Astrology : ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಶುಕ್ರ ಮತ್ತು ಶನಿ ಬಹಳ ಅಪರೂಪದ ಸಂಯೋಗವನ್ನು ರೂಪಿಸುತ್ತಾನೆ. ಈ ದಿನ ಶುಕ್ರ ಮತ್ತು ಶನಿ ಪರಸ್ಪರ ಮಿಲನಗೊಳ್ಳುವುದರಿಂದ ಇದು ಆ ರಾಶಿಯವರಿಗೆ ಲಾಭವನ್ನು ತೋರಿಸುತ್ತದೆ. ಈ ಅಪರೂಪದ ಸಂಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ಯೋಗವು ಈ ರಾಶಿ ಚಕ್ರಗಳಿಗೆ ಅದೃಷ್ಟವನ್ನು ತರುವುದರ ಜೊತೆಗೆ ಸಂಪತ್ತನ್ನು ತರುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ..
ವೃಶ್ಚಿಕ ರಾಶಿ
ಅಪರೂಪದ ಸಂಯೋಗವು ವೃಶ್ಚಿಕ ರಾಶಿಯವರಿಗೆ ಶುಭಲಾಭವನ್ನು ಸೂಚಿಸುತ್ತದೆ. ಈ ವರ್ಷವು ಇವರಿಗೆ ದೇವರ ಕೃಪೆ ಸಿಗಲಿದ್ದು, ನಿಮ್ಮ ಪ್ರಯತ್ನದಿಂದ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ದೀರ್ಘಕಾಲದಿಂದ ಬರಬೇಕಾದ ಹಣ ಮತ್ತೆ ಮರಳಿ ಸಿಗಲಿದೆ. ವೆಚ್ಚಗಳು ಕಡಿಮೆಯಾಗಲಿದ್ದು, ಉಳಿತಾಯ ಯಶಸ್ವಿಯಾಗಲಿದೆ. ವೃತ್ತಿಯಲ್ಲಿ ಯಶಸ್ಸು ಪಡೆಯಲಿದ್ದು, ಆರೋಗ್ಯ ಸುಧಾರಿಸುತ್ತದೆ. ಮದುವೆ ಪ್ರಸ್ತಾಪದಲ್ಲಿರುವವರಿಗೆ ಕಂಕಣ ಬಲ ಕೂಡಿ ಬರಲಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.
ಕರ್ಕಾಟಕ ರಾಶಿ
ಶುಕ್ರ - ಶನಿ ಗುಣ ದೃಷ್ಟಿ ಯೋಗವು ಈ ರಾಶಿಯವರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಆದಾಯದ ಮೂಲಗಳು ಎರಡು ಪಟ್ಟು ಹೆಚ್ಚಾಗಲಿದೆ. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ಎಲ್ಲಾ ಕೆಲಸಗಳಿಗೂ ಧೈರ್ಯದಿಂದ ಮುನ್ನುಗ್ಗಲಿದ್ದೀರಿ. ಹೊಸ ಜನರೊಂದಿಗಿನ ಸಂಬಂಧಗಳು ಬೆಳೆಸಿಕೊಳ್ಳುತ್ತೀರಿ. ದೀರ್ಘಕಾಲದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮಕರ ರಾಶಿ
ಈ ಅಪರೂಪದ ಸಂಗಮದಿಂದ ಮಕರ ರಾಶಿಯವರು ಹೇರಳವಾದ ಸಂತೋಷವನ್ನು ಪಡೆಯಲಿದ್ದಾರೆ. ದೀರ್ಘಕಾಲದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತವೆ. ಹೊಸ ಯೋಜನೆಗಳನ್ನು ಹಾಕಿಕೊಂಡವರಿಗೆ ಗುರಿ ಸಾಧಿಸಲು ಸಹಾಯ ಮಾಡುತ್ತದೆ. ಈ ವರ್ಷದಲ್ಲಿ ಹೊಸ ವಾಹನವನ್ನು ಖರೀದಿ ಮಾಡಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದೊಂದಿಗೆ ಸಂತೋಷವನ್ನು ಪಡೆಯಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.