ಜ್ಯೋತಿಷ್ಯ 
ಜ್ಯೋತಿಷ್ಯ

ವಾರ ಭವಿಷ್ಯ: ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗಲಿದೆ

ಮೇಷ

ಹೊಸ ವೃತ್ತಿ ಅವಕಾಶಗಳು ನಿಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿವೆ. ಕಚೇರಿಯಲ್ಲಿ ನಿಮ್ಮ ಸೃಜನಶೀಲ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಳೆಯ ಹೂಡಿಕೆಗಳು ಸಕಾಲಿಕ ಲಾಭ ತಂದುಕೊಡಲಿದ್ದು ಮನೆಯಲ್ಲಿ ಸಂಭ್ರಮದ ಮಾತುಕತೆಗಳು ನಡೆಯಲಿವೆ. ಸಂಗಾತಿಯೊಂದಿಗೆ ಸಣ್ಣ ಪ್ರವಾಸಕ್ಕೆ ಮನಸ್ಸಾಗುವುದು. ಆರೋಗ್ಯ ಚೇತರಿಕೆಯ ಹಾದಿಯಲ್ಲಿರಲಿದೆ. ಒಟ್ಟಾರೆ ಉತ್ಸಾಹಭರಿತ ವಾರ. ಹೊಸ ಅವಕಾಶಗಳು ಸಿಗಲಿವೆ.

ವೃಷಭ

ವ್ಯಾಪಾರ ವಿಸ್ತರಣೆಗೆ ಹೊಸ ದಾರಿಗಳು ತೆರೆದುಕೊಳ್ಳಲಿವೆ. ದೀರ್ಘಕಾಲದ ಆಸ್ತಿಯ ಅಡ್ಡಿಗಳಿಗೆ ಶುಭ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರ್ಥಿಕವಾಗಿ ಸಾಲದ ಹೊರೆ ಕಡಿಮೆಯಾಗುವ ಸೂಚನೆ ಇದೆ. ಹಿರಿಯರ ಆಶೀರ್ವಾದದೊಂದಿಗೆ ಪ್ರಮುಖ ಹೆಜ್ಜೆ ಇಡುವಿರಿ. ಆರೋಗ್ಯದ ಬಗ್ಗೆ ಕೊಂಚ ಗಮನವಿರಲಿ. ಕುಟುಂಬದಲ್ಲಿ ನೆಮ್ಮದಿ ಮೂಡಲಿದೆ.

ಮಿಥುನ

ಸಹೋದ್ಯೋಗಿಗಳ ಜತೆಗಿನ ಸಮನ್ವಯದಿಂದ ಕೆಲಸಗಳು ವೇಗವಾಗಿ ಮುಗಿಯುತ್ತವೆ. ಸ್ವಂತ ವ್ಯವಹಾರದ ಕನಸುಗಳಿಗೆ ಆಪ್ತರಿಂದ ಬಲ ಸಿಗಲಿದೆ. ಅನಿರೀಕ್ಷಿತ ಧನಾಗಮದಿಂದ ಮನಸ್ಸಿಗೆ ಸಂತಸವಾಗುವುದು. ದೂರದ ಪ್ರಯಾಣದಿಂದ ಹೊಸ ಸಂಪರ್ಕಗಳು ರೂಪುಗೊಳ್ಳಲಿವೆ. ಕುಟುಂಬದಲ್ಲಿ ಪ್ರೀತಿ ವೃದ್ಧಿಸಲಿದ್ದು, ದಿನಚರಿ ಮತ್ತು ಆರೋಗ್ಯ ಉತ್ತಮವಾಗಿರಲಿದೆ. ಶುಭ ಸುದ್ದಿ ಬರಲಿದೆ.

ಕಟಕ

ದೊಡ್ಡ ನಿರ್ಧಾರಗಳಲ್ಲಿ ಆತುರ ಬೇಡ, ವಿವೇಚನೆಯಿಂದ ಮುಂದುವರಿಯಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ದಕ್ಷತೆಯನ್ನು ಪರೀಕ್ಷಿಸಲಿವೆ. ಹಣಕಾಸಿನ ವಹಿವಾಟಿನಲ್ಲಿ ಲೆಕ್ಕಾಚಾರ ಅಗತ್ಯ. ಮನೆಯಲ್ಲಿ ಹೊಸ ವಸ್ತುಗಳ ಖರೀದಿ ಖುಷಿ ತರುತ್ತದೆ. ದೇವತಾ ಕಾರ್ಯಗಳಲ್ಲಿ ಭಾಗಿ. ವಿಶ್ರಾಂತಿ ಮತ್ತು ಆರೋಗ್ಯದತ್ತ ಗಮನವಿರಲಿ. ಆಪ್ತರ ನೆರವು ಸಿಗಲಿದೆ.

ಸಿಂಹ

ಸಮಾಜದಲ್ಲಿ ನಿಮ್ಮ ಮಾತಿಗೆ ವಿಶೇಷ ತೂಕ ಹಾಗೂ ಗೌರವ ಸಿಗಲಿದೆ. ಉದ್ಯೋಗ ಬದಲಾವಣೆ ಯತ್ನಕ್ಕೆ ಉತ್ತಮ ಸ್ಪಂದನೆ ದೊರೆಯಲಿದೆ. ಆರ್ಥಿಕವಾಗಿ ಆದಾಯದ ಹರಿವು ಸುಗಮವಾಗಲಿದ್ದು ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸಲಿದೆ. ಕಲೆ ಮತ್ತು ಬರವಣಿಗೆಯಲ್ಲಿ ಮಿಂಚುವ ಅವಕಾಶವಿದೆ. ಮನಸ್ಸು ಪ್ರಫುಲ್ಲವಾಗಿ ಇರಲಿದ್ದು, ನೂತನ ಯೋಜನೆ ಸಾಗಲಿದೆ.

ಕನ್ಯಾ

ಹಣಕಾಸು ಮತ್ತು ಹೂಡಿಕೆಯಲ್ಲಿ ತರಾತುರಿ ಬೇಡ, ಎಚ್ಚರಿಕೆ ಇರಲಿ. ಊಹಾತ್ಮಕ ವ್ಯವಹಾರಗಳಿಂದ ದೂರವಿರುವುದು ಕ್ಷೇಮ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪ ಎದುರಾದರೂ ಮಾತುಕತೆಯಿಂದ ಸರಿಹೋಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮೂಡಲಿದೆ. ಧಾರ್ವಿುಕ ಚಿಂತನೆ ನೆಮ್ಮದಿ ತರುವುದು. ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಹಿರಿಯರ ಮಾರ್ಗದರ್ಶನ ಸಿಗಲಿದೆ.

ತುಲಾ

ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗದ ಸುದ್ದಿ ಮನಸ್ಸಿಗೆ ಹೊಸ ಹುರುಪು ನೀಡುತ್ತದೆ. ಸಂಗಾತಿಯ ಬೆಂಬಲದಿಂದ ಪ್ರಮುಖ ಕೆಲಸಗಳು ಸಲೀಸಾಗಿ ಸಾಗಲಿವೆ. ಕಾನೂನು ಹಾಗೂ ದಾಖಲೆ ವಿಚಾರಗಳಲ್ಲಿ ಅನುಕೂಲ ಕಾಣಲಿದೆ. ಆರ್ಥಿಕವಾಗಿ ಸದೃಢತೆ ಮೂಡಲಿದೆ. ಬಂಧುಗಳ ಆಗಮನದಿಂದ ಸಂತಸ ಹೆಚ್ಚಲಿದೆ. ಆರೋಗ್ಯ ಸಮಾಧಾನಕರವಾಗಿರಲಿದೆ. ಹೊಸ ಯೋಚನೆ ಮೂಡಲಿದೆ.

ವೃಶ್ಚಿಕ

ಕೆಲಸದ ಒತ್ತಡವಿದ್ದರೂ ನಿಮ್ಮ ದಿಟ್ಟತನದಿಂದ ಎಲ್ಲ ಸವಾಲುಗಳನ್ನು ಎದುರಿಸುವಿರಿ. ಸಂಚಾರ ಮತ್ತು ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಹಳೆಯ ಸ್ನೇಹಿತರ ಭೇಟಿ ಹಳೆಯ ನೆನಪುಗಳನ್ನು ತರಲಿದೆ. ಆರ್ಥಿಕವಾಗಿ ಹಂತಹಂತದ ಪ್ರಗತಿ ಇರಲಿದೆ. ಕುಟುಂಬದ ಸಹಕಾರ ಧೈರ್ಯ ತುಂಬಲಿದೆ. ಮನಸ್ಸಿಗೆ ಶಾಂತಿ ಸಿಗಲಿದೆ. ಪ್ರಯತ್ನಕ್ಕೆ ಫಲವಿದೆ.

ಧನಸ್ಸು

ಉನ್ನತ ಶಿಕ್ಷಣ ಮತ್ತು ಹೊರನಾಡಿನ ಅವಕಾಶಗಳಿಗೆ ಶುಭ ಸೂಚನೆ ಸಿಗಲಿದೆ. ಸೇವಾ ಹಾಗೂ ಧಾರ್ವಿುಕ ಕಾರ್ಯಗಳಲ್ಲಿ ಒಲವು ಹೆಚ್ಚಲಿದೆ. ಆಕಸ್ಮಿಕ ಧನಲಾಭವಾಗಿ ಮಾನಸಿಕ ನೆಮ್ಮದಿ. ಕುಟುಂಬದೊಂದಿಗೆ ದೇವಾಲಯ ಭೇಟಿಯ ಯೋಗವಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಬಹುದು. ಆರೋಗ್ಯ ಉತ್ತಮವಾಗಿರಲಿದೆ. ಆತ್ಮವಿಶ್ವಾಸ ಬೆಳೆಯಲಿದೆ.

ಮಕರ

ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಮೈಲುಗಲ್ಲು ತಲುಪುವ ಅವಕಾಶವಿದೆ. ಹಿರಿಯರ ಮಾರ್ಗದರ್ಶನದಿಂದ ಕಠಿಣ ಕೆಲಸಗಳು ಸುಲಭವಾಗಲಿವೆ. ಆದಾಯ ಹೆಚ್ಚುವ ಹೊಸ ಹೊಳಹುಗಳು ಕಾಣಿಸಲಿವೆ. ಮನೆಯಲ್ಲಿ ಮಂಗಳ ಕಾರ್ಯದ ಚರ್ಚೆ ನಡೆಯಲಿದೆ. ದಾಂಪತ್ಯ ಮಧುರವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಸಂಗಾತಿಯ ಬೆಂಬಲ ಸಿಗಲಿದೆ.

ಕುಂಭ

ನಿಮ್ಮ ಭಿನ್ನ ಯೋಚನೆಗಳು ಎಲ್ಲರ ಗಮನ ಸೆಳೆಯಲಿವೆ. ಸಾರ್ವಜನಿಕ ವಲಯದಲ್ಲಿ ಜನಪ್ರಿಯತೆ ಹೆಚ್ಚಾಗಲಿದೆ. ಹಠಾತ್ ಹಣಕಾಸಿನ ನೆರವಿನಿಂದ ಬಾಕಿ ಕೆಲಸ ಮುಗಿಯಲಿದೆ. ಸ್ನೇಹಿತರೊಡನೆ ಪ್ರವಾಸದ ಯೋಗವಿದೆ. ವ್ಯಾಪಾರದಲ್ಲಿ ಹೊಸ ಸಂಪರ್ಕಗಳು ಲಾಭ ತರಲಿವೆ. ಆರೋಗ್ಯದ ಚಿಂತೆ ಬೇಡ. ಮನಸ್ಸು ಉಲ್ಲಾಸದಿಂದಿರುವುದು.

ಮೀನ

ಅತಿಯಾದ ಚಿಂತೆ ಬಿಟ್ಟು ಇಂದಿನ ಕೆಲಸಗಳತ್ತ ಗಮನ ಹರಿಸಿ. ಮಕ್ಕಳ ಸಾಧನೆ ಹೆಮ್ಮೆ ಹಾಗೂ ಸಂತೋಷ ತರುತ್ತದೆ. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆರ್ಥಿಕವಾಗಿ ಸಾಮಾನ್ಯ ಸ್ಥಿತಿ ಇದ್ದರೂ ಅಗತ್ಯ ಕೆಲಸ ಸಾಗಲಿದೆ. ಕುಟುಂಬದ ಬೆಂಬಲ ಸಿಗಲಿದೆ. ದಾಂಪತ್ಯ ಸುಖಮಯವಾಗಿರಲಿದ್ದು ನೆಮ್ಮದಿ ಸಿಗಲಿದೆ.