Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಸೂರ್ಯನ ಸಂಚಾರ, ಅದೃಷ್ಟದ ಸಂಚಲನ! ಈ ರಾಶಿಯವರು ಕೋಟ್ಯಧಿಪತಿಯಾಗೋದು ಗ್ಯಾರಂಟಿ! Astrology

Astrology: ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆ ಮತ್ತು ನಕ್ಷತ್ರಪುಂಜಗಳ ಬದಲಾವಣೆಯನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ವಿವಿಧ ಶುಭ ಮತ್ತು ಅಶುಭ ಸಂಯೋಜನೆಯನ್ನು ಸೃಷ್ಟಿಸುತ್ತದೆ. ಇದು ಕೆಲವೊಂದು ರಾಶಿಗಳಿಗೆ ಸಕರಾತ್ಮಕ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಆದಾಗ್ಯೂ, ಶುಕ್ರನು ಮೊದಲು ಶತಭಿಷ ನಕ್ಷತ್ರದಿಂದ ಮಾರ್ಚ್​ 22 ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವು ಸುಮಾರು ಏಪ್ರಿಲ್​​ 05 ರವರೆಗೆ ಬೀರಲಿದ್ದು, ಸೂರ್ಯನು ಸಹ ಈ ನಕ್ಷತ್ರವನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ಪರಿಣಾಮದಿಂದ ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ..

ವೃಷಭ ರಾಶಿ

ಸೂರ್ಯನ ಸಂಚಾರದಿಂದ ಈ ರಾಶಿಯವರಿಗೆ ಶುಭ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ವಿದೇಶದಲ್ಲಿ ಕೆಲಸ ಮಾಡಲು ಕನಸು ಕಂಡವರಿಗೆ ಯಶಸ್ಸಿನ ಬಾಗಿಲು ತೆರೆಯಲಿದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರೆಯಲಿದೆ. ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ.

ಮಿಥುನ ರಾಶಿ

ಕುಂಭ ಯೋಗವು ಮಿಥುನ ರಾಶಿಯವರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ತಂದೆ- ತಾಯಿ ಆಶೀರ್ವಾದದೊಂದಿಗೆ ಮನ್ನಣೆ ಪಡೆಯಲಿದ್ದೀರಿ. ಆದಾಗ್ಯೂ, ಆರ್ಥಿಕ ಪರಿಸ್ಥಿತಿಗಳು ಸುಧಾರಣೆಗೊಳ್ಳಲಿದ್ದು, ಹೊಸ ಉದ್ಯಮವನ್ನು ಪ್ರಾರಂಭಿಸುವವರಿಗೆ ಈ ದಿನಗಳು ಶುಭಾರಂಭವನ್ನು ನೀಡಲಿವೆ.

ಸಿಂಹ ರಾಶಿ

ಈ ರಾಶಿಚಕ್ರ ಚಿಹ್ನೆಗಳ ಸೂರ್ಯನು ಸಂಚಾರ ನಡೆಸುವುದರಿಂದ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆದುಕೊಳ್ಳಬಹುದಾಗಿದೆ. ಆದಾಗ್ಯೂ, ಹೊಸ ಕೆಲಸ ಹುಡುಕುತ್ತಿರಯವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಸ್ವಂತ ವ್ಯವಹಾರ ನಡೆಸಲು ಬಯಸುವವರಿಗೆ ಉತ್ತಮ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.