ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಗ್ರಹಣದ ನಡುವೆಯೂ ಹಣದ ಸುರಿಮಳೆ! ಮಾರ್ಚ್‌ನಲ್ಲಿ ಈ ರಾಶಿಗಳಿಗೆ ಲಕ್ಕೋ ಲಕ್ಕು.. Astrology

Astrology: ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಚ್ ತಿಂಗಳು ಆರಂಭವಾಗಲಿದೆ. ಆ ಸಮಯದಲ್ಲಿ ಸೂರ್ಯ ಮತ್ತು ಶುಕ್ರನು ಮೀನ ರಾಶಿಗೆ ಸಂಚಾರ ನಡೆಸಲಿದ್ದಾರೆ. ಅಲ್ಲಿ ಈಗಾಗಲೇ ಶನಿ ನೆಲೆಸಿದ್ದಾನೆ. ಸೂರ್ಯ, ಶುಕ್ರ ಮತ್ತು ಶನಿಯ ತ್ರಿಗ್ರಹ ಸಂಯೋಗವು ಮೀನ ರಾಶಿಯಲ್ಲಿ ರೂಪುಗೊಳ್ಳುತ್ತದೆ.
ಎರಡನೆಯದಾಗಿ, ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್​ 3 ರಂದು ಸಂಭವಿಸಲಿದೆ ಎಂದು ಜ್ಯೋತಿಷ್ಯ ತಿಳಿಸಿದೆ. ಆದಾಗ್ಯೂ, ಗ್ರಹಣವು ಹೋಳಿ ಹಬ್ಬದಂದು ಸೇರಿಕೊಳ್ಳುವುದರಿಂದ ಈ ಮೂರು ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಸುತ್ತದೆ. ಈ ಅಪರೂಪದ ಸಂಯೋಗದಿಂದ ಯಾವ ರಾಶಿಯವರಿಗೆ ಉತ್ತಮ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ...

ವೃಷಭ ರಾಶಿ

ಮಾರ್ಚ್ ತಿಂಗಳು ಈ ರಾಶಿಯವರಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಪ್ರಯೋಜನಗಳು ಸಿಗಲಿವೆ. ಮದುವೆಗೆ ಇರುವ ಅಡೆತಡೆಗಳು ದೂರವಾಗುತ್ತವೆ. ವಿವಾಹಿತ ದಂಪತಿಗಳಿಗೆ ಅವರ ಅತ್ತೆ-ಮಾವಂದಿರ ಬೆಂಬಲ ಸಿಗುತ್ತದೆ. ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಬಹುದು. ವ್ಯವಹಾರ ಮತ್ತು ಹೂಡಿಕೆಗಳಲ್ಲಿ ತೊಡಗಿರುವವರಿಗೆ ಗಮನಾರ್ಹ ಲಾಭಗಳು ಸಿಗುತ್ತವೆ.
ತುಲಾ ರಾಶಿ
ಈ ತಿಂಗಳು ತುಲಾ ರಾಶಿಯವರಿಗೆ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಉದ್ಯೋಗ ಬದಲಾಯಿಸುವವರಿಗೆ ಉತ್ತಮ ಕೆಲಸಗಳು ಸಿಗುವ ಸಾಧ್ಯತೆ ಇರುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಆರ್ಥಿಕ ತೊಂದರೆಗಳು ಕಡಿಮೆಯಾಗಲಿದ್ದು, ಸಾಮಾಜಿಕವಾಗಿ ಸ್ಥಾನಮಾನ ಹೆಚ್ಚಾಗಲಿದೆ. ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷದ ವಾತಾವರಣ ಇರಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಈ ತಿಂಗಳು ಪ್ರಗತಿಯನ್ನು ಸೂಚಿಸಲಿದೆ. ಹಣಕಾಸಿನ ಪ್ರಯತ್ನಗಳು ಪ್ರಯೋಜನಕಾರಿಯಾಗಲಿದ್ದು, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಯತ್ನಗಳು ಯಶಸ್ವಿಯಾಗಲಿವೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಕೆಲಸಗಳು ಸಿಗಲಿವೆ. ಉದ್ಯೋಗದಲ್ಲಿರುವವರಿಗೆ ಬಡ್ತಿಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಈ ದಿನಗಳಲ್ಲಿ ವಾಹನ ಅಥವಾ ಬೆಲೆಬಾಳುವ ವಸ್ತುಗಳನ್ನು ಖರೀದಿಸಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.