Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಶುಕ್ರ-ಶನಿ ಸಂಗಮ: ಈ ರಾಶಿಯವರ ಕಷ್ಟಕ್ಕೆ ಮುಕ್ತಿ, ಸಿಹಿಸುದ್ದಿ ಕೇಳಲು ಸನ್ನದ್ಧರಾಗಿ! Astrology

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿಷ್ಯದಲ್ಲಿ ಶಕ್ರ ಮತ್ತು ಶನಿಯನ್ನು ಮಿತ್ರ ಗ್ರಹಗಳೆಂದು ಕರೆಯಲಾಗುತ್ತದೆ
  • ಫೆಬ್ರವರಿ ತಿಂಗಳಲ್ಲಿ ಈ ಗ್ರಹಗಳು ಸಂಯೋಗ ಹೊಂದುತ್ತವೆ ಎಂದು ಜ್ಯೋತಿಷ್ಯ ತಿಳಿಸುತ್ತದೆ
  • ಶನಿಯು ಮಾರ್ಚ್ 2 ರಂದು ಶುಕ್ರನ ರಾಶಿಗೆ ಸಂಚಾರ ನಡೆಸುತ್ತಾನೆ
Astrology: ಜ್ಯೋತಿಷ್ಯದಲ್ಲಿ ಶಕ್ರ ಮತ್ತು ಶನಿಯನ್ನು ಮಿತ್ರ ಗ್ರಹಗಳೆಂದು ಕರೆಯಲಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ಈ ಗ್ರಹಗಳು ಸಂಯೋಗ ಹೊಂದುತ್ತವೆ ಎನ್ನಲಾಗುತ್ತದೆ. ಪ್ರಸ್ತುತ ಶನಿಯು ಮೀನ ರಾಶಿಯಲ್ಲಿದ್ದಾನೆ. ಇವನು ಮಾರ್ಚ್ 2 ರಂದು ಶುಕ್ರನು ಈ ರಾಶಿಗೆ ಸಂಚಾರ ನಡೆಸುತ್ತಾನೆ. ಮೀನ ರಾಶಿಯಲ್ಲಿ ಗ್ರಹಗಳ ಸಂಯೋಗವು ಕೆಲವೊಂದು ರಾಶಿಗಳಿಗೆ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...
ಮಿಥುನ ರಾಶಿ
ಗ್ರಹಗಳ ಸಂಯೋಜನೆಯು ಮಿಥುನ ರಾಶಿಯಲ್ಲಿ ಜನಿಸಿದವರ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ಈ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವಾಹನ ಅಥವಾ ಮನೆ ಖರೀದಿಸಲು ಯೋಜಿಸುತ್ತಿದ್ದರೆ, ಉತ್ತಮ ಅವಕಾಶ ಸಿಗುವ ಸಮಯ ಇದಾಗಿದೆ. ಕುಟುಂಬದಲ್ಲಿ ಉತ್ತಮ ವಾತಾವರಣವಿರಲಿದ್ದು, ಹಿರಿಯರ ಆಶೀರ್ವಾದದಿಂದ ಮುನ್ನಡೆ ಸಾಧಿಸಲಿದ್ದೀರಿ.

ಕನ್ಯಾ ರಾಶಿ

ಈ ಶುಕ್ರ-ಶನಿ ಸಂಯೋಗವು ಆರ್ಥಿಕವಾಗಿ ಪ್ರಯೋಜನ ನೀಡಲಿವೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಹಠಾತ್ ಆರ್ಥಿಕವಾಗಿ ಸಬಲಗೊಳ್ಳಲಿದ್ದೀರಿ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಆರೋಗ್ಯವು ಸುಧಾರಿಸುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಕುಂಭ ರಾಶಿ

ಕುಂಭ ರಾಶಿಯ ಆಳುವ ಗ್ರಹ ಶನಿ. ಶುಕ್ರನೊಂದಿಗೆ ಶನಿಯ ಸಂಯೋಗವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ದೇಹದಲ್ಲಿ ಆರೋಗ್ಯ ಸುಧಾರಿಸಲಿದ್ದು, ನಿಮ್ಮ ಮನೆಯವರು ನಿಮ್ಮ ಜೊತೆ ನಿಲ್ಲಲಿದ್ದಾರೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.