Astrology : ಕೋಪ ಎಂಬುದು ಎಲ್ಲರಿಗೂ ಬರುವಂತಹ ಸಾಮಾನ್ಯ ಪ್ರಕ್ರಿಕೆಯಾಗಿದೆ. ಕೆಲವೊಂದು ಘಟನೆಗಳು ನಡೆದಾಗ ಕೆಲವರಿಗೆ ತಕ್ಷಣವೇ ಕೋಪ ಬಂದರೆ, ಇನ್ನು ಕೆಲವರಿಗೆ ನಿಧಾನವಾಗಿ ಕೋಪ ಬರುತ್ತದೆ. ಅಂದಹಾಗೆ, ಈ ರಾಶಿಯವರಿಗೆ ಕೋಪ ಎನ್ನುವುದು ಜ್ವಾಲಾಮುಖಿಯಂತೆ. ಇದರಿಂದ ಅನೇಕ ಅಪಾಯಗಳು ಆಗುವುದಂತೂ ಗ್ಯಾರಂಟಿ. ಹಾಗಾಗಿ ಈ ಜನರು ಆದಷ್ಟು ಕೋಪವನ್ನು ನಿಯಂತ್ರಿಸುವ ಬಗ್ಗೆ ಹೆಚ್ಚು ಗಮನ ಕೊಡುವುದು ಉತ್ತಮ. ಹಾಗಿದ್ದರೆ, ಯಾವ ರಾಶಿ ಜನರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಎಂದು ನೋಡೋಣ ಬನ್ನಿ....
ವೃಶ್ಚಿಕ ರಾಶಿ
ಈ ರಾಶಿಯಲ್ಲಿ ಜನಿಸಿದ ಜನರು ತಮ್ಮ ಕೋಪವನ್ನು ಸಾಮಾನ್ಯವಾಗಿ ತಡೆಯಲು ಬಯಸುತ್ತಾರೆ. ಕೋಪ ಬಂದಾಗ ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನಿಸುತ್ತಾರೆ. ಈ ಜನರು ಬಹಳ ಸಮಯದ ನಂತರ ತಮ್ಮ ಕೋಪವನ್ನು ಹೊರ ಹಾಕುತ್ತಾರೆ. ಈ ವೇಳೆ ಅವರ ಕೋಪವು ಎದುರು ಇರುವ ಜನರಿಗೆ ಆಘಾತವನ್ನು ಉಂಟು ಮಾಡಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರು ತಮ್ಮ ಮಾತು ಹಾಗೂ ನಿರ್ಧಾರದ ಬಗ್ಗೆ ಬಹಳ ಹಠಮಾರಿಯಾಗಿರುತ್ತಾರೆ. ಅವರ ಅಭಿಪ್ರಾಯಗಳು ಸಾಬೀತು ಪಡಿಸಲು ಮೊಂಡು ವಾದಕ್ಕೆ ಇಳಿಯುತ್ತಾರೆ. ಇದರಿಂದ ಅನೇಕ ಜನರಿಗೆ ನೋವನ್ನು ಮಾಡುತ್ತಾರೆ.
ವೃಷಭ ರಾಶಿ
ಈ ರಾಶಿಯ ಜನರು ತುಂಬಾ ಕೋಪ ಮತ್ತು ಹಠಮಾರಿಯಾಗಿರುತ್ತಾರೆ. ಇವರು ಕ್ಷುಲ್ಲಕ ಕಾರಣಕ್ಕೆ ಕೋಪಗೊಳ್ಲುವುದಿಲ್ಲ. ಬದಲಿಗೆ ಹಲವು ಕಾರಣಗಳಿದ್ದರೆ ಮಾತ್ರ ಕೋಪಗೊಳ್ಳುತ್ತಾರೆ. ಇದರಿಂದ ಮನೆಯ ಶಾಂತಿಯೇ ಹಾಳಾಗಬಹುದು.
ಧನು ರಾಶಿ
ಧನು ರಾಶಿಯ ಜನರು ಕೋಪಗೊಂಡಾಗ ಅವರ ಮೇಲೆ ನಿಯಂತ್ರಣವಿರುವುದಿಲ್ಲ. ಏನು ಮಾತನಾಡುತ್ತೀರಿ ಎಂದು ತಿಳಿಯುದಿಲ್ಲ. ಇದರಿಂದ ಎದುರು ಇರುವಂತಹ ವ್ಯಕ್ತಿಗೆ ನೋವಾಗಬಹುದು. ಈ ಜನರು ಕೋಪಗೊಂಡಾಗ ಆದಷ್ಟು ಸಂಬಂಧಗಳನ್ನು ಮುರಿದುಕೊಳ್ಳಲು ಪ್ರಯತ್ನಿಸುತ್ತಾರೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.