Numerology : ಸಂಖ್ಯಾಶಾಸ್ತ್ರ(Numerology)ವು ಮಾನವನ ಜೀವನದ ಪ್ರತಿಯೊಂದು ಆಗು ಹೋಗುಗಳ ಮೇಲೆ ತನ್ನದೇ ಆದ ಒಂದು ಪ್ರಭಾವ ಮತ್ತು ಲೆಕ್ಕಾಚಾರವನ್ನು ಒಳಗೊಂಡಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಜೀವನವು 1 ರಿಂದ 9 ರ ವರೆಗಿನ ಅಂಕೆಗಳ ಆಧಾರದ ಮೇಲೆ ನಿರ್ಧರಿತವಾಗಿದೆ. ಆದ್ದರಿಂದ ಸಂಖ್ಯಾಶಾಸ್ತ್ರ ಅಥವಾ ಅಂಕಶಾಸ್ತ್ರವನ್ನು ಪಾಲಿಸಿ ಅದರದೆ ಆದ ಲಾಭ ಪಡೆದ ಹಲವರಿದ್ದಾರೆ. ಯಾರಿಗೆ ಆಗಲಿ ಬಹು ಬೇಗ ಸಾವು ಬರುತ್ತದೆ ಎಂದರೆ ಭಯ ಮತ್ತು ನಿರಾಶೆಯಾಗುತ್ತದೆ, ಕಾರಣ ನಾವು ಇನ್ನಷ್ಟು ವರ್ಷ ಬದುಕಿದ್ದರೆ ನಾವು ಅಂದು ಕೊಂಡಿದ್ದನ್ನು ಸಾಧಿಸಬಹುದಿತ್ತು ಎಂಬ ಬಯಕೆ ಇರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಕೆಲವು ದಿನಾಂಕಗಳಲ್ಲಿ ಜನಿಸಿದವರ ಆಯುಷ್ಯವು ಉಳಿದವರಿಗಿಂತ ಅಧಿಕವಾಗಿದ್ದು, ಹೆಚ್ಚಿನ ಕಾಲದ ವರೆಗೆ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ.
1. ಸಂಖ್ಯೆ 1 (1,10, 19, 28 ರಂದು ಜನಿಸಿದವರು)
ಸಂಖ್ಯೆ 1 ರಲ್ಲಿ ಜನಿಸಿದವರಿಗೆ ಸೂರ್ಯ ದೇವರ ಆರ್ಶೀವಾದ ಇರುತ್ತದೆ. ಆದ್ದರಿಂದ ಇವರಲ್ಲಿ ಬಲವಾದ ಮನೋಬಲ, ಸ್ವಯಂ ನಿಯಂತ್ರಣ ಮತ್ತು ಉತ್ಸಾಹ ಹಾಗೂ ನಾಯಕತ್ವ ಎನ್ನುವುದು ಸಹಜವಾಗಿ ಬಂದಿರುತ್ತದೆ. ಈ ಸಂಖ್ಯೆಯಲ್ಲಿ ಜನಿಸಿದವರಿಗೆ ರೋಗ- ರುಜಿನಗಳ ತಗಲುವಿಕೆ ಕಡಿಮೆ ಇರುವ ಕಾರಣ ಇವರು ದೀರ್ಘಕಾಲ ಬದಕುತ್ತಾರೆ.
2. ಸಂಖ್ಯೆ 3 (3, 12, 21, 30 ರಂದು ಜನಿಸಿದವರು)
ಸಂಖ್ಯೆ 3 ರಲ್ಲಿ ಜನಿಸಿದವರಿಗೆ ದೈವಗುರುವಾದ ಬೃಹಸ್ಪತಿಯ ಕೃಪೆ ಇರುವ ಕಾರಣ ಇವರಲ್ಲಿ ಧನಾತ್ಮಕ ಚಿಂತನೆ, ಸುಖ–ಸಂತೋಷದ ಭಾವ ಮತ್ತು ಮಾನಸಿಕ ಶಾಂತಿ ಹೆಚ್ಚಾಗಿರುವ ಕಾರಣ ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಮಾನಸಿಕ ನ್ಯೂನತೆಗಳು ಕಾಣಿಸಿಕೊಳ್ಳುವುದು ಕಡಿಮೆ. ಹೀಗಾಗಿ ಇವರು ಅಧಿಕ ವರ್ಷಗಳ ಕಾಲ ಬದುಕಬಲ್ಲರು.
3. ಸಂಖ್ಯೆ 6 (6, 15, 24 ರಂದು ಜನಿಸಿದವರು)
ಸಂಖ್ಯೆ 6 ರಲ್ಲಿ ಜನಿಸಿದವರ ಮೇಲೆ ಲಕ್ಷ್ಮೀ ದೇವರ ಕೃಪೆ ಇರುತ್ತದೆ. ಹೀಗಾಗಿ ಇವರಿಗೆ ಯಾವುದೇ ರೀತಿಯ ಆರ್ಥಿಕ ತೊಂದರೆಗಳು ತಲೆದೂರುವುದಿಲ್ಲ. ಅಕಸ್ಮಾತ್ ಯಾವುದೇ ವೈಧ್ಯಕೀಯ ತುರ್ತು ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇವರಿಗೆ ಇರುತ್ತದೆ. ಕುಟುಂಬದವರ ಪ್ರೀತಿ ಮತ್ತು ಜೀವನದಲ್ಲಿ ಇವರು ವಹಿಸುವ ತಾಳ್ಮೆ ಇವರನ್ನು ಧೀರ್ಘಾಯುಶಿಗಳಾಗಿ ರೂಪಿಸುತ್ತದೆ.
4. ಸಂಖ್ಯೆ 7 (7,16,25 ರಂದು ಜನಿಸಿದವರು)
ಸಂಖ್ಯೆ 7 ರಲ್ಲಿ ಜನಿಸಿದವರ ಮೇಲೆ ಸಪ್ತ ಋಷಿಗಳ ಅನಿಗ್ರಹ ಇರುತ್ತದೆ. ಆದ್ದರಿಂದ ಈ ಸಂಖ್ಯೆಯಲ್ಲಿ ಜನಿಸಿದವರು ಆಧ್ಯಾತ್ಮಿಕ ಸ್ವಭಾವದವರಾಗಿದ್ದು, ಜೀವನವನ್ನು ಅತ್ಯಂತ ಶಾಂತಯುತವಾಗಿ ನಡೆಸುವ ಕಲೆ ಇವರಿಗೆ ಕರಗತವಾಗಿರುತ್ತದೆ. ಆದ್ದರಿಂದ ಇವರ ಮನೆ ಮತ್ತು ಮನಸ್ಸು ಸದಾ ಶಾಂತಿಯಿಂದ ಕೂಡಿರುವ ಕಾರಣ ಇವರು ಹೆಚ್ಚು ವರ್ಷ ಬದುಕುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.