ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ವಾ? ಮನೆಯ ವಾಸ್ತು ದೋಷಕ್ಕೆ ನಿಮ್ಮ ಈ ದಿನಚರಿಯೇ ಕಾರಣವಿರಬಹುದು! Vastu tips

Vastu tips: ಪ್ರತಿಯೊಬ್ಬರ ಮನೆಯಲ್ಲೂ ತೊಂದರೆಗಳು ಆಗುವುದು ಸಹಜ. ಇವುಗಳಿಗೆ ನಾವು ನೇರವಾಗಿ ವಿಧಿ, ಗ್ರಹಗಳ ಸ್ಥಾನಗಳು ಅಥವಾ ಸನ್ನಿವೇಶಗಳನ್ನು ಕಾರಣವೆಂದು ಹೇಳುತ್ತೇವೆ. ಆದಾಗ್ಯೂ, ಶಾಸ್ತ್ರಗಳ ಪ್ರಕಾರ, ನಮ್ಮ ದೈನಂದಿನ ಕೆಟ್ಟ ಅಭ್ಯಾಸಗಳು ವಾಸ್ತು ಮೇಲೆ ಪರಿಣಾಮ ಬೀರುವುದರಿಂದ ಕೆಟ್ಟ ಸನ್ನಿವೇಶಗಳು ನಡೆಯುತ್ತವೆ.
ಆದಾಗ್ಯೂ, ಜೀವನದಲ್ಲಿ ಅಡತಡೆಗಳು, ಮಾನಸಿಕ ಒತ್ತಡ ಮತ್ತು ವೈಫಲ್ಯಗಳು ಕೂಡಾ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ಅನೇಕ ರೀತಿಯ ತೊಂದರೆಗಳು ಪ್ರಾರಂಭವಾಗಬಹುದು. ಇದರಿಂದ ಆದಾಯ ಕಡಿಮೆಯಾಗುವುದು, ಆರ್ಥಿಕ ಪರಿಸ್ಥಿತಿಯಲ್ಲಿ ಕುಂಠಿತಗೊಳ್ಳಬಹುದು. ಹಾಗಾಗಿ ಅಂತಹ ಅಭ್ಯಾಸಗಳು ಯಾವುದು ಎಂದು ನೋಡೋಣ ಬನ್ನಿ...

ತಡವಾಗಿ ಏಳುವುದು

ಸೂರ್ಯನನ್ನು ಆತ್ಮವಿಶ್ವಾಸ, ಆರೋಗ್ಯ, ಗೌರವ ಮತ್ತು ಸಕಾರಾತ್ಮಕ ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ತಡವಾಗಿ ಏಳುವುದರಿಂದ ಸೂರ್ಯನ ಕಿರಣಗಳು ದೇಹಕ್ಕೆ ಸ್ಪರ್ಶಿಸುವುದಿಲ್ಲ. ಇದು ಸೂರ್ಯನನ್ನು ದುರ್ಬಲಗೊಳಿಸುತ್ತದೆ. ಇದು ಆತ್ಮವಿಶ್ವಾಸ, ಕೊರತೆ, ಸೋಮಾರಿತನ ಮತ್ತು ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಬೆಳಿಗ್ಗೆ ಸೂರ್ಯ ಉದಯಿಸುವಕ್ಕಿಂತಲೂ ಮೊದಲೇ ಎದ್ದೇಳುವುದರಿಂದ ಈ ನಕರಾತ್ಮಕ ವಿಚಾರಗಳನ್ನು ತೆಗೆದು ಹಾಕಬಹುದು.

ಇತರರ ಬಟ್ಟೆಗಳನ್ನು ಧರಿಸುವುದು

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಶೇಷ ಶಕ್ತಿಯನ್ನು ಹೊಂದಿರುತ್ತಾನೆ. ಅದು ಆತನ ಬಟ್ಟೆಗಳಲ್ಲಿಯೂ ಹೀರಲ್ಪಡುತ್ತದೆ. ನಾವು ಇತರರ ಬಟ್ಟೆಗಳನ್ನು ಧರಿಸಿದಾಗ ಅಥವಾ ಇತರರು ನಮ್ಮ ಬಟ್ಟೆಯನ್ನು ಧರಿಸಿದಾಗ ದೇಹದ ಶಕ್ತಿಯು ಮತ್ತೊಂದು ವ್ಯಕ್ತಿಗೆ ಹೋಗುತ್ತದೆ. ಇಲ್ಲವೇ ಬೇರೊಬ್ಬರ ನಕರಾತ್ಮಕ ಶಕ್ತಿಯು ನಮ್ಮ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಈ ರೀತಿಯ ಚಟುವಟಿಕೆಗಳನ್ನು ಮಾಡುವುದನ್ನು ನಿಲ್ಲಿಸಿ...

ಹಾಸಿಗೆಯಲ್ಲಿ ಊಟ ಮಾಡುವುದು

ಹಾಸಿಗೆ ಇರುವುದು ವಿಶ್ರಾಂತಿಗಾಗಿ, ತಿನ್ನುವುದಕ್ಕಾಗಿ ಅಲ್ಲ. ಯಾವುದೇ ವ್ಯಕ್ತಿಯು ಹಾಸಿಗೆ ಮೇಲೆ ಕುಳಿತು ಊಟ ಮಾಡುವುದರಿಂದ ಇದು ರಾಹು ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗೊಂದಲ ಒತ್ತಡ ಮತ್ತು ಹಠಾತ್​ ಸಮಸ್ಯೆಗಳು ಉಂಟಾಗುತ್ತದೆ. ಇದಲ್ಲದೇ, ದಕ್ಷಿಣ ದಿಕ್ಕಿನಲ್ಲಿ ಊಟ ಮಾಡುವುದರಿಂದ ನಕರಾತ್ಮಕ ಶಕ್ತಿಗಳು ಬೀಳುವುದರಿಂದ ಇದು, ಮನಸ್ಸನ್ನು ಕಿರಿಕಿರಿ, ಅಶಾಂತಿಯಿಂದ ಇರುವ ಹಾಗೆ ಪ್ರೇರೇಪಿಸುತ್ತದೆ. ಆದರಿಂದ ಈ ಅಭ್ಯಾಸವನ್ನು ಇಂದಿಗೆ ನಿಲ್ಲಿಸಿ. ಆಹಾರವನ್ನು ಯಾವಾಗಲೂ ಶಾಂತ ಮನಸ್ಸಿನಿಂದ, ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಸೇವಿಸಿರಿ.

ಉಗುರು ಕಚ್ಚುವುದು

ಉಗುರು ಕಚ್ಚುವುದು ಕೇವಲ ಕೆಟ್ಟ ಅಭ್ಯಾಸವಲ್ಲ, ಮಾನಸಿಕ ಅಶಾಂತಿ ಮತ್ತು ನಕಾರಾತ್ಮಕ ಚಿಂತನೆಯ ಸಂಕೇತವೂ ಆಗಿದೆ. ವಾಸ್ತು ಪ್ರಕಾರ, ಈ ಅಭ್ಯಾಸವು ವ್ಯಕ್ತಿಯ ಏಕಾಗ್ರತೆ ಮತ್ತು ನಿರ್ಧಾರದ ಮೇಲೆ ಭಾರೀ ಪರಿಣಾಮ ಬೀರುವುದರಿಂದ ಇದು ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಹಾಗೆಯೇ, ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ಈ ಅಭ್ಯಾಸವನ್ನು ಹೊಂದಿದ್ದರೆ, ಇಂದೇ ಬಿಟ್ಟು ಬಿಡಿ ( ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.