- ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
- ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
- ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
- ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ಮದುವೆ, ದಾಂಪತ್ಯ ಜೀವನ, ಉದ್ಯೋಗ ಹಾಗೂ ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಗುಣಗಳ ಮೇಲೆ ಜ್ಯೋತಿಷ್ಯದ ಪ್ರಭಾವ ತುಂಬಾ ಇದೆ.
2025ರ ಹಳೆ ವರ್ಷ ಮುಗಿದು 2026ರ ಹೊಸ ವರ್ಷ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಮಂದಿ ಹೊಸ ವರ್ಷದಲ್ಲಿ ತಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದ್ದು, ಜ್ಯೋತಿಷ್ಯದ ಮೊರೆ ಹೋಗುತ್ತಿದ್ದಾರೆ.
ಜ್ಯೋತಿಷ್ಯ ಭವಿಷ್ಯವಾಣಿಗಳ ಆಧಾರದ ಮೇಲೆ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರ ಪ್ರೀತಿ ಮತ್ತು ವೈವಾಹಿಕ ಜೀವನ 2026ರಲ್ಲಿ ಅದ್ಭುತವಾಗಿರಲಿದೆಯಂತೆ. ಹಾಗಾದರೆ, ಆ ರಾಶಿಗಳು ಯಾವುವು ಎಂದು ನಾವೀಗ ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿ
ಚಂದ್ರನಿಂದ ಆಳಲ್ಪಡುವ ಕರ್ಕಾಟಕ ರಾಶಿಯವರು ಮುಂಬರುವ ವರ್ಷ 2026ರಲ್ಲಿ ತಮ್ಮ ಪ್ರೇಮ ಜೀವನದಲ್ಲಿ ಕೆಲವು ಸಂತೋಷದ ತಿರುವುಗಳನ್ನು ಅನುಭವಿಸಲಿದ್ದಾರೆ. ಇವರು ಮೂಲತಃ ಬಹಳ ಸೂಕ್ಷ್ಮ ವ್ಯಕ್ತಿಗಳಾಗಿದ್ದು, ಇತರರೊಂದಿಗೆ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಅವರು ಯಾರಿಂದಲೂ ಬೇರೆಯಾಗುವುದನ್ನು ಸಹಿಸುವುದಿಲ್ಲ. ಈ ರಾಶಿಯವರು ಇತರರ ಬಗ್ಗೆ ಅತಿಯಾದ ಪ್ರೀತಿ ಮತ್ತು ಕಾಳಜಿಯಿಂದ ವರ್ತಿಸುತ್ತಾರೆ. ಇವರು ಸೌಮ್ಯ ಹೃದಯಿಗಳು. ಇವರು ಆಗಾಗ್ಗೆ ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ. 2026ರಲ್ಲಿ ತಮ್ಮ ಗೆಳತಿ/ಗೆಳೆಯನೊಂದಿಗೆ ಸಂತೋಷದ ಪ್ರೇಮ ಜೀವನವನ್ನು ಆನಂದಿಸುವ ಸಾಧ್ಯತೆಯಿದೆ.
ತುಲಾ ರಾಶಿ
ತುಲಾ ರಾಶಿಯವರು ಯಾವಾಗಲೂ ಇತರರಿಗಾಗಿ ತಮ್ಮ ಸ್ವಂತ ಸಂತೋಷ ಮತ್ತು ಆಸೆಗಳನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ ಆದರೆ, ಅವರ ಪ್ರೇಮ ಜೀವನವು ಅತ್ಯಂತ ನೋವಿನಿಂದ ಕೂಡಿರುತ್ತದೆ. ಅವರು ತಮ್ಮ ಹಿಂದಿನ ಪ್ರಣಯ ಸಂಬಂಧಗಳನ್ನು ಸುಲಭವಾಗಿ ಮರೆಯುವುದಿಲ್ಲ. ಸಂಬಂಧವನ್ನು ಮುರಿಯುವ ಕಲ್ಪನೆಯನ್ನು ಅವರು ಸಂಪೂರ್ಣವಾಗಿ ದ್ವೇಷಿಸುತ್ತಾರೆ. 2026 ರ ಜಾತಕದ ಪ್ರಕಾರ, ತುಲಾ ರಾಶಿಯವರು ತಮ್ಮ ಮಾಜಿ ಪ್ರೇಮಿ/ಪ್ರೇಮಿಯೊಂದಿಗೆ ಮತ್ತೆ ಒಂದಾಗುತ್ತಾರಂತೆ.
ವೃಷಭ ರಾಶಿ
ಬುಧ ಗ್ರಹದ ಆಳ್ವಿಕೆಯಲ್ಲಿರುವ ವೃಷಭ ರಾಶಿಯ ಜನರು ಸ್ವಾಭಾವಿಕವಾಗಿಯೇ ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ಬೇರೆಯಾಗುವುದನ್ನು ಎಂದಿಗೂ ಸ್ವೀಕರಿಸುವುದಿಲ್ಲ ಅಥವಾ ಹಳೆಯ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ. ಅವರು ಎಲ್ಲರ ಮುಂದೆ ಬಲಶಾಲಿಯಾಗಿ ಕಂಡರೂ ಏಕಾಂತತೆಯಲ್ಲಿ ಪ್ರೀತಿಗಾಗಿ ಹಾತೊರೆಯಬಹುದು. ಅವರು ತಮ್ಮ ಮಾಜಿ ಗೆಳತಿ ಅಥವಾ ಗೆಳೆಯನೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಅವರ ಹಿಂದಿನ ಪ್ರೇಮ ಜೀವನದ ಎಲ್ಲಾ ಸಮಸ್ಯೆಗಳು 2026 ರಲ್ಲಿ ಕೊನೆಗೊಳ್ಳುತ್ತವೆ ಮತ್ತು ಸಂತೋಷದಿಂದ ಕೂಡಿರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.