Astrology: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ನವಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಿದಾಗ ಅಥವಾ ನಿರ್ದಿಷ್ಟ ನಕ್ಷತ್ರಗಳಲ್ಲಿ ಸಂಚರಿಸಿದಾಗ ಆಕಾಶ ಮಂಡಲದಲ್ಲಿ ಹಲವಾರು ಪ್ರಮುಖ ಯೋಗಗಳು ಮತ್ತು ಸಂಯೋಗಗಳು ಸೃಷ್ಟಿಯಾಗುತ್ತವೆ. ಈ ಯೋಗಗಳು ಮಾನವ ಜೀವನದ ಮೇಲೆ ಮತ್ತು ಪ್ರಕೃತಿಯ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ದೃಕ್ ಪಂಚಾಂಗದ ಪ್ರಕಾರ, ಇಂದು ಅಂದರೆ ಜೂನ್ 4 ರಂದು ಸೂರ್ಯ ಮತ್ತು ಚಂದ್ರರ ವಿಶೇಷ ಸಂಯೋಗದಿಂದಾಗಿ ಅತ್ಯಂತ ಪ್ರಮುಖವಾದ 'ವೈಧೃತಿ ಯೋಗ' ಮೂಡಿಬಂದಿದ್ದು, ಜ್ಯೋತಿಷ್ಯ ದೃಷ್ಟಿಕೋನದಿಂದ ಇದು ಬಹಳ ಮಹತ್ವದ ದಿನವೆಂದು ಪರಿಗಣಿಸಲಾಗಿದೆ.
ಆದಾಗ್ಯೂ, ಈ ಶುಭ ಗಳಿಗೆಯು ಇಂದು ಸಂಜೆ 6.09ಕ್ಕೆ ಆರಂಭವಾಗಲಿದ್ದು, ಎಲ್ಲಾ ರಾಶಿ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಆದರೆ ಈ ಸಮಯದಲ್ಲಿ ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳು ಉತ್ತಮ ಸಾಧನೆಗಳು, ಆರ್ಥಿಕ ಪ್ರಗತಿ ಮತ್ತು ಹೊಸ ವೃತ್ತಿ ಅವಕಾಶಗಳನ್ನು ಅನುಭವಿಸುತ್ತವೆ. ಈ ಶುಭ ಸಮಯದಲ್ಲಿ ಯಾವ ರಾಶಿಯವರಿಗೆ ಅದೃಷ್ಟವಾಗಲಿದೆ ಎಂದು ನೋಡೋಣ ಬನ್ನಿ...
ಮೇಷ ರಾಶಿ
ಈ ಗ್ರಹಗಳ ಸಂಯೋಜನೆಯು ಮೇಷ ರಾಶಿಯವರಿಗೆ ಆರ್ಥಿಕವಾಗಿ ಮುನ್ನಡೆಸಲು ಸಹಾಯ ಮಾಡಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗಿಗಳಿಗೆ ಕಚೇರಿಗಳಲ್ಲಿ ಉತ್ತಮ ನೆಮ್ಮದಿ ಸಿಗುವ ಸಮಯ ಇದಾಗಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯ ಪೂರ್ಣ ಬೆಂಬಲದೊಂದಿಗೆ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ.
ಸಿಂಹ ರಾಶಿ
ಗ್ರಹಗಳ ಸಂಯೋಗದಿಂದ ಸೂರ್ಯನ ಈ ಸ್ಥಾನವು ಸಿಂಹ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕಚೇರಿಗಳಲ್ಲಿ ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ರಾಜಕೀಯ ಅಥವಾ ಸಾಮಾಜಿಕ ಕೆಲಸದಲ್ಲಿ ತೊಡಗಿರುವವರು ಉನ್ನತ ಸ್ಥಾನವನ್ನು ಪಡೆಯಬಹುದು. ಹೊಸ ವ್ಯವಹಾರ ಮಾಡಲು ಪ್ರಯತ್ನಿಸುವವರಿಗೆ ಈ ಸಮಯ ಬಹಳ ಒಳ್ಳೆಯದಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ.
ಧನು ರಾಶಿ
ಈ ಸಮಯವು ಧನು ರಾಶಿಯವರಿಗೆ ಅದೃಷ್ಟ ತರುವಂತದ್ದಾಗಿದೆ. ಈ ಜನರಿಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಲಿದ್ದು, ದೀರ್ಘ ಮತ್ತು ಪ್ರಯೋಜನಕಾರಿ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಸಂಬಳ, ಬಡ್ತಿ, ಹೆಚ್ಚಾಗುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒಳ್ಳೆಯ ಸಮಯ ಇದಾಗಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ತಂದೆ-ತಾಯಿ ಆಶೀರ್ವಾದದಿಂದ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.