ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಶುಕ್ರದೆಸೆ ಆರಂಭ; ಲಕ್ಷ್ಮಿಯ ಕೃಪೆಯಿಂದ ಈ ರಾಶಿಯವರಿಗೆ ಒಲಿದು ಬರಲಿದೆ ಅನಿರೀಕ್ಷಿತ ಧನಯೋಗ! Astrology

Astrology: ಫೆಬ್ರವರಿ 1 ರ ಮಾಘ ಪೂರ್ಣಿಮೆಯಂದು , ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ನೀಡುವ ಶುಕ್ರನು ಉದಯಿಸುತ್ತಾನೆ. ಇವನು ಸುಮಾರು ಒಂಬತ್ತು ತಿಂಗಳುಗಳ ಕಾಲ ತನ್ನ ಸ್ಥಾನದಲ್ಲಿದ್ದ ನಂತರ, ಕೆಲವೊಂದು ರಾಶಿ ಚಿಹ್ನೆಗಳಲ್ಲಿ ನೆಲೆಸುತ್ತಾನೆ. ಜ್ಯೋತಿಷ್ಯದ ಪ್ರಕಾರ, ಶುಕ್ರನ ಈ ಚಲನೆಯು ಈ ರಾಶಿಯವರಿಗಿದ್ದ ಆರ್ಥಿಕ ತೊಂದರೆಯನ್ನು ಕೊನೆಗೊಳಿಸಲು ಸಹಾಯ ಮಾಡುತ್ತಾನೆ. ಹಾಗೂ ಉದ್ಯಮಿಗಳಿಗೆ ಹೂಡಿಕೆಯಲ್ಲಿ ಲಾಭವನ್ನು ಪಡೆಯುತ್ತಾರೆ ಎಂದು ತಿಳಿಸಲಾಗಿದೆ. ಹಾಗಿದ್ದರೆ, ಯಾವ ರಾಶಿಯವರಿಗೆ ಶುಕ್ರನ ಚಲನೆಯು ಒಳ್ಳೆಯದಾಗಲಿದೆ ಎಂದು ನೋಡೋಣ ಬನ್ನಿ...

ವೃಷಭ ರಾಶಿ

ಆದಾಯ ಮತ್ತು ಲಾಭದ ರಾಶಿಯಲ್ಲಿ ಶುಕ್ರನು ಉದಯಿಸುವುದರಿಂದ ಹೊಸ ಆದಾಯದ ಮೂಲಗಳನ್ನು ತೆರೆದುಕೊಳ್ಳಬಹುದು. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವುದರ ಜೊತೆಗೆ ಹೊಸ ಹೂಡಿಕೆಗಳು ಪ್ರಯೋಜನವನ್ನು ನೀಡುತ್ತವೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಉಡುಗರೆಗಳು ದೊರೆಯಲಿವೆ. ಈ ಸಮಯದಲ್ಲಿ ನೀವು ಮನೆ, ವಾಹನ, ಆಸ್ತಿಯನ್ನು ಖರೀದಿಸಲು ಉತ್ತಮ ಸಮಯ ಇದಾಗಿದೆ.

ಮಿಥುನ ರಾಶಿ

ಈ ರಾಶಿಯವರು ಕನಿಷ್ಠ ಪ್ರಯತ್ನದಿಂದ ಉತ್ತಮ ಯಶಸ್ಸನ್ನು ಸಾಧಿಸಬಹುದು. ಉದ್ಯೋಗಿಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಲಿದ್ದು, ಲಾಭದಾಯಕ ವ್ಯವಹಾರವನ್ನು ಕಂಡುಕೊಳ್ಳಬಹುದು. ಈ ಸಂದರ್ಭದಲ್ಲಿ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ಆರ್ಥಿಕ ಉಳಿತಾಯ ಸಾಧ್ಯವಾಗಲಿವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಕ್ರಮೇಣ ಮಾಯವಾಗಿ ಸಂಬಂಧಗಳು ಬಲಪಡುತ್ತವೆ.

ಮೀನ ರಾಶಿ

ಈ ರಾಶಿಯವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿದ್ದು, ಆರ್ಥಿಕ ಪರಿಸ್ಥಿತಿಗಳು ಬಲಗೊಳ್ಳಲಿವೆ. ಈ ಜನರ ವ್ಯಕ್ತಿತ್ವ ಮತ್ತು ನಡವಳಿಕೆಯು ಆಕರ್ಷಣೆಯಲ್ಲಿ ಹೆಚ್ಚಾಗುತ್ತದೆ. ನಿಮ್ಮ ಮಾತು ಜನರನ್ನು ಆಕರ್ಷಿಸುತ್ತದೆ. ಕೆಲಸದಲ್ಲಿ ಸೃಜನಶೀಲ ಚಿಂತನೆಗೆ ಮೆಚ್ಚುಗೆ ಸಿಗುತ್ತದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳಲಿವೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.