ಜ್ಯೋತಿಷ್ಯ

ವಾರ ಭವಿಷ್ಯ: ಈ ರಾಶಿಯವರು ಮನೆಯಲ್ಲಿ ಶಾಂತಿ ಸೌಹಾರ್ದ ನಿರ್ವಿುಸಬಹುದು. ಕೋಪಿಷ್ಟರ ಜತೆ ಸಂಯಮ ಇರಲಿ

ಮೇಷ: ಕೆಲವು ಮಿತ್ರರ ಬಗ್ಗೆ ನಿಮಗೆ ಸರಿಯಾದ ಅರಿವು ಇಲ್ಲ. ಅದರಿಂದ ಕೆಲವು ಸಲ ಬಿಗುವಿನ ವಾತಾವರಣ ನಿರ್ವಣವಾಗುತ್ತದೆ. ಬುದ್ಧಿಬಲದ ಜತೆ ಜ್ಞಾನವೂ ಇರಬೇಕು. ಹಿಂದಿನಿಂದ ಯಾರೂ ಮಾತನಾಡಬಾರದು. ಜ್ಞಾನದ ನಡೆಯಿಂದ ಒಳಿತಾಗುತ್ತದೆ. ಸಂತೋಷ ತರುತ್ತದೆ. ಚಂಡಿಕಾಳನ್ನು ಸ್ತುತಿಸಿ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 8

ವೃಷಭ: ಮಾತನ್ನು ನಿಯಂತ್ರಿಸಿ. ಮೌನದಿಂದಲೇ ಅಪಾರವಾದುದನ್ನು ಸಾಧಿಸಬಹುದು. ಮನೆಯಲ್ಲಿ ಶಾಂತಿ ಸೌಹಾರ್ದ ನಿರ್ವಿುಸಬಹುದು. ಕೋಪಿಷ್ಟರ ಜತೆ ಸಂಯಮ ಇರಲಿ. ಅದೇ ನಿಮ್ಮ ವಜ್ರಾಯುಧ. ಕೆಲಸದ ಸ್ಥಳದಲ್ಲಿ ದೊಡ್ಡದೊಂದನ್ನು ಪಡೆಯಲಿದ್ದೀರಿ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಸೂಕ್ತ ಸಲಹೆ ಪಡೆಯಿರಿ. ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 2

ಮಿಥುನ: ವಿಚಿತ್ರ ಭಯದಿಂದ ನರಳುವ ಸಾಧ್ಯತೆ. ನಿದ್ದೆಗೂ ಸಂಚಕಾರ ಉಂಟಾಗಬಹುದು. ಕೆಲವರ ಮಾತು ಕೆಂಡದ ದಾರಿ ನಿರ್ವಿುಸಬಹುದು. ರಾಮನನ್ನು ಆರಾಧಿಸಿ. ರಾಮರಕ್ಷಾ ಸ್ತೋತ್ರ ರಕ್ಷಣೆ ನೀಡಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿ, ಟಿಪ್ಪಣಿ ಮಾಡಿಕೊಳ್ಳಿ. ಚಿನ್ನದ ಆಭರಣಗಳ ಕುರಿತು ಎಚ್ಚರ ಇರಲಿ. ಜನ ನಂಬಿಸುತ್ತಿರುತ್ತಾರೆ. ಮಾತು ತಪ್ಪುತ್ತಾರೆ. ಎಚ್ಚರದಿಂದಿರಿ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 6

ಕಟಕ: ಪ್ರಜ್ಞಾಶಕ್ತಿಯೇ ನಿಮ್ಮ ವಜ್ರಾಯುಧ. ದೈವಬಲವಿದೆ. ಬಾಹುಬಲದಿಂದಲೇ ಎಲ್ಲವನ್ನೂ ನಿಯಂತ್ರಿಸಲಾಗದು. ಮೂಕಾಂಬಿಕೆಯ ಅನುಗ್ರಹ ನಿಮಗಿದೆ. ಶ್ರೀದೇವಿಯನ್ನು ಸ್ತುತಿಸಿ. ಹಣದ ವಿಚಾರದಲ್ಲಿ ಸಮಾಧಾನವಿರುತ್ತದೆ. ಮನೆ ಖರೀದಿ, ಜೀಣೋದ್ಧಾರ ಸುಲಭವಾಗಲಿದೆ. ಸ್ವರ್ಣಗೌರಿಯನ್ನು ಸ್ತುತಿಸಿ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 8

ಸಿಂಹ: ನಿಮ್ಮ ಆತ್ಮವಿಶ್ವಾಸ ವೃದ್ಧಿಸಲಿದೆ. ಜಮೀನು ಅಥವಾ ಮನೆಯ ಗಡಿ ಸಂಬಂಧಿ ವ್ಯಾಜ್ಯವನ್ನು ಸಮಾಧಾನಕರವಾಗಿ ಬಗೆಹರಿಸಿಕೊಳ್ಳಿ. ಕಾದು ನೋಡುವುದು ತಪ್ಪಲ್ಲ. ಎಂತಹ ವೈರಿಯನ್ನೂ ಗೆಲ್ಲುವ, ವಿರೋಧಿಯ ಮನಪರಿವರ್ತನೆ ಮಾಡುವ ಶಕ್ತಿ ನಿಮಗಿದೆ. ಭೈರವಿಯನ್ನು ಆರಾಧಿಸಿ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

ಕನ್ಯಾ: ವಾಹನ ಓಡಿಸುವಾಗ ಎಚ್ಚರ ಇರಲಿ. ಸಕ್ಕರೆ ಕಾಯಿಲೆ ಬಗ್ಗೆಯೂ ಅಷ್ಟೆ. ಮಕ್ಕಳು ಹೆಚ್ಚಿನ ಗಮನ ಬಯಸುತ್ತಾರೆ. ಒತ್ತಡವನ್ನು ನಿಭಾಯಿಸುವ ತಾಳ್ಮೆ ಇರಲಿ. ಯಾವುದೇ ಸಂದರ್ಭವನ್ನೂ ಹೆಚ್ಚು ಲಂಬಿಸಬೇಡಿ. ಎದುರಿಗಿರುವುದನ್ನು ಅಲಕ್ಷಿಸಬೇಡಿ. ನಿಯಂತ್ರಿಸಿ. ಬುದ್ಧಿಬಲಕ್ಕೆ ಎಂದೂ ಧಕ್ಕೆ ಬರುವುದಿಲ್ಲ. ಮುಖ್ಯಪ್ರಾಣನನ್ನು ಸ್ತುತಿಸಿ. ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 6

ತುಲಾ: ವರ್ಚಸ್ಸು ವೃದ್ಧಿಸಿಕೊಳ್ಳಲು ಸಕಾಲ. ಜನ ನಿಮ್ಮ ಮಾರ್ಗದರ್ಶನ ಬಯಸುತ್ತಾರೆ. ವೈಯಕ್ತಿಕ ಅಭ್ಯುದಯದ ಜತೆ ಜನಸಮೂಹದ ಬಗ್ಗೆಯೂ ಸಕಾರಾತ್ಮಕವಾಗಿರಿ. ಒತ್ತಡ ನಿರ್ವಣವಾಗುತ್ತದೆ. ಹೊಸ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ಅವಕಾಶ. ಹಣದ ವಿಚಾರದಲ್ಲಿ ಗೊಂದಲವಿದ್ದರೂ ನಿಭಾಯಿಸುತ್ತೀರಿ. ವರಲಕ್ಷ್ಮಿಯ ಸ್ತುತಿ ಮಾಡಿ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 2

ವೃಶ್ಚಿಕ: ಖುಷಿಯ ದಿನಗಳಿವು. ಆಗಿದ್ದನ್ನು ಮರೆತು ಸಾತ್ವಿಕತೆಯಿಂದ ಜನರನ್ನು ಸ್ವಾಗತಿಸಿ. ಮುಂದಿನ ದಿನಗಳಲ್ಲಿ ಇವರು ನಿಮ್ಮ ಬೆಂಬಲಕ್ಕೆ ಬರುತ್ತಾರೆ. ಪಶ್ಚಾತ್ತಾಪದ ಕಾವು ಅವರನ್ನು ಶುದ್ಧಗೊಳಿಸಿದೆ. ಇದನ್ನೇ ನಿಮ್ಮಿಂದಲೂ ಅವರು ಬಯಸುತ್ತಾರೆ. ಗೋದಿ ಹಿಟ್ಟಿನಿಂದ ತಯಾರಿಸಿದ ಸಿಹಿಯನ್ನು ಗಣೇಶನಿಗೆ ನೈವೇದ್ಯ ನೀಡಿ. ಒಳ್ಳೆಯದಾಗುತ್ತದೆ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 7

ಧನಸ್ಸು: ನಿಮ್ಮಲ್ಲಿ ಪ್ರತಿಭೆ ಇದೆ. ಆದರೆ ಕೆಲವು ಜಂಜಡಗಳನ್ನು ದಾಟುತ್ತೇನೆ ಎಂಬ ಹಟ ಬೇಕು. ಆದರೆ ಅದು ಅಹಂ ಆಗಬಾರದು. ಜನ ನಿಮಗೆ ಅಹಂಕಾರಿ ಎಂಬ ಹಣೆಪಟ್ಟಿ ಕಟ್ಟಲು ಕಾತರರಾಗಿದ್ದಾರೆ. ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಸೋಲಿಗೆ ಅಂಜದಿರುವ ನಿಮ್ಮ ಗುಣ ಗೆಲುವಿನ ದಿಸೆಯಲ್ಲಿ ಮೊದಲ ಹೆಜ್ಜೆ ಆಗುತ್ತದೆ. ಶುಭದಿಕ್ಕು: ಉತ್ತರ ಶುಭಸಂಖ್ಯೆ: 4

ಮಕರ: ಎಚ್ಚರದ ಹೆಜ್ಜೆಯಿಂದ ಒಳಿತಿನ ದಾರಿ ತೆರೆದುಕೊಳ್ಳುತ್ತದೆ. ಆದರೂ ಏನೋ ಒಂದು ಆತಂಕ ಇರುತ್ತದೆ. ಗುರಿ ತಲುಪುವ ದಾರಿಯಲ್ಲಿ ಅಕಸ್ಮಾತ್ ಕೆಲವು ತೊಂದರೆಗಳು ಬಂದು ನಿಮ್ಮ ಸಹನೆಯನ್ನು ಪರೀಕ್ಷಿಸುತ್ತವೆ. ಹೀಗಾಗಿ ಸಹನೆ ಇರಲಿ. ಅಲ್ಪರ ನಡವಳಿಕೆ ಬಗ್ಗೆ ಬೇಸರ ಬೇಡ. ಮಾರುತಿಯನ್ನು ಸ್ತುತಿಸಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 9

ಕುಂಭ: ಯಶಸ್ಸಿಗಾಗಿ ಹೆಣಗಾಡಬೇಕಾಗುತ್ತದೆ. ನಿಮಗೆ ಸ್ವಲ್ಪವೂ ಸಹಕಾರ ನೀಡದ ವ್ಯಕ್ತಿಗಳನ್ನು ಹಚ್ಚಿಕೊಳ್ಳಬೇಡಿ. ಬಯಸಿರದ ಪರಿವರ್ತನೆಯಿಂದ ನಿಮಗೆ ಹೊರೆಯೇ ಆಗಬಹುದು. ಗೆದ್ದಲ್ಲಿಯೇ ಸೋಲನ್ನು ಸ್ವೀಕರಿಸುವ ಪ್ರಮೇಯ ಬಾರದಂತೆ ನಿಗಾ ವಹಿಸಿ. ಮನಸ್ಸಿನ ಅಂಗಳದಲ್ಲಿ ರೂಪುಗೊಂಡು ಸಾಕ್ಷಾತ್ಕಾರ ನೀಡುವ ಹನುಮನನ್ನು ಆರಾಧಿಸಿ. ಶುಭದಿಕ್ಕು: ಪೂರ್ವ ಶುಭಸಂಖ್ಯೆ: 5

ಮೀನ: ಥಟ್ ಅಂತ ನಿರ್ಧಾರಕ್ಕೆ ಬರಬೇಡಿ. ಚಂದ್ರನ ಗೋಚಾರದ ಓಡಾಟಗಳು ನಿಮ್ಮ ಏಕಾಗ್ರತೆಯನ್ನು ಭಂಗಗೊಳಿಸುತ್ತವೆ. ಸೂರ್ಯನಿಂದ ಬಲ ಪಡೆಯಬೇಕಾದ ಅವಶ್ಯಕತೆ ಇದೆ. ಶನೈಶ್ಚರನೂ ನಿಮ್ಮನ್ನು ಅನುಗ್ರಹಿಸಬೇಕು. ಶ್ರಮಿಕರು ನಿಜವಾದ ಪ್ರಯತ್ನ ಒಗ್ಗೂಡಿಸಿದರೆ ನಿಮ್ಮದಾದ ವಹಿವಾಟಿನ ಸಾಮ್ರಾಜ್ಯಕ್ಕೆ ಹೊಸ ಹೊಳಪು ನೀಡಲು ನೈತಿಕ ಶಕ್ತಿ ಸಿಗುತ್ತದೆ. ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 3