೀಯ ಶನಿಯು ಮಿಂಚಿನ ವೇಗದಲ್ಲಿ ಹೊಳಪನ್ನು ತೋರಿಸಿ ಮಾಯವಾಗುತ್ತಾನೆ. ಕಾರಣ ಮೋಹವನ್ನು ಸೃಷ್ಟಿಸಿರುವ ಸಾಕ್ಷಾತ್ ಮಹಾವಿಷ್ಣು. ಜೀವನದ ಮುಂದಿನ ದೃಷ್ಟಿಕೋನವನ್ನು ಬದಲಿಸಬೇಡಿ. ನಿರಾಸೆಗಳು ಸಹಜ. ಆದರೆ ಧ್ಯೇಯ, ಗುರಿ, ನಿಮ್ಮದಾಗಿರಲಿ. ಬಾಣವನ್ನು ಗುರಿಯಿಡದೆ ಹೂಡಬಾರದು. ನಿಮ್ಮ ಬಹುಮುಖ ಪ್ರತಿಭೆ ಉಜ್ವಲಿಸಿ ಕಾಪಾಡುವನು ಅತ್ಯಂತ ಶಕ್ತಿಶಾಲಿ ಮಾನಸ ರೂಪದ ಶ್ರೀರಾಮಚಂದ್ರ. ರಾಮತಾರಕ ಜಪ ಮಾಡಿ ಎಲ್ಲರನ್ನೂ ಎಲ್ಲವನ್ನೂ ಜಯಿಸಿ.

ಮಕರ ರಾಶಿ- ಅಧಿಪತಿ ಶನಿ

ಜನ್ಮ ಶನಿಯು ಹಾಗೂ ವಕ್ರೀಗುರು ಸಂಯೋಗದಿಂದ ತಡೆಯಿದ್ದರೂ ಕೆಲಸ ಕಾರ್ಯಗಳು ದೈವಬಲದಿಂದ ಮಂದಗತಿಯಿಂದ ಸಾಗುತ್ತಿದೆ. ಶನಿಯ ಪಿಪ್ಪಲ ಸ್ತೋತ್ರ (ಕೋಣಸ್ಥಃ ಪಿಗಲೋಬಭ್ರುಃ ಕೃಷ್ಣೋರೌದ್ರಂತಕೋ ಯಮಃ ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತ) ತಿಲಾ ದಾನ, ಹೋಮ, ಮಾಡಿದ ಪಾಪಗಳನ್ನು ಪರಿಹರಿಸುತ್ತದೆ. ನಿಮ್ಮಿಂದ ನೊಂದವರು ಅತ್ಯಂತ ದುಃಖಿಗಳಾಗಿ ನಿಮಗೆ ದುಃಖವನ್ನು ತಂದೊಡ್ಡುತ್ತಾರೆ. ಶ್ರೀಶೈಲ ಮಲ್ಲಿಕಾರ್ಜುನನನ್ನು ಮೊರೆಹೋಗಿ ಶನಿವಾರ ಏಕಭುಕ್ತವನ್ನು ಮಾಡಿ.

ಕುಂಭರಾಶಿ- ಅಧಿಪತಿ ಶನಿ

ಶನಿಯ ಜತೆ ಅಂಗಾರಕನ ಒಡನಾಟ, ಪಾಪಗ್ರಹಗಳ ಸಂಯೋಜಿಸಿ ಷಣ್ಮುಖಗಳುಳ್ಳ ಆನಂದ ಸ್ವರೂಪನು, ಜ್ಞಾನದಾತನೂ ಭಕ್ತರ ಕಷ್ಟವನ್ನು ಹೋಗಲಾಡಿಸುವ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ ತಮಿಳುನಾಡಿನ ಆರು ಕ್ಷೇತ್ರಗಳನ್ನು (ಸುಬ್ರಹ್ಮಣ್ಯ ಕ್ಷೇತ್ರವನ್ನು) ಪ್ರಾರ್ಥಿಸಿ ಸ್ಕಂದಷಷ್ಠಿ ವ್ರತವನ್ನು ಮಾಡಿ ಬಯಸಿದ್ದನ್ನು ಪಡೆದುಕೊಳ್ಳಿ. ದ್ವಾದಶ ಶನಿಯ ಪ್ರಭಾವದಿಂದ ಹೊರಬನ್ನಿ. ಗುರುಕಟಾಕ್ಷವಿರಲಿ. ಶಿವ ಸ್ವರೂಪಿ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ.

ಮೀನರಾಶಿ- ಅಧಿಪತಿ ಗುರು

ಹನ್ನೊಂದರಲ್ಲಿ ಶನಿಯಿದ್ದು ಕೇಳವುದು, ಮಾಡುವುದು ಏನಿದೆ ಎಲ್ಲವೂ ಅನುಭವಿಸುವುದೇ. ವಿನಾಕಾರಣ ದುಃಖದ ಮೊಗವನ್ನು ಬಿಟ್ಟು, ದೈವೋತ್ಸಾಹದಿಂದ ನೀವೂ ಬದುಕಿ, ಉಳಿದುದ್ದನ್ನು ಪರೋಪಕಾರದಲ್ಲಿ ತೊಡಗಿಸಿಕೊಳ್ಳಿ. ವೃಥಾ ದ್ವೇಷದಲ್ಲಿ ವಿಚಾರ- ವಿನಿಮಯ ಮಾಡದೆ, ಕಂಡವರ ಬಗ್ಗೆ ಹಗುರವಾದ ಮಾತುಗಳು ಬೇಡ. ಸರ್ವಾಂತರ್ಯಾಮಿಯಾದ ರಾಶಿ ಅಧಿಪತಿ ಗುರು ಎಲ್ಲವನ್ನೂ ನೋಡುತ್ತಿರುತ್ತಾನೆ. ಎಚ್ಚರವಾಗಿರಿ.