ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಲಕ್ಷ್ಮೀ ದೇವಿ ಕೋಪಗೊಂಡ ಮನೆಯಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ! Vastu tips

ಭಾನುಪ್ರಿಯ ಡಿ.ಕೆ
Vastu tips: ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಹೆಚ್ಚು ಪೂಜಿಸಲಾಗುತ್ತದೆ. ಅವರನ್ನು ಸಂಪತ್ತಿನ ದೇವತೆ ಎಂದೂ ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದವರು ಯಾವಾಗಲು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತಾರೆ.
ಆದರೆ, ಲಕ್ಷ್ಮೀ ದೇವಿಯು ಒಬ್ಬ ವ್ಯಕ್ತಿಯ ಮೇಲೆ ಕೋಪಗೊಂಡರೆ, ಆ ವ್ಯಕ್ತಿ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜ್ಯೊತಿಷ್ಯದ ಪ್ರಕಾರ, ಲಕ್ಷ್ಮಿ ದೇವಿಯು ಅಸಂತೋಷಗೊಂಡಾಗಲೆಲ್ಲಾ, ಆ ವ್ಯಕ್ತಿಯು ಕೆಲವು ಅಹಿತಕರ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಹಾಗಿದ್ದರೆ, ಆ ಲಕ್ಷಣಗಳು ಯಾವುದು ಎಂದು ನೋಡೋಣ ಬನ್ನಿ...
ಚಿನ್ನ- ಬೆಳ್ಳಿ ಕಳೆದುಹೋಗುತ್ತಿದ್ದರೆ
ವಾಸ್ತು ಶಾಸ್ತ್ರದ ಪ್ರಕಾರ, ಚಿನ್ನ- ಬೆಳ್ಳಿಯನ್ನು ಕಳೆದುಕೊಳ್ಳುತ್ತಿದ್ದರೆ ಅದನ್ನು ಶುಭ ಶಕುನವಲ್ಲ ಎಂದು ಕರೆಯಲಾಗುತ್ತದೆ. ಬದಲಾಗಿ ಆ ವ್ಯಕ್ತಿಯ ಮೇಲೆ ಅಲ್ಷ್ಮೀ ದೇವಿಯು ಅಸಮಾಧಾನಗೊಂಡಿದ್ದಾಳೆ ಎಂದು ಕರೆಯಲಾಗುತ್ತದೆ.

ಮನೆಯ ಖರ್ಚುಗಳಲ್ಲಿ ಹಠಾತ್ ಹೆಚ್ಚಳ

ಮನೆಯ ಖರ್ಚುಗಳಲ್ಲಿ ಇದ್ದಕ್ಕಿಂದಂತೆಯೇ ಯಾವುದೇ ಕಾರಣವಿಲ್ಲದೆ ಹೆಚ್ಚಳವಾಗುತ್ತಿರುವುದು, ಹಣ ದುಂದು ವೆಚ್ಚವಾಗುವುದು, ಉಳಿತಾಯ ಮಾಡಲು ಸಾಧ್ಯವಾಗದಿದ್ದರೆ, ಲಕ್ಷ್ಮೀ ದೇವಿ ಅಸಮಾಧಾನ ಗೊಂಡಿದ್ದಾಳೆ ಎಂದು ಸೂಚಿಸಲಾಗುತ್ತದೆ.

ಹಣ ನಷ್ಟಕ್ಕೆ ಸಂಬಂಧಿಸಿದ ಕನಸುಗಳು ಬಿದ್ದರೆ

ವಾಸ್ತು ಶಾಸ್ತ್ರದ ಪ್ರಕಾರ, ಹಣದ ನಷ್ಟ ಅಥವಾ ಹಾನಿಯ ಕನಸುಗಳು ಬೀಳಲಾರಂಭಿಸಿದರೆ, ಇದನ್ನು ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇದರರ್ಥ ನೀವು ಮುಂದಿನ ದಿನಗಳಲ್ಲಿ ಕೆಲವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತೀರಿ ಎಂದು ತೋರಿಸುವ ಮುನ್ಸೂಚನೆಯಾಗಿದೆ.

ತುಳಸಿ ಒಣಗಿದರೆ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ತುಳಸಿ ಅಥವಾ ಇತರ ಶುಭ ಸಸ್ಯಗಳು ಪೋಷಣೆ ಮಾಡಿದರೂ ಒಣಗಲು ಪ್ರಾರಂಭಿಸಿದರೆ ಅಥವಾ ಸಸ್ಯಗಳು ಬೆಳೆಯುವುದನ್ನು ನಿಲ್ಲಿಸಿದರೆ, ಇದು ಲಕ್ಷ್ಮೀ ದೇವಿಯ ಆಶೀರ್ವಾದ ಕ್ಷೀಣಿಸುತ್ತಿದೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ನಿರಂತರ ಜಗಳಗಳು ನಡೆಯುತ್ತಿದ್ದರೆ

ಕುಟುಂಬದಲ್ಲಿ ಗಂಡ ಹೆಂಡತಿ ನಡುವೆ ಅಥವಾ ಕುಟುಂಬಸ್ಥರ ನಡುವೆ ಕ್ಷುಲ್ಲಕ ಕಾರಣಕ್ಕೆ ವಾದ ವಿವಾದಗಳು ನಡೆಯುತ್ತಿದ್ದರೆ, ಅದನ್ನು ಲಕ್ಷ್ಮೀ ದೇವಿಯ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತದೆ. ಈ ರೀತಿಯ ಭಿನ್ನಾಭಿಪ್ರಾಯ ಇರುವಂತಹ ಮನೆಯಲ್ಲಿ ಲಕ್ಷ್ಮೀ ವಾಸಿಸುವುದಿಲ್ಲ ಎಂದು ಜ್ಯೋತಿಷ್ಯ ತಿಳಿಸುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.