ಈ ಒಂದು ವಸ್ತುವನ್ನು ನಿಮ್ಮ ಮನೆಯಲ್ಲಿ ಅಡಗಿಸಿಟ್ಟರೆ ಸಾಕು ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ! Vastu  
ಜ್ಯೋತಿಷ್ಯ

ಈ ಒಂದು ವಸ್ತುವನ್ನು ನಿಮ್ಮ ಮನೆಯಲ್ಲಿ ಅಡಗಿಸಿಟ್ಟರೆ ಸಾಕು ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ! Vastu

ಪ್ರಮುಖ ಮುಖ್ಯಾಂಶಗಳು

  • ಮನೆಯ ವಿಚಾರಕ್ಕೆ ಬಂದಾಗ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ
  • ವಾಸ್ತು ನಿಯಮಗಳನ್ನು ಅನುಸರಿಸಿ ಯಾವುದೇ ಕೆಲಸ ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತೆ
  • ಒಂದು ವೇಳೆ ವಾಸ್ತು ನಿಯಮ ಉಲ್ಲಂಘಿಸಿದ್ರೆ ಶ್ರೀಮಂತ ಮನೆಗಳು ಸಹ ಬಡವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲ್ಲ
  • ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಣದ ಆಕರ್ಷಣೆಯನ್ನು ಹೆಚ್ಚಿಸಲು ಪಟಿಕ ಅತ್ಯಂತ ಪರಿಣಾಮಕಾರಿ
Vastu : ಮನೆಯ ವಿಚಾರಕ್ಕೆ ಬಂದಾಗ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಗ್ರಂಥವು ಮನೆಯನ್ನು ನಿರ್ಮಿಸುವ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸಿ ಯಾವುದೇ ಕೆಲಸವನ್ನು ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಕುಟುಂಬವು ಸಮೃದ್ಧವಾಗುತ್ತದೆ ಎಂದು ಬಲವಾಗಿ ನಂಬಲಾಗಿದೆ. ಅದೇ ಸಮಯದಲ್ಲಿ, ಅದನ್ನು ಉಲ್ಲಂಘಿಸಿದರೆ, ಶ್ರೀಮಂತ ಮನೆಗಳು ಸಹ ಬಡವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹಿಂದು ಧರ್ಮದಲ್ಲಿ ಬಲವಾಗಿ ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಧನ ಅಥವಾ ಹಣದ ಆಕರ್ಷಣೆಯನ್ನು ಹೆಚ್ಚಿಸಲು ಪಟಿಕವನ್ನು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿ ಬಳಸಲಾಗುತ್ತದೆ. ಈ ವಿಶೇಷ ವಾಸ್ತು ನಿಯಮವನ್ನು ಪಾಲಿಸಲು ನಮಗೆ ಕೇವಲ ಒಂದೇ ಒಂದು ಪಟಿಕದ ತುಂಡು ಸಾಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಅಪಾರ ಮಹತ್ವ ಹೊಂದಿರುವ ಈ ಕಲ್ಲನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಅಥವಾ ಜಾಗದಲ್ಲಿ ಇಡುವುದರಿಂದ ನೆಗಿಟಿವ್​ ಶಕ್ತಿ ದೂರವಾಗಿ, ಆರ್ಥಿಕ ಪ್ರಗತಿ ವೃದ್ಧಿಸುವುದರ ಜೊತೆಗೆ ಹತ್ತಾರು ರೀತಿಯ ಅದ್ಭುತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಸರಳ ವಾಸ್ತು ಪರಿಹಾರಕ್ಕಾಗಿ ಮೊದಲು ಒಂದು ಪಟಿಕದ ತುಂಡನ್ನು ಖರೀದಿಸಿ, ಅದನ್ನು ಒಂದು ಸಣ್ಣ ಬಟ್ಟಲಿನಲ್ಲಿ ಹಾಕಿಡಬೇಕು. ನೆನಪಿಡಿ, ಈ ಬಟ್ಟಲಿನ ಮೇಲೆ ಯಾವುದೇ ಕಾರಣಕ್ಕೂ ಮುಚ್ಚಳವನ್ನು ಮುಚ್ಚಬಾರದು ಅಂದರೆ, ಓಪನ್​ ಆಗಿರಬೇಕು. ನಂತರ ಇದನ್ನು ನಿಮ್ಮ ಮನೆ ಅಥವಾ ಕಚೇರಿಯ ಯಾವುದೇ ಮೂಲೆಯಲ್ಲಿ, ಇತರರ ಕಣ್ಣಿಗೆ ನೇರವಾಗಿ ಬೀಳದಂತಹ ಜಾಗದಲ್ಲಿ ಸುರಕ್ಷಿತವಾಗಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಜಾಗದಲ್ಲಿರುವ ನೆಗೆಟಿವ್​ ಶಕ್ತಿಗಳು ನಾಶವಾಗಿ, ಮನೆಯ ಎಲ್ಲಾ ವಾಸ್ತು ದೋಷಗಳು ಹಾಗೂ ಸಮಸ್ಯೆಗಳು ಹಂತಹಂತವಾಗಿ ದೂರವಾಗುತ್ತಾ ಸಾಗುತ್ತವೆ.
ತೆರೆದ ಗಾಳಿಯಲ್ಲಿ ಹಾಗೆಯೇ ಇಡುವುದರಿಂದ ಈ ಪಟಿಕವು ದಿನಕಳೆದಂತೆ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಪಟಿಕವು ಗಾಳಿಯಲ್ಲಿನ ನೆಗೆಟಿವ್​ ಶಕ್ತಿಯನ್ನು ಹೀರಿಕೊಂಡಾಗ ಈ ರೀತಿ ಬಣ್ಣ ಬದಲಾಗುತ್ತದೆ. ಆ ಸಂದರ್ಭದಲ್ಲಿ ಆ ಹಳೆಯ ಪಟಿಕದ ತುಂಡನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡಬೇಕು ಅಥವಾ ಯಾರು ತುಳಿಯದ ಜಾಗದಲ್ಲಿ ಹಾಕಬೇಕು. ನಂತರ ಅದರ ಜಾಗಕ್ಕೆ ಮತ್ತೊಂದು ಹೊಸ ಪಟಿಕದ ತುಂಡನ್ನು ತಂದು ಅದೇ ಜಾಗದಲ್ಲಿ ಇಡಬೇಕು.
ಪಟಿಕದ ಈ ವಿಶೇಷ ಪರಿಹಾರವು ಕೇವಲ ಮನೆಯಲ್ಲಿರುವ ವಾಸ್ತು ದೋಷಗಳನ್ನು ನಿವಾರಿಸುವುದು ಮಾತ್ರವಲ್ಲದೆ, ಧನ ಆಕರ್ಷಣೆಯ ಶಕ್ತಿಯನ್ನು ಸಹ ಹೊಂದಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಅಡಚಣೆಗಳು ನಿವಾರಣೆಯಾಗಿ, ಧನಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹದಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲು ಇದು ನೆರವಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.