ಮೇಷ: ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದ್ದು, ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿದರೂ ನಿಮ್ಮ ಮೃದು ಮಾತಿನಿಂದ ಎಲ್ಲವೂ ಸರಿಹೋಗಲಿದೆ. ವಾರಾಂತ್ಯದಲ್ಲಿ ದೇವತಾರ್ಚನೆ ಅಥವಾ ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರೋಗ್ಯದಲ್ಲಿ ಜಾಗ್ರತೆ. ಮನಸ್ಸು ಉಲ್ಲಾಸದಿಂದಿರಲಿದೆ.
ವೃಷಭ: ಕೈಗೆತ್ತಿಕೊಂಡ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದೆ ಕೊಂಚ ನಿರಾಸೆಯಾಗಬಹುದು. ಆದರೆ ಧೃತಿಗೆಡದೆ ಪ್ರಯತ್ನ ಮುಂದುವರಿಸಿ. ವ್ಯಾಪಾರಸ್ಥರಿಗೆ ಸ್ಪರ್ಧಿಗಳಿಂದ ಪೈಪೋಟಿ ಎದುರಾಗಲಿದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶ ಸಿಗಲಿದೆ. ದೂರದ ಊರಿನಿಂದ ಹಿತಾಸಕ್ತಿ ವೃದ್ಧಿಸುವ ಶುಭ ಸುದ್ದಿ ಕೇಳಲಿದ್ದೀರಿ. ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳುವುದು ಅತಿ ಅವಶ್ಯ. ಹೊಸ ಅವಕಾಶಗಳು ಒದಗಿಬರಲಿವೆ.
ಮಿಥುನ: ಸೃಜನಶೀಲ ಹಾಗೂ ಕಲಾತ್ಮಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ವಿಶೇಷ ಪ್ರಶಂಸೆ ಸಿಗಲಿದೆ. ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಹೊಸ ದಾರಿಗಳು ಗೋಚರಿಸಲಿವೆ. ಆಪ್ತ ಸ್ನೇಹಿತರ ಸಹಾಯದಿಂದ ಬಹುದಿನದ ಆಸೆ ಈಡೇರಲಿದೆ. ವಾಹನ ಚಾಲನೆ ಮಾಡುವಾಗ ಮತ್ತು ಪ್ರಯಾಣ ಮಾಡುವಾಗ ಎಚ್ಚರವಿರಲಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಆರ್ಥಿಕ ಪ್ರಗತಿ ಕಂಡುಬರಲಿದೆ.
ಕಟಕ: ವೃತ್ತಿರಂಗದಲ್ಲಿ ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸಂಯಮ ಕಾಪಾಡಿಕೊಳ್ಳಿ. ಆರ್ಥಿಕವಾಗಿ ಹೂಡಿಕೆ ಮಾಡುವ ಮುನ್ನ ಹಿತೈಷಿಗಳ ಸಲಹೆ ಪಡೆಯುವುದು ಉತ್ತಮ. ನಿಮ್ಮ ಮಾತಿನ ಚಾತುರ್ಯದಿಂದಲೇ ವಿವಾದಾತ್ಮಕ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ವಾರಾಂತ್ಯಕ್ಕೆ ಆಪ್ತರೊಡನೆ ಹರ್ಷದ ಕ್ಷಣಗಳನ್ನು ಕಳೆಯುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಕುಟುಂಬದ ಬೆಂಬಲವಿರಲಿದೆ.
ಸಿಂಹ: ಸಮಾಜದಲ್ಲಿ ನಿಮ್ಮ ಗೌರವ ಹಾಗೂ ವರ್ಚಸ್ಸು ಗಣನೀಯವಾಗಿ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ಅಥವಾ ಪ್ರಮುಖ ವಿದ್ಯಾರ್ಥಿವೇತನ ಲಭಿಸುವ ಯೋಗವಿದೆ. ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸಲಿದೆ. ಹೊಸ ಆಸ್ತಿ ಅಥವಾ ಮನೆ ಖರೀದಿಸುವ ಮಾತುಕತೆ ಅಂತಿಮಗೊಳ್ಳಲಿದೆ. ಶುಭ ಸುದ್ದಿಗಳು ಸಿಗಲಿವೆ.
ಕನ್ಯಾ: ಮನಸ್ಸಿನಲ್ಲಿ ಗೊಂದಲಗಳು ಹೆಚ್ಚಾಗುವ ಸಾಧ್ಯತೆಯಿದೆ, ಯಾವುದಕ್ಕೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅಗತ್ಯ. ಹಳೆಯ ಹೂಡಿಕೆಗಳಿಂದ ಸಾಧಾರಣ ಲಾಭ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ಯೋಗ ಹಾಗೂ ಧ್ಯಾನ ಮಾಡುವುದು ಉತ್ತಮ. ಸಂಗಾತಿಯ ಸಾಂತ್ವನವು ಮನಸ್ಸಿಗೆ ಧೈರ್ಯ ತುಂಬಲಿದೆ.
ತುಲಾ: ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಕಂಪನಿಯಿಂದ ಆಹ್ವಾನ ಬರಲಿದೆ. ವ್ಯಾಪಾರದಲ್ಲಿ ಲಾಭದ ಅಂಚು ವಿಸ್ತಾರವಾಗಲಿದೆ. ಕಾನೂನು ತೊಡಕುಗಳಿಂದ ಮುಕ್ತಿ ಸಿಗುವ ಹಾದಿ ಸುಗಮವಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ. ಹಿರಿಯರ ಆಶೀರ್ವಾದ ಸಿಗಲಿದೆ.
ವೃಶ್ಚಿಕ: ಕೆಲಸದ ಒತ್ತಡ ಹೆಚ್ಚಿದ್ದರೂ ನಿಮ್ಮ ಇಚ್ಛಾಶಕ್ತಿಯಿಂದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಿರಿ. ಹಣಕಾಸಿನ ಸ್ಥಿತಿ ಹಿಂದಿಗಿಂತಲೂ ಬಲಗೊಳ್ಳಲಿದೆ. ನಿಮ್ಮ ಕಠಿಣ ನಿರ್ಧಾರಗಳು ಕುಟುಂಬದವರ ಮೆಚ್ಚುಗೆಗೆ ಪಾತ್ರವಾಗಲಿವೆ. ವಾರಾಂತ್ಯದಲ್ಲಿ ಹಳೆಯ ಸ್ನೇಹಿತರ ಭೇಟಿಯಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಆರೋಗ್ಯ ಸ್ಥಿರವಾಗಿರುತ್ತದೆ. ನೂತನ ಅವಕಾಶಗಳು ಒದಗಿಬರಲಿವೆ.
ಧನಸ್ಸು: ಧಾರ್ವಿುಕ ಕಾರ್ಯಗಳಲ್ಲಿ ಅಧಿಕ ಆಸಕ್ತಿ ಮೂಡಲಿದ್ದು, ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆಯಿದೆ. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರ ಸಂಪರ್ಕದಿಂದ ವಹಿವಾಟು ವಿಸ್ತಾರಗೊಳ್ಳಲಿದೆ. ಮಕ್ಕಳಿಂದ ಹೆಮ್ಮೆಯ ಸುದ್ದಿಯನ್ನು ಕೇಳಲಿದ್ದೀರಿ. ಕೋರ್ಟ್ ವ್ಯವಹಾರಗಳಲ್ಲಿ ನಿಮ್ಮ ಪರವಾದ ಬೆಳವಣಿಗೆಗಳು ನಡೆಯಲಿವೆ. ಮನಸ್ಸು ಪ್ರಫುಲ್ಲವಾಗಿರುತ್ತದೆ. ಆರ್ಥಿಕ ಹರಿವು ಸರಾಗವಾಗಿರಲಿದೆ.
ಮಕರ: ಉದ್ಯೋಗದಲ್ಲಿ ನಿಮ್ಮನ್ನು ಮೆಚ್ಚಿಸುವಂಥ ಹೊಸ ಜವಾಬ್ದಾರಿಗಳು ಸಿಗಲಿವೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಹೊಂದಾಣಿಕೆ ಅತ್ಯಂತ ಮುಖ್ಯ. ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆ ಯಿಂದ ಮುನ್ನಡೆಯುವುದು ಒಳಿತು. ಪ್ರಮುಖ ದಾಖಲೆಗಳಿಗೆ ಸಹಿ ಹಾಕುವಾಗ ಎಚ್ಚರವಿರಲಿ. ಕುಟುಂಬದ ಸದಸ್ಯರೊಡನೆ ಪ್ರವಾಸಕ್ಕೆ ತೆರಳುವ ಯೋಗವಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕುಂಭ: ನಿಮ್ಮ ವಿಶಿಷ್ಟ ಆಲೋಚನೆಗಳು ಎಲ್ಲರ ಗಮನ ಸೆಳೆಯಲಿವೆ. ಸಾಮಾಜಿಕ ವಲಯದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಹಠಾತ್ ಧನಲಾಭ ಅಥವಾ ಬಡ್ತಿ ಸಿಗುವ ಸಂಭವವಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಗಟ್ಟಿಯಾಗಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ, ಉತ್ಸಾಹದಿಂದ ಇರಲಿದ್ದೀರಿ. ಹೊಸ ಸಂಪರ್ಕಗಳು ಸಿಗಲಿವೆ.
ಮೀನ: ಸಣ್ಣಪುಟ್ಟ ವಿಷಯಗಳಿಗೂ ಅತಿಯಾಗಿ ಯೋಚಿಸಿ ಮನಸ್ಸನ್ನು ಕೆಡಿಸಿಕೊಳ್ಳಬೇಡಿ. ವ್ಯವಹಾರದಲ್ಲಿ ಜಾಗರೂಕತೆ ವಹಿಸುವುದು ಒಳಿತು. ವಿದ್ಯಾರ್ಥಿಗಳು ಪರಿಶ್ರಮವನ್ನು ಹೆಚ್ಚಿಸಬೇಕಾಗುತ್ತದೆ. ಹಿರಿಯರ ಆರೋಗ್ಯದ ಕಡೆಗೆ ವಿಶೇಷ ಗಮನವಿರಲಿ. ವಾರಾಂತ್ಯದಲ್ಲಿ ಅಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಅಪಾರ ನೆಮ್ಮದಿ ಸಿಗಲಿದೆ. ಧನಾಗಮವಾಗಲಿದೆ.