ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಮನೆಯ ಮುಖ್ಯದ್ವಾರದ ಬಳಿ ಅಪ್ಪಿ-ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ! ಇವು ನಿಮ್ಮ ಸಂಪತ್ತನ್ನು ಹಾಳು ಮಾಡುತ್ತವೆ...Vastu tips

Vastu tips: ವಾಸ್ತು ಶಾಸ್ತ್ರದಲ್ಲಿ, ಮನೆಯ ಮುಖ್ಯ ದ್ವಾರವನ್ನು ಸಿಂಹ ದ್ವಾರ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದಲೇ ಮನೆಗೆ ಸಮೃದ್ಧಿ ಮತ್ತು ಸಂಪತ್ತು ಪ್ರವೇಶಿಸುತ್ತದೆ. ಹಾಗೆಯೇ ಮನೆಯಲ್ಲಿ ವಾಸಿಸುವವರ ಭವಿಷ್ಯವನ್ನು ಕೂಡಾ ಮುಖ್ಯ ದ್ವಾರವೇ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಆದಷ್ಟು ಉತ್ತಮ ಸ್ಥಿತಿಯಲ್ಲಿರಿಸುವುದರಿಂದ ಇದು ನಿಮಗೆ ಬಹಳ ಪ್ರಯೋಜನಕಾರಿಗಾಗಬಹುದು. ಆದರೆ, ನೀವೇನಾದರೂ ಮನೆಯ ಮುಖ್ಯ ದ್ವಾರದಲ್ಲಿ ಕೆಲವೊಂದು ತಪ್ಪು ಮಾಡಿದಾಗ ಅದು ನಿಮ್ಮ ಮನೆಗೆ ಬಡತನ, ದುಃಖ ನಕರಾತ್ಮಕ ಶಕ್ತಿಯನ್ನು ತರುವಂತೆ ಮಾಡುತ್ತದೆ. ಹಾಗಿದ್ದರೆ, ಮನೆಯ ಮುಖ್ಯ ದ್ವಾರದ ಬಳಿ ಯಾವ ವಸ್ತುಗಳನ್ನು ಇಡಬಾರದು ಎಂದು ನೋಡೋಣ ಬನ್ನಿ...

ಮುಖ್ಯ ದ್ವಾರವನ್ನು ಸ್ವಚ್ಛವಾಗಿಡಿಸಿ

ಪ್ರತಿಯೊಬ್ಬರೂ ಮನೆಯ ಮುಖ್ಯ ದ್ವಾರದ ಬಳಿ ಯಾವುದೇ ರೀರತಿಯಲ್ಲೂ ಕೊಳಕು, ತೇವ, ಕಸ ಇರದಂತೆ ನೋಡಿಕೊಳ್ಳಿ. ಇವೆಲ್ಲವೂ ಮನೆಯೊಳಗೆ ನಕರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ಅಶುಭ ಪರಿಸ್ಥಿತಿಯು ನಿಮ್ಮ ಉಳಿತಾಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಸ್ವಚ್ಛತೆ ಇಲ್ಲದಿರುವ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಹಾಗೆಯೇ ಸಂತೋಷ ಮತ್ತು ಸಮೃದ್ಧಿ ಎಂದಿಗೂ ಉಳಿಯುವುದಿಲ್ಲ.

ಮುರಿದ ಬಾಗಿಲು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರವು ಕೇವಲ ಪ್ರವೇಶ ದ್ವಾರವಲ್ಲ. ಇದನ್ನು ಶಕ್ತಿ, ಸಂಪತ್ತು ಮತ್ತು ಅವಕಾಶಗಳ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ನಿಮ್ಮ ಮನೆಯ ಬಾಗಿಲು ಮುರಿದಿದ್ದರೆ, ತುಕ್ಕು ಹಿಡಿದಿದ್ದರೆ, ಇದು ನಿಮ್ಮ ಮನೆಗೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಶೂಗಳು ಮತ್ತು ಚಪ್ಪಲಿಗಳನ್ನು ಮನೆಯ ಮುಂಭಾಗ ಬಿಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯು ಮುಖ್ಯ ಬಾಗಿಲಿನ ಮೂಲಕ ಮನೆಗೆ ಪ್ರವೇಶಿಸುತ್ತಾಳೆ. ಹಾಗಾಗಿ ನೀವೇನಾದರೂ, ಮುಖ್ಯ ದ್ವಾರದ ಬಳಿ ಚಪ್ಪಲಿಗಳನ್ನು ಬಿಡುವುದರಿಂದ ಇದು ಮನೆಯಲ್ಲಿ ಅಸಂತೋಷವನ್ನು ಉಂಟು ಮಾಡುತ್ತದೆ. ಜೊತೆಗೆ ಮನೆಯ ವಾತಾವರಣದಲ್ಲಿ ಕಿರಿ ಕಿರಿ ಉಂಟಾಗುತ್ತದೆ.
ಮುಖ್ಯ ದ್ವಾರವನ್ನು ಕತ್ತಲೆಯಾಗಿ ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ದ್ವಾರದ ಸುತ್ತಲು ಕತ್ತಲಿಂದ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಹೇಳುವುದಾದರೆ, ಕತ್ತಲೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಹಾಗಾಗಿ ನಿಮ್ಮ ಮುಖ್ಯ ದ್ವಾರದ ಬಳಿ ಆದಷ್ಟು ಬೆಳಕನ್ನು ಹೊಂದಿಸಿ. ಇದು ನಿಮ್ಮ ಮನೆಯ ಆರ್ಥಿಕ ಸ್ಥಿರತೆಗೆ ಸಹಾಯ ಮಾಡುತ್ತದೆ.
ಈ ವಸ್ತುಗಳನ್ನು ಮುಖ್ಯ ದ್ವಾರದಲ್ಲಿ ಇರಿಸಿ.
ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ಬಾಗಿಲಿನ ಸುತ್ತಲಿನ ಗೋಡೆಗಳನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮುಖ್ಯ ದ್ವಾರದ ಬಳಿ ಹರಿದ ಪೋಸ್ಟರ್​ಗಳು, ನಾಮಫಲಕಗಳನ್ನು ಬಳಸಬೇಡಿ. ಬದಲಿಗೆ ಆ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಿ ಶುಭ ಚಿತ್ತಾರಗಳಿಂದ ಅಲಂಕರಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.