ಸಾಂದರ್ಭಿಕ ಚಿತ್ರ  
ಜ್ಯೋತಿಷ್ಯ

ಈ 3 ರಾಶಿಯವರಿಗೆ ಕೋಪ ಬಂದರೆ ಕೆರಳಿದ ಸಿಂಹದಂತೆ ವರ್ತಿಸುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac signs

ಪ್ರಮುಖ ಮುಖ್ಯಾಂಶಗಳು

  • ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ
  • ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಹುಟ್ಟಿದ ಘಳಿಗೆ ಮತ್ತು ರಾಶಿ ಆತನ ಭವಿಷ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ
  • ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ
  • ವ್ಯಕ್ತಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆಯೂ ಜನ್ಮ ರಾಶಿ ಗಮನಾರ್ಹ ಪ್ರಭಾವ ಬೀರುತ್ತದೆ
Zodiac signs : ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ. ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ಸಮಯದಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಸ್ಥಾನವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ನಾವು ಬದುಕುತ್ತಿರುವ ಈ ವೇಗದ ಜಗತ್ತಿನಲ್ಲಿ ಒತ್ತಡ ಮತ್ತು ಕೋಪವು ಸಾಮಾನ್ಯ ಸಮಸ್ಯೆಗಳಾಗಿ ಮಾರ್ಪಟ್ಟಿವೆ. ಈ ಎರಡೂ ಅಂಶಗಳು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುವುದಲ್ಲದೆ, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅನೇಕ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ತುಂಬಾ ಕೋಪಿಷ್ಠರಾಗಿರುತ್ತಾರೆ. ಅವರ ಕೋಪವು ತುಂಬಾ ಅಪಾಯಕಾರಿಯಾಗಿದ್ದು, ಅದನ್ನು ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ.
ಹಾಗಾದರೆ, ಯಾವ ಪುರುಷ ರಾಶಿಚಕ್ರ ಚಿಹ್ನೆಗಳು ಕೋಪದಲ್ಲಿ ಪ್ರಾಣಿಯ ಕೋಪವನ್ನೂ ಮೀರಿಸುತ್ತವೆ ಎಂಬುದನ್ನು ನಾವೀಗ ತಿಳಿಯೋಣ.

ಮೇಷ ರಾಶಿ

ಯುದ್ಧ ಗ್ರಹವಾದ ಮಂಗಳನಿಂದ ಆಳಲ್ಪಡುವ ಮೇಷ ರಾಶಿಯು ತನ್ನ ತೀವ್ರ ಕೋಪಕ್ಕೆ ಹೆಸರುವಾಸಿಯಾಗಿದೆ. ಈ ರಾಶಿಯವರ ಜತೆ ಯಾವುದೇ ಸಣ್ಣ ಜಗಳಗಳು ಕೂಡ ತುಂಬಾ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತವೆ. ಈ ರಾಶಿಯ ಪುರುಷರ ಕೋಪಕ್ಕೆ ಒಳಗಾಗದಿರುವುದು ತುಂಬಾನೇ ಮುಖ್ಯ. ಏಕೆಂದರೆ, ಅವರ ಕೋಪವು ಕೆರಳಿದ ಸಿಂಹದಂತೆ ನಿಯಂತ್ರಿಸಲಾಗದು. ಕೋಪಗೊಂಡಾಗ, ಈ ಅಗ್ನಿ ಚಿಹ್ನೆಗಳು ಪರಿಸ್ಥಿತಿಯನ್ನು ನೇರವಾಗಿ ಎದುರಿಸಲು ಹಿಂಜರಿಯುವುದಿಲ್ಲ.

ವೃಷಭ ರಾಶಿ

ಪ್ರೀತಿಯ ಗ್ರಹವಾದ ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯ ಪುರುಷರು ಸ್ವಾಭಾವಿಕವಾಗಿಯೇ ಪ್ರಣಯ ರಾಜರು ಮತ್ತು ಪ್ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ. ಆದರೆ, ಎಲ್ಲೋ ತಮಗೆ ಬೆದರಿಕೆ ಉಂಟಾಗುತ್ತಿದೆ ಅನ್ನೋ ಭಾವನೆ ಮೂಡಿದರೆ, ಅವರು ತಮ್ಮ ರಾಶಿಚಕ್ರ ಚಿಹ್ನೆಯಾದ ವೃಷಭನಂತೆಯೇ ಕೋಪದಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಅವರ ಕೋಪವು ತುಂಬಾ ಅಪಾಯಕಾರಿ. ತಮ್ಮ ಕೋಪಕ್ಕೆ ಕಾರಣರಾದವರಿಗೆ ನರಕ ತೋರಿಸಿದಯೇ ಬಿಡುವುದಿಲ್ಲ.

ಮಿಥುನ ರಾಶಿ

ಮಿಥುನ ರಾಶಿಯ ಪುರುಷರು ತಮ್ಮ ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ಕೋಪದಲ್ಲಿ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ವಿಶಿಷ್ಟ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುವ ಮತ್ತು ತಮ್ಮ ಮಾತಿನ ಮೂಲಕ ಅತ್ಯಂತ ಅಪಾಯಕಾರಿ ಚಿಹ್ನೆಗಳಲ್ಲಿ ಒಂದಾಗಿರುವ ಇವರು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಯಾರಾದರೂ ಅವರನ್ನು ಕೋಪಗೊಳಿಸಿದರೆ, ಅವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿರಬಹುದು. ಕೋಪಗೊಂಡಾಗ ತಮ್ಮ ಮಾತುಗಳಿಂದ ಇತರರನ್ನು ನೋಯಿಸುವ ಗುಣ ಇವರಿಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.