Vastu Tips: ಪ್ರತಿಯೊಬ್ಬರು ಕೂಡಾ ಸ್ನಾನವನ್ನು ಮಾಡೇ ಮಾಡುತ್ತಾರೆ. ಸ್ನಾನವು ದೇಹವನ್ನು ಶುದ್ಧೀಕರಿಸುವುದಲ್ಲದೇ, ಮನಸ್ಸಿನಿಂದ ನಕರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಒಂದು ಮಾರ್ಗವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧೀಕರಿಸುತ್ತದೆ. ಆದಾಗ್ಯೂ, ಸ್ನಾನದ ನೀರಿಗೆ ಉಪ್ಪು ಮತ್ತು ಗಿಡಮೂಲಿಕೆಗಳನ್ನು ಸೇರಿಸಿ ಸ್ನಾನ ಮಾಡುವುದರಿಂದ ಅದೃಷ್ಟ, ಸಂಪತ್ತು ಮತ್ತು ಪ್ರಗತಿಯನ್ನು ಸಾಧಿಸಲು ಸಹಾಯವಾಗುತ್ತದೆ ಎಂದು ತಿಳಿಸುತ್ತದೆ. ಹಾಗಿದ್ದರೆ, ನೀರಿಗೆ ಸೇರಿಸುವ ಆ ವಸ್ತುಗಳು ಯಾವುದು ಎಂದು ನೋಡೋಣ ಬನ್ನಿ....
ಕಪ್ಪು ಉಪ್ಪು
ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪು ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ. ಹಾಗಾಗಿ ಸ್ನಾನದ ನೀರಿಗೆ ಇದನ್ನು ಸೇರಿಸಿದಾಗ ಅದು ಮಾನಸಿಕ ಒತ್ತಡ, ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ದಿನವನ್ನು ಬೆಳಕು ಮತ್ತು ಸಕರಾಥ್ಮಕತೆಯಿಂದ ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಗಂಗಾ ನೀರು
ಹಿಂದೂ ಧರ್ಮದಲ್ಲಿ ಗಂಗಾ ನೀರನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಸ್ನಾನದ ನೀರಿಗೆ ಕೆಲವು ಹನಿ ಗಂಗಾ ನೀರನ್ನು ಸೇರಿಸುವುದರಿಂದ ಸ್ನಾನ ಶುದ್ಧವಾಗುತ್ತದೆ. ಇದರಿಂದ ಮನಸ್ಸು ನೆಮ್ಮದಿಯಿಂದ ಕೂಡಿದ್ದು, ನಕರಾತ್ಮಕ ಆಲೋಚನೆಗಳನ್ನು ದೂರ ತಳ್ಳುತ್ತದೆ ಎಂದು ನಂಬಲಾಗಿದೆ.
ತುಳಸಿ ಎಲೆಗಳು
ಹಿಂದೂ ಧರ್ಮದಲ್ಲಿ ತುಳಸಿ ಎಲೆಗಳನ್ನು ವಿಷ್ಣುವಿನ ಮತ್ತು ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನದ ನೀರಿಗೆ ತುಳಸಿ ನೀರನ್ನು ಸೇರಿಸಿ ಸ್ನಾನ ಮಾಡುವುದರಿಂದ ಇದು ಮಾನಸಿಕ ಒತ್ತಡ, ಯಾತನೆ, ನಕರಾತ್ಮಕ ಸಮಸ್ಯೆಗಳಿಂದ ದೂರ ಮಾಡುತ್ತದೆ ಎಂದು ತಿಳಿಸಲಾಗಿದೆ. ಈ ಅಭ್ಯಾಸವನ್ನು ಪ್ರತಿನಿತ್ಯ ರೂಢಿ ಮಾಡಿಕೊಳ್ಳುವುದರಿಂದ ಮನೆಯ ವಾತಾವರಣಕ್ಕೆ ಒಳ್ಳೆಯ ಅನುಭವ ಬರುತ್ತದೆ.
ಬೇವಿನ ಎಲೆಗಳು
ವಾಸ್ತು ಶಾಸ್ತ್ರದಲ್ಲಿ ಬೇವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಬೇವು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಇದನ್ನು ಸ್ನಾನದೊಂದಿಗೆ ಬಳಸುವುದರಿಂದ ಅಲರ್ಜಿ, ತುರಿಕೆ ಸಮಸ್ಯೆಗಳು ದೂರಾಗುತ್ತವೆ. ಇದು ನಕರಾತ್ಮಕ ಶಕ್ತಿಯನ್ನು ದೂರಗೊಳಿಸುವುದರ ಜೊತೆಗೆ ದಿನವನ್ನು ಉಲ್ಲಾಸವಾಗಿರುವಂತೆ ಮಾಡುತ್ತದೆ.
ಕೇಸರಿ
ವಾಸ್ತು ಶಾಸ್ತ್ರದಲ್ಲಿ ಕೇಸರಿ ಹೆಚ್ಚು ಮಹತ್ವವನ್ನು ಹೊಂದಿದೆ. ಇದು ಮನೆಯನ್ನು ಸಂತೋಷವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸನ್ನು ಉಲ್ಲಾಸಗೊಳಿಸಿ, ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಕೇಸರಿಯನ್ನು ಹಾಕಿ ಸ್ನಾನ ಮಾಡಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.