Astrology: ಜ್ಯೋತಿಷ್ಯದಲ್ಲಿ ಶುಕ್ರನನ್ನು ಸಂತೋಷ, ಪ್ರೀತಿ ಮತ್ತು ಸೌಂದರ್ಯದ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳು ಶುಕ್ರನು ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ ಮತ್ತು ಮಾರ್ಚ್ ನಲ್ಲಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
ಮೀನ ರಾಶಿಯನ್ನು ಶುಕ್ರನ ಉತ್ತುಂಗ ರಾಶಿ ಎಂದು ಹೇಳಲಾಗುತ್ತದೆ. ಇದರ ಆಗಮನದಿಂದ ಶುಕ್ರನು ಬಹಳಷ್ಟು ಪ್ರಭಾವ ಬೀರಲಿದ್ದಾನೆ. ಈ ಪರಿಣಾಮದಿಂದಾಗಿ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳು ಹೆಚ್ಚಾಗಲಿವೆ ಎಂದು ಹೇಳಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ, ಮೀನ ರಾಶಿಯಲ್ಲಿ ಶುಕ್ರನ ಪ್ರಭಾವವು ಕೆಲವೊಂದು ರಾಶಿ ಜನರ ಮೇಲೆ ಪ್ರೀತಿ, ವೃತ್ತಿ ಮತ್ತು ಸಂಪತ್ತನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಈ ಅವಧಿಯಲ್ಲಿ ಸಂಬಂಧಗಳು ಬಲಗೊಳ್ಳುವುದರ ಜೊತೆಗೆ ಆರ್ಥಿಕವಾಗಿ ಮುನ್ನಣೆ ಸಾಧಿಸಲಿದ್ದೀರಿ. ಹಾಗಿದ್ದರೆ ಶುಕ್ರನ ಆಗಮನದಿಂದಾಗಿ ಯಾವ ರಾಶಿಯವರು ಪ್ರಯೋಜನ ಪಡೆಯುತ್ತಾರೆ ಎಂದು ನೋಡೋಣ ಬನ್ನಿ...
ವೃಷಭ ರಾಶಿ
ಈ ಶುಕ್ರ ಸಂಚಾರವು ವೃಷಭ ರಾಶಿಯವರಿಗೆ ವಿಶೇಷವಾಗಿ ಫಲಪ್ರದವಾಗಿರುತ್ತದೆ ಏಕೆಂದರೆ ಅವರ ಆಡಳಿತ ಗ್ರಹ ಶುಕ್ರ. ಈ ಜನರಿಗೆ ಹೊಸ ಆದಾಯದ ಮೂಲಗಳು ತೆರೆಯಲಿವೆ. ಹಠಾತ್ ಆರ್ಥಿಕ ಲಾಭಗಳು ಸಂಭವಿಸಲಿವೆ. ಕಚೇರಿಗಳಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದ್ದು, ನಿರೀಕ್ಷಿಸಿದಕ್ಕಿಂತ ಹೆಚ್ಚಾಗಿ ನಿಮ್ಮ ಜೀವನವನ್ನು ನಡೆಸಲಿದ್ದೀರಿ.
ಮಿಥುನ ರಾಶಿ
ಈ ಸಂಚಾರವು ಮಿಥುನ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಪ್ರಯೋಜನಕಾರಿಯಾಗಲಿದೆ. ಕೆಲಸದಲ್ಲಿರುವವರಿಗೆ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗಬಹುದು. ಬಹಳ ದಿನಗಳಿಂದ ಬರಬೇಕಿದ್ದ ಹಣವನ್ನು ನೀವು ಮರಳಿ ಪಡೆಯಬಹುದು. ಹೊಸ ವ್ಯಾಪಾರ ಅವಕಾಶಗಳು ಬರಲಿವೆ. ಕುಟುಂಬದಲ್ಲಿ ಸಂತೋಷದ ಸಮಯವನ್ನು ಕಳೆಯಲಿದ್ದೀರಿ. ಮನೆ ಮತ್ತು ವಾಹನವನ್ನು ಖರೀದಿಸುವವರಿಗೆ ಈ ಸಮಯ ಉತ್ತಮವಾಗಿದೆ.
ಕರ್ಕಾಟಕ ರಾಶಿ
ಶುಕ್ರನ ಚಲನೆಯಿಂದ ಕರ್ಕಾಟಕ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೋರ್ಟು, ಕಛೇರಿ ಕೆಲಸಗಳು ಬೇಗನೆ ಮುಗಿಯಲಿವೆ. ವಿದ್ಯಾರ್ಥಿಗಳಿಗೆ ಅಧ್ಯಯನ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಹೂಡಿಕೆದಾರರು ಲಾಭವನ್ನು ಪಡೆಯಲಿದ್ದಾರೆ. ಆರ್ಥಿಕ ಯೋಗಕ್ಷೇಮ ಸುಧಾರಿಸುತ್ತದೆ. ಮತ್ತು ಕುಟುಂಬದ ಬೆಂಬಲ ಲಭ್ಯವಾಗುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.