ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಬಳಿ ಸಸ್ಯವಿಡುವುದು ಮಂದತೆಯನ್ನು ಕಡಿಮೆ ಮಾಡುತ್ತದೆ.
ಹಣಕಾಸಿನ ಅದೃಷ್ಟವೆಂದರೆ ಕೇವಲ ಹಣ ಸಂಪಾದನೆ ಮಾತ್ರವಲ್ಲ, ಇದು ವಿಶ್ವಾಸಾರ್ಹ ಆದಾಯ, ಉತ್ತಮ ಉದ್ಯೋಗಾವಕಾಶ ನೀಡುತ್ತದೆ.
ಮನಿ ಪ್ಲಾಂಟ್, ಜೇಡ್ ಪ್ಲಾಂಟ್, ಬಿದಿರಿನ ಸಸ್ಯ, ತುಳಸಿ ಗಿಡ ಬೆಳೆಸುವುದು ಉತ್ತಮ.
Vastu Shastra main door plants: ಆರ್ಥಿಕವಾಗಿ ಸದೃಢವಾಗಿರಬೇಕು ಎಂದು ಎಷ್ಟೇ ಕಷ್ಟ ಪಟ್ಟರೂ ಸಹ ಆಗೋದೆ ಇಲ್ಲ. ಹಣ ಸೇವಿಂಗ್ ನೀರಲ್ಲೊ ಹೋಮವಾಗ್ತಿದೆ ಎಂದು ಬೇಸರ ಪಟ್ಟುಕೊಳ್ಳೋರು ಕಂಡು ಬರುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ, ಆರ್ಥಿಕ ಸುಧಾರಣೆಯಾಗುವುದು ಖಂಡಿತ ಎಂದು ನುರಿತ ತಜ್ಞರು ಹೇಳುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರವು ಅವಕಾಶಗಳು, ಆದಾಯ, ಗೌರವ ಮತ್ತು ಜೀವನದ ಹೊಸ ಚೈತನ್ಯದೊಂದಿಗೆ ನೇರ ಸಂಬಂಧ ಹೊಂದಿದೆ. ಪ್ರವೇಶದ್ವಾರದ ಬಳಿ ಸರಳವಾದ ವಸ್ತುವೊಂದನ್ನು ಇಡುವುದರಿಂದ ಉತ್ತಮ ಆರ್ಥಿಕ ಶಕ್ತಿಯನ್ನು ಸೃಷ್ಟಿಸಬಹುದು.
ಹೌದು, ನಿಮ್ಮ ಮನೆಯ ಮುಂದೆ ಒಂದು ಹಸಿರು ಸಸ್ಯವನ್ನು ತಂದಿಡಿ. ಅದೇ ಆರೋಗ್ಯಕರವಾದ ಹಸಿರು ಸಸ್ಯ ನಿಮ್ಮನ್ನು..ಹಣದ ಸಮಸ್ಯೆಗಳ ಸಂಕೋಲೆಗಳಿಂದ ಬಿಡಿಸಿ, ನೆಮ್ಮದಿಯ ಜೀವನವನ್ನು ನೀಡುವಂತೆ ಮಾಡುತ್ತದೆ.
ಮನೆಯ ಮುಂಭಾಗದಲ್ಲಿ ಹೊಸ ಸಸ್ಯವನ್ನು ಹೊಂದಿರುವುದು ಬೆಳವಣಿಗೆ, ನವೀಕರಣ ಮತ್ತು ಸ್ಥಿರ ಪ್ರಗತಿಯ ಸಂಕೇತವಾಗಿದೆ. ಇದು ಬಾಗಿಲಿಗೆ ಆಕರ್ಷಕ ಹಾಗೂ ಸ್ವಾಗತಾರ್ಹ ನೋಟವನ್ನು ನೀಡುತ್ತದೆ. ಸಸ್ಯವು ಸ್ವಚ್ಛವಾಗಿ, ಹಸಿರಾಗಿ ಮತ್ತು ಸರಿಯಾದ ಆರೈಕೆಯೊಂದಿಗೆ ಇದ್ದರೆ, ಅದು ಮನೆಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಹಣಕಾಸಿನ ಅದೃಷ್ಟವೆಂದರೆ ಕೇವಲ ಹಣ ಸಂಪಾದನೆ ಮಾತ್ರವಲ್ಲ; ಇದು ವಿಶ್ವಾಸಾರ್ಹ ಆದಾಯ, ಉತ್ತಮ ಉದ್ಯೋಗಾವಕಾಶಗಳು, ಉಪಯುಕ್ತ ಸಂಪರ್ಕಗಳು ಮತ್ತು ಉಳಿತಾಯಕ್ಕೆ ಸಹಕಾರಿ. ಹೀಗಾಗಿ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಜೇಡ್ ಪ್ಲಾಂಟ್, ಬಿದಿರಿನ ಸಸ್ಯ, ಅರೆಕಾ ಪಾಮ್ ಅಥವಾ ಸಣ್ಣ ತುಳಸಿ ಗಿಡವನ್ನು ಇಡಬಹುದು. ಮುಳ್ಳಿನ ಗಿಡಗಳು ಅಥವಾ ಒಣಗಿದ ಎಲೆಗಳಿರುವ ಸಸ್ಯಗಳನ್ನು ದೂರವಿಡಿ. ಸಸ್ಯವಿರುವ ಜಾಗವನ್ನು ಸ್ವಚ್ಛವಾಗಿಡಬೇಕು. ಒಣಗಿದ ಎಲೆಗಳನ್ನು ತೆಗೆಯಬೇಕು ಮತ್ತು ಕುಂಡದ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.