ಮೇಷ: ಜೂನ್ 14ರಂದು ರವಿ ಮಿಥುನ ರಾಶಿಯನ್ನು ಪ್ರವೇಶಿಸಿ ದಣಕ್ಕೆ ಸಂಚರಿಸಿ ತನ್ನ ಮಿತ್ರನಾದ ಬುಧನ ಮನೆಯಲ್ಲಿ ಇರುತ್ತಾನೆ. ಮೇಷ ರಾಶಿಯವರು ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸುವವರೆಗೆ ಯಾವುದೇ ಕಾರ್ಯಸಾಧನೆ ಮಾಡಿಕೊಳ್ಳಬಹುದು. 11ರ ಗುರು ನಿಮಗೆ ಎಲ್ಲವನ್ನೂ ಕೊಡುವನು.
ವೃಷಭ: ರಾಹು&ಬುಧರು ವೃಷಭದಲ್ಲಿದ್ದು, ಮಿಥುನದಲ್ಲಿ ರವಿ&ಶುಕ್ರರ ಸಂಪರ್ಕವಿದೆ. ನಿಮ್ಮ ಕಲ್ಪನಾ ಮಾರ್ಗವನ್ನು ಕಟ್ಟಿಹಾಕಿ. ವಿಷಯವನ್ನು ಚರ್ಚಿಸಿ. ಗುರುವಿನ ಅನುಗ್ರಹ ಪಡೆಯಲು ಮುಂದಾಗಿ. ಧನಲಾಭವಿದೆ. ದೇವರನ್ನು ಸದಾ ಜ್ಞಾಪಿಸಿಕೊಂಡು ನಡೆಯಿರಿ.
ಮಿಥುನ: ಸೂರ್ಯನು ಜೂನ್ 14ರಂದು ಮಿಥುನ ರಾಶಿಗೆ ಬಂದು ಸೇರುತ್ತಾನೆ. ಊರ್ಧ್ವ ಮುಖ ಸೂರ್ಯನು ತೇಜಸ್ಸು ಕಳೆದುಕೊಳ್ಳದೆ ಕರ್ಕಾಟಕದಿಂದ ಇಳಿಮುಖಗೊಂಡು ಸಾಗುತ್ತಾನೆ. 9ರ ಗುರುವು ಕಾಪಾಡುತ್ತಾನೆ. ದ್ವಾದಶ ಲಿಂಗಾಷ್ಟಕ ಪಠಿಸಿ. ನಿಮ್ಮ ಗುರುಗಳ ದರ್ಶನ ಪಡೆದು ಅಶೀರ್ವಾದವನ್ನು ಸಂಪತ್ತಾಗಿ ಪರಿವರ್ತಿಸಿಕೊಳ್ಳಿ.
ಕಟಕ: ದ್ವಾದಶ ಸೂರ್ಯನ ಸಂಪರ್ಕದಿಂದ ಕೆಲವೊಂದು ಉಷ್ಣತೆಯಿಂದ ಕೂಡಿದ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಅದಕ್ಕೆ ಪರಿಹಾರ ಸೂರ್ಯನಾರಾಯಣ ಅಷ್ಟೋತ್ತರ ಪಾರಾಯಣ ಸೂರ್ಯಾಷ್ಟಕ ಪಠಿಸಿ. 7ರ ಶನಿ, 8ರ ಗುರು ಸಂಚಾರ ಅಷ್ಟು ಶುಭವಲ್ಲದಿದ್ದರೂ, ದೇವರನ್ನು ನಂಬಿ ಸಾಗಿ.
ಸಿಂಹ: ಏಕಾದಶ ಸೂರ್ಯನು, ಆರರ ಶನಿ, ಸಪ್ತಮ ಗುರುವು ಕೇಳಿದ್ದೆಲ್ಲ ಕೊಟ್ಟು ಸಂತೋಷ ನೀಡಿ, ಅನಿರೀತ ಲಾಭ ತಂದುಕೊಡುತ್ತಾರೆ. ಪ್ರಗತಿಯನ್ನು ಕಾಣುತ್ತೀರಿ. ಕಷ್ಟ ಬರದಂತೆ ಇಷ್ಟದೇವರನ್ನು ಪೂಜಿಸಿ. ನಿಮಗೆ ಜನ್ಮಕೊಟ್ಟ ಮಾತಾಪಿತರ ಆಶೀರ್ವಾದ ಪಡೆಯಿರಿ. ಗುರುಗಳಿಗೆ ತಲೆಬಾಗಿ ನಮಸ್ಕರಿಸಿ.
ಕನ್ಯಾ: ಕನ್ಯಾರಾಶಿಯೆಂದರೆ 8 ವರ್ಷದ ಸುಲಕ್ಷಣ, ಜ್ಞಾನ ತುಂಬಿದ, ಕಲ್ಮಶವಿಲ್ಲದ, ಸಾಾತ್ ದೇವಿ ಸ್ವರೂಪದ ಬಾಲಕಿ. ಆರರ ಶನಿಗೆ, ಪಂಚಮ ಶನಿಗೆ ಪರಿಹಾರವೆಂದರೆ ಜ್ಯೇಷ್ಠ ಮಾಸದ ಪೌರ್ಣಿಮೆ ದಿನ 8 ವರ್ಷದ ಬಾಲಕಿಗೆ ಮನೆಯಲ್ಲಿ ಬಾಲಾಂಬಿಕೆ ಸ್ವರೂಪದಲ್ಲಿ ಪೂಜಿಸಿ.
ತುಲಾ: ಚತುರ್ಥ ಶನಿ ಸ್ವಕ್ಷೇತ್ರದಲ್ಲಿದ್ದರೂ ಅವನ ಸ್ವಭಾವ ಯಾರೂ ಬದಲಿಸಲು ಸಾಧ್ಯವಿಲ್ಲ. ಪಂಚಮ ಗುರು ಪೂರ್ವಪುಣ್ಯದ ನಿಮ್ಮ ಖಾತೆಯಲ್ಲಿರುವ ಸುಖವನ್ನು ಕೊಡುತ್ತಾನೆ. ನಿಮ್ಮ ಗುರುಗಳ ಮೇಲೆ ವಿಶ್ವಾಸವಿಟ್ಟು ನಡೆದರೆ ಏನನ್ನಾದರೂ ಕೊಡುತ್ತಾರೆ. ತಪ್ಪದೇ ಗುರುಚರಿತ್ರೆ ಪಾರಾಯಣ ಮಾಡಿ.
ವೃಶ್ಚಿಕ: ನೀವು ಗಣಪತಿಯನ್ನು ತಪ್ಪದೆ ಪೂಜಿಸಲೇಬೇಕು. ಷಣ್ಮುಖನನ್ನು ಪ್ರಾರ್ಥಿಸಿ ಬೇಕಾದ್ದನ್ನು ಪಡೆದುಕೊಳ್ಳುವ ಸಮಯ. ತೃತೀಯ ಶನಿಯಿಂದ ಲಾಭವಿದೆ. ಸಮಯ ಚೆನ್ನಾಗಿರುವುದರಿಂದ ಧನವೆಂಬ ಐಶ್ವರ್ಯವು ಯಾವಾಗ ಕೈಸೇರುತ್ತದೆಂದು ಹೇಳಲಾಗುವುದಿಲ್ಲ
ಧನು: ಶನಿಯು ಧನಸ್ಸಿನ ಚೌಕಟ್ಟಿನಲ್ಲಿದ್ದು, ಕೆಲವು ಅನಿರೀತ ಟನೆಗಳಿಂದ ವಿಚಲಿತರಾಗಬೇಡಿ. ಆಗುಹೋಗುಗಳನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಹೆದರುವ ಅಗತ್ಯವಿಲ್ಲ. ಇದು ಸಾಧಿಸುವ ಸಮಯ. ವಕ್ರತ್ವ ಗ್ರಹಗಳಿಗೆ ಶಿವಸಹಸ್ರನಾಮ ಪಾರಾಯಣ ಮಾಡಿ. ದುರ್ಗಾದೀಪ ನಮಸ್ಕಾರ ಮಾಡಿದರೆ ಯಾರನ್ನೂ ಗೆಲ್ಲಬಹುದು.
ಮಕರ: ವಕ್ರಗತಿಯ ಶನಿಗುರುಗಳು ಹಿಂದಿನ ಮನೆಯ ಲವನ್ನು ಕೊಡುವುದರಿಂದ ಕಾಲಕ್ಕೆ ತಕ್ಕಂತೆ ಬಾಳುವವನೇ ವಿವೇಕಿಯೆಂದು ನಿತ್ಯಾಷ್ಟಕ ಹೇಳುತ್ತದೆ. ವಿವೇಚನೆ, ವಿವೇಕದಿಂದ ಆಲೋಚಿಸಿ ಕಾರ್ಯತಂತ್ರ ರೂಪಿಸಿಕೊಳ್ಳಿ. ನಿಧಾನವಾದರೆ ಬೇಸರಬೇಡ. ಅದು ಮುಂದಿನ ಏಳಿಗೆಗಾಗಿ ಎಂದುಕೊಳ್ಳಿ.
ಕುಂಭ: ಆತ್ಮಾವಲೋಕನವೇ ದಾರಿಯನ್ನು ತೋರಿಸುತ್ತದೆ. ಜನ್ಮಾಂತರದಲ್ಲಿ ಏನು ಪುಣ್ಯ ಪಡೆದಿದ್ದೀರೋ ಅದರ ಲಾಭ&ಯಶಸ್ಸು ಸಿಗುತ್ತದೆ. ತಾಳಿದವನು&ಬಾಳಿಯಾನು. ಸ್ಥಿರವಾದ ಮನಸ್ಸಿಗೆ ಚಂದ್ರಾಷ್ಟೋತ್ತರ, ಉಮಾಮಹೇಶ್ವರ ಸ್ತೋತ್ರ ನಿತ್ಯವೂ ಪಾರಾಯಣ ಮಾಡಿ.
ಮೀನ: ಗುರು&ಶನಿಯ ಚಲನವಲನಗಳು ನಿಮ್ಮನ್ನು ಮತ್ತೇ ಹುರಿದುಂಬಿಸಿ, ಉತ್ಸಾಹ ಕೊಟ್ಟು ಮುನ್ನಡೆಸುತ್ತಾರೆ. ಗ್ರಹಗಳು ನಿಮ್ಮನ್ನು ಸರಿಯಾದ ಮಾರ್ಗಕ್ಕೆ ಚಲಿಸಿ ಎಲ್ಲವನ್ನೂ ಕೊಡುವ ಸಮಯ. ತೃಪ್ತಿಯ ಜೀವನವಿರಲಿ&ಉಪಕಾರ ಮಾಡಿದ ವ್ಯಕ್ತಿಗಳ ಸ್ಮರಣೆ ಇರಲಿ.-