Zodiac Sign  
ಜ್ಯೋತಿಷ್ಯ

ಈ ನಾಲ್ಕು ರಾಶಿಯವರು 2026 ರಲ್ಲಿ ಎಚ್ಚರಿಕೆ ವಹಿಸಿ; ಬೀದಿಪಾಲಾದಿರಿ ಎಚ್ಚರ! | Zodiac Sign

Zodiac Sign : ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಓರ್ವ ವ್ಯಕ್ತಿಯ ರಾಶಿ ( Zodiac Sign) ಚಕ್ರ ಮತ್ತು ಜನ್ಮ ನಕ್ಷತ್ರವು ವ್ಯಕ್ತಿಯ ಭವಿಷ್ಯ ಜೀವನವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ, ನಮ್ಮ ದೇಶದಲ್ಲಿ ಜನರು ಜೋತಿಷ್ಯವನ್ನು ಅಷ್ಟು ನಂಬುತ್ತಾರೆ. ಒಬ್ಬ ವ್ಯಕ್ತಿಯ ಜನ್ಮ ರಾಶಿಯು ಆತನ ಹಣಕಾಸಿನ ಸ್ಥಿತಿ, ಪ್ರೀತಿ, ಶಿಕ್ಷಣ, ಮದುವೆ, ದಾಂಪತ್ಯ, ಉದ್ಯೋಗ ಮತ್ತು ಆತನ ಒಳ್ಳೆಯ ಗುಣಗಳು ಮತ್ತು ಕೆಟ್ಟ ಗುಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಈಗ ನಾವು 2025 ನೇ ವರ್ಷವನ್ನು ಮುಗಿಸಿ 2026 ನೇ ವರ್ಷವನ್ನು ಪ್ರವೇಶಿಸುತ್ತಿದ್ದೇವೆ. ಜೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಯವರು 2026 ರಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುವಂತಾಗುತ್ತದೆ. ಇದರ ಕುರಿತು ಇಂದು ನಾವು ತಿಳಿದುಕೊಳ್ಳೊಣ.

1. ಮೇಷ ರಾಶಿ (Aries)

2026ರಲ್ಲಿ ಮೇಷ ರಾಶಿಯವರಿಗೆ ಕೆಲಸ ಮತ್ತು ವೃತ್ತಿಯಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ತುರ್ತು ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು ಹಾಗೂ ಹಣಕಾಸಿನ ಅಸ್ಥಿರತೆ ಕಾಣಿಸಿಕೊಳ್ಳಬಹುದು. ಕುಟುಂಬದಲ್ಲೂ ಅಸಮ್ಮತಿ ಉಂಟಾಗಬಹುದು. ಪರಿಹಾರವಾಗಿ ಸಹನೆ ವಹಿಸುವುದು, ದೊಡ್ಡ ನಿರ್ಧಾರಗಳನ್ನು ಮುಂದೂಡುವುದು ಉತ್ತಮ. ಮಂಗಳವಾರ ಹನುಮಂತ ದೇವರ ಪೂಜೆ ಮಾಡುವುದು ಮತ್ತು ಅನಗತ್ಯ ಖರ್ಚನ್ನು ನಿಯಂತ್ರಿಸುವುದು ಉತ್ತಮ.

2. ಕಟಕ ರಾಶಿ (Cancer)

ಈ ರಾಶಿಯವರು ಭಾವನಾತ್ಮಕ ಗೊಂದಲ, ಕುಟುಂಬ ಸಂಬಂಧಗಳಲ್ಲಿ ತಕರಾರು ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಮನಸ್ಸಿನ ಅಶಾಂತಿ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಪರಿಹಾರವಾಗಿ ಧ್ಯಾನ ಮತ್ತು ಯೋಗ ಅಭ್ಯಾಸದ ಜತೆಗೆ ಸೋಮವಾರ ಶಿವನ ಪೂಜೆ, ಹಾಗೂ ದಾನ (ಅನ್ನ ಅಥವಾ ಹಾಲು ದಾನ) ಮಾಡುವುದು ಸಹಾಯಕರವಾಗುತ್ತದೆ.

3. ತುಲಾ ರಾಶಿ (Libra)

ತುಲಾ ರಾಶಿಯವರಿಗೆ 2026ರಲ್ಲಿ ಸಂಬಂಧಗಳಲ್ಲಿ ತಪ್ಪು ಅರ್ಥೈಸಿಕೆ, ದಾಂಪತ್ಯ ಅಥವಾ ಪಾಲುದಾರಿಕೆ ವ್ಯವಹಾರಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗುತ್ತದೆ. ಪರಿಹಾರವಾಗಿ ಶನಿವಾರ ಶನಿ ದೇವರಿಗೆ ಎಣ್ಣೆ ದೀಪ ಹಚ್ಚುವುದು, ಸತ್ಯ ಮತ್ತು ಸಮತೋಲನ ಕಾಪಾಡಿಕೊಳ್ಳುವುದು, ಹಾಗೂ ಕಾನೂನು ಅಥವಾ ಹಣಕಾಸು ವಿಷಯಗಳಲ್ಲಿ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

4. ಮಕರ ರಾಶಿ (Capricorn)

ಮಕರ ರಾಶಿಯವರು ಜವಾಬ್ದಾರಿಗಳ ಭಾರ, ಕೆಲಸದ ಒತ್ತಡ ಮತ್ತು ದೀರ್ಘಕಾಲದ ಯೋಜನೆಗಳಲ್ಲಿ ವಿಳಂಬವನ್ನು ಅನುಭವಿಸಬಹುದು. ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡಿದರೆ ಸಮಸ್ಯೆಗಳು ಹೆಚ್ಚಾಗಬಹುದು. ಪರಿಹಾರವಾಗಿ ನಿಯಮಿತ ಜೀವನಶೈಲಿ, ಶನಿವಾರ ಶನಿ ಪೂಜೆ, ಹಿರಿಯರಿಗೆ ಸೇವೆ ಮಾಡುವುದು ಮತ್ತು ಧೈರ್ಯದಿಂದ ಮುಂದುವರಿಯುವುದು ಲಾಭಕರ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.