ಜ್ಯೋತಿಷ್ಯ

ತುಳಸಿ ವಿವಾಹ: ಈ 3 ರಾಶಿಯವರಿಗೆ ಧನ-ಸಂಪತ್ತಿನ ಜಾಕ್​ಪಾಟ್​! Astrology

Astrology: ತುಳಸಿ ವಿವಾಹವು ಹಿಂದೂ ಧರ್ಮದ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ. ಇಲ್ಲಿ ತುಳಸಿ ದೇವಿಯನ್ನು ಭಗವಾನ್​ ವಿಷ್ಣು ಅಥವಾ ಶಾಲಿಗ್ರಾಮ ಶಿಲೆಯೊಂದಿಗೆ ವಿವಾಹ ಮಾಡುವ ಆಚರಣೆಯಾಗಿದೆ. ಈ ಬಾರಿಯ ತುಳಸಿ ವಿವಾಹವನ್ನು ನವೆಂಬರ್ 2 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಮೂರು ರಾಶಿ ಚಕ್ರದಲ್ಲಿ ಶುಕ್ರನು ಸಂಚಾರ ನಡೆಸುತ್ತಾನೆ. ಇದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯುಬಹುದಾಗಿದೆ. ಹಾಗಿದ್ದರೆ, ಯಾವ ರಾಶಿಯವದರಿಗೆ ಏನು ಫಲವಿದೆ ಎಂದು ತಿಳಿಯೋಣ ಬನ್ನಿ...

ಕನ್ಯಾರಾಶಿ

ತುಳಸಿ ವಿವಾಹದಂದು ಕನ್ಯಾ ರಾಶಿಯವರಿಗೆ ಶುಕ್ರನ ಸಂಚಾರವು ವಿವಾಹ ಪ್ರಸ್ತಾಪವನ್ನು ತರಬಹುದು. ದಂಪತಿಗಳಲ್ಲಿರುವ ಅಂತರವು ದೂರವಾಗಿ ಸಂಬಂಧಗಳು ಸುಧಾರಿಸುತ್ತವೆ, ಹೊಸ ಕೆಲಸ ಹುಡುಕುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಕೆಲಸ ಕಾರ್ಯದಲ್ಲಿ ಹೊಸ ಒಪ್ಪಂದಗಳು ಅಥವಾ ಪಾಲುದಾರಿಕೆಗಳು ಕಂಡುಬರುತ್ತವೆ. ಫ್ಯಾಷನ್​ ಮತ್ತು ವಿನ್ಯಾಸ ಉದ್ಯಮದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ ನಿರೀಕ್ಷೆ. ನಕರಾತ್ಮಕ ನಿರ್ಧಾರಗಳು ಜೀವನದಿಂದ ಹೊರಹೋಗುವಂತಹ ಸಮಯ ಇದಾಗಿದೆ. ಹೊಸ ಸಂಬಂಧದ ಆರಂಭವು ಜೀವನದಲ್ಲಿ ಶಾಶ್ವತ ನೆಮ್ಮದಿಯನ್ನು ತರುತ್ತದೆ.

ತುಲಾ ರಾಶಿ

ತುಳಸಿ ಕಾರ್ತಿಕದಂದು ತುಲಾ ರಾಶಿಯಲ್ಲಿ ಶುಕ್ರನು ಸಂಚರಿಸುವುದರಿಂದ ಹಳೆಯ ತಪ್ಪು ತಿಳುವಳಿಕೆಗಳು ಕೊನೆಗೊಳ್ಳುತ್ತವೆ. ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ದೂರಾಗುವ ಸಮಯ ಇದಾಗಿದೆ. ಸಂಬಂಧಗಳಲ್ಲಿ ಉತ್ತಮ ನಡುವಳಿಕೆ ಕಾಣಲಿದ್ದೀರಿ. ಮದುವೆ ಪ್ರಸ್ತಾಪ ಮಾಡುತ್ತಿರುವಂತವರಿಗೆ ಕಂಕಣ ಬಲ ಕೂಡಿಬರಲಿದೆ. ನಿಮ್ಮ ಮಾತು ನಡುವಳಿಕೆಗಳು ಜನರ ಮೆಚ್ಚುಗೆಯನ್ನು ಗಳಿಸುತ್ತದೆ.

ಮೀನ ರಾಶಿ

ಮೀನ ರಾಶಿ ಚಕ್ರದಲ್ಲಿ ಶುಕ್ರ ಸಂಚಾರ ಮಾಡುವುದರಿಂದ ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ದೂರ ಪ್ರಯಾಣ, ಉನ್ನತ ಅಧ್ಯಯನ ಮತ್ತು ಹೊಸ ಅನುಭವಗಳಿಂದ ತುಂಬಿರುವಂತಹ ಸಮಯ ಇದಾಗಿದೆ. ವಿದೇಶಿ ಹೂಡಿಕೆಗಳು ಉತ್ತಮ ಲಾಭವನ್ನು ತಂದುಕೊಡಲಿವೆ. ತುಳಸಿ ವಿವಾಹದ ಸಮಯದಲ್ಲಿ ನೀವು ಮಾಡುವಂತಹ ಯಾವುದೇ ಕೆಲಸಗಳು ಉತ್ತಮ ಲಾಭವನ್ನು ಪಡೆಯುತ್ತವೆ. ಬಾಕಿ ಇರುವಂತಹ ಕೆಲಸಗಳು ಪೂರ್ಣಗೊಳ್ಳುವಂತಹ ಸಮಯ ಇದಾಗಿದೆ. (ಏಜೆನ್ಸೀಸ್​)