ಜ್ಯೋತಿಷ್ಯ

ಸೂರ್ಯನ ಪ್ರವೇಶ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ನಿಮ್ದೂ ಇದೇ ರಾಶಿನಾ? Astrology

Astrology: ಈ ಬಾರಿಯ ನವೆಂಬರ್​ 15 ರಂದು ಏಕಾದಶಿ ಉಪವಾಸವನ್ನು ಆಚರಿಸಲಾಗುವುದು. ಮರುದಿನ (ನ. 16) ಗ್ರಹಾಧಿಪತಿ ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಒಂದು ವರ್ಷದ ನಂತರ ಸೂರ್ಯ ಈ ರಾಶಿಗೆ ಮರಳುತ್ತಿದ್ದಾನೆ. ಈ ವೇಳೆ ವೃಶ್ಚಿಕ ರಾಶಿಯಲ್ಲಿ ಮಂಗಳ, ಬುಧ ಮತ್ತು ಸೂರ್ಯನ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿರುವುದು ಅಪರೂಪದ ಸಂಯೋಗವಾಗಿದೆ.

ಜ್ಯೋತಿಷ್ಯದ ಪ್ರಕಾರ, ಅಪರೂಪದ ಈ 4 ಸಂಯೋಗವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ಅದೃಷ್ಟವನ್ನು ತರುತ್ತದೆ. ಈ ಸಮಯದಲ್ಲಿ ಜನರು ವೃತ್ತಿ, ಹಣಕಾಸಿನ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಸೂರ್ಯನ ಸಂಚಾರವು ಅದೃಷ್ಟವನ್ನು ತರುತ್ತದೆ. ಈ ಅವಧಿಯಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ನಡೆಸಬಹುದು. ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ಕಂಡುಕೊಳ್ಳುತ್ತೀರಿ. ಕೊಟ್ಟ ಹಣ ವಾಪಾಸ್ಸಾಗುವ ನಿರೀಕ್ಷೆ ಇದೆ. ಈ ಹಿಂದೆ ಮಾಡಿದ ಹೂಡಿಕೆಗಳಲ್ಲಿ ಲಾಭ ಪಡೆಯುವ ಸಾಧ್ಯೆತೆ ಹೆಚ್ಚಿದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ನವೆಂಬರ್​ 16 ರಿಂದ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಈ ವೇಳೆ ಸೂರ್ಯನು ಈ ರಾಶಿಗೆ ಪ್ರವೇಶ ನಡೆಸುವುದರಿಂದ ನಿಮ್ಮ ಜಾಣ್ಮೆ, ಶಕ್ತಿ, ಧೈರ್ಯ, ಕೌಶಲ್ಯ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ನೀವು ಕೆಲಸ ಮಾಡುವ ಕಚೇರಿಯಲ್ಲಿ ಮೇಲಾಧಿಕಾರಿಗಳ ಪ್ರಶಂಸೆಯನ್ನು ಪಡೆಯುತ್ತೀರಿ. ಆದಾಯ ಮತ್ತು ಬಡ್ತಿಗಳಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಸಮಯದಲ್ಲಿ ಉತ್ತಮ ಲಾಭಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.

ಮಕರ ರಾಶಿ

ಸೂರ್ಯನ ಸಂಚಾರವು ಮಕರ ರಾಶಿಯವರಿಗೆ ತುಂಬಾ ಶುಭವಾಗಿರುತ್ತದೆ. ನಿಮ್ಮ ಅದಾಯ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಬಲಪಡುತ್ತದೆ. ರಹಸ್ಯ ಅಥವಾ ಅನಿರೀಕ್ಷಿತ ಮೂಲಗಳಿಂದ ಹಣ ಬರುವ ಸಾಧ್ಯತೆ ಹೆಚ್ಚಿದೆ. ಗುರು-ಹಿರಿಯರ ಆಶೀರ್ವಾದ ಹೆಚ್ಚಿರುವುದರಿಂದ ಅಂದುಕೊಂಡ ಕೆಲಸಗಳು ಬೇಗನೆ ಸಾಗುತ್ತವೆ. ಈ ಹಿಂದೆ ಮಾಡಿದಂತಹ ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.