Astrology ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಮಣ್ಣೂ ಚಿನ್ನವಾಗುವ ಕಾಲ! ಮಂಗಳನ ಕೃಪೆಯಿಂದ ಈ ರಾಶಿಯವರ ಬದುಕು ಬದಲಾಗೋದು ಗ್ಯಾರಂಟಿ... Astrology

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಮತ್ತು ಅವುಗಳ ಯುತಿಯಿಂದಾಗಿ ಹಲವು ಪ್ರಮುಖ ಯೋಗಗಳು ನಿರ್ಮಾಣವಾಗುತ್ತವೆ. ಇವುಗಳಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಮಂಗಳಕರ ರಾಜಯೋಗಗಳಲ್ಲಿ ಒಂದಾದ 'ರುಚಕ್ ಮಹಾಪುರುಷ ರಾಜಯೋಗ' ಅತ್ಯಂತ ಪ್ರಮುಖವಾದುದಾಗಿದೆ. ಜಾತಕದಲ್ಲಿ ಮಂಗಳ ಗ್ರಹದ ವಿಶೇಷ ಸ್ಥಾನದಿಂದಾಗಿ ಈ ಯೋಗವು ಸೃಷ್ಟಿಯಾಗುತ್ತದೆ.
ಈ ಚಲನೆಯು ವ್ಯಕ್ತಿಗಳನ್ನು ಧೈರ್ಯಶಾಲಿ, ಆತ್ಮವಿಶ್ವಾಸ ಮತ್ತು ನಾಯಕತ್ವದ ಕೌಶಲ್ಯವನ್ನು ಹೊಂದುವಂತೆ ಮಾಡುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ವೃತ್ತಿ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿಯೂ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ ಒಳ್ಳೆಯದಾಗಲಿದೆ ಎಂದು ನೋಡೋಣ ಬನ್ನಿ....

ಮೇಷ ರಾಶಿ

ಮೇಷ ರಾಶಿಯವರಿಗೆ ಋಣರಾಜಯೋಗವು ತುಂಬಾ ಶುಭವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಈ ಜನರು ಕೆಲಸದಲ್ಲಿ ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಹೊಸ ಜವಬ್ದಾರಿಗಳು ನಿಮಗೆ ಪುಷ್ಠಿಯನ್ನು ನೀಡಲಿವೆ. ಸ್ವಂತ ವ್ಯವಹಾರ ನಡೆಸುವವರಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಹಲವು ದಿನಗಳಿಂದ ಬರಬೇಕಿದ್ದ ಹಣ ಮತ್ತೆ ಮರಳುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಸಿಂಹ ರಾಶಿ

ಈ ಅವಧಿಯು ಸಿಂಹ ರಾಶಿಯವರಿಗೆ ಯಶಸ್ಸಿನ ಸಂಕೇತವಾಗಿದೆ. ಈ ಜನರಿಗೆ ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಬಲವಾಗಲಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ, ಹೊಸ ಅವಕಾಶಗಳು ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಋಣರಾಜಯೋಗವು ಹೊಸ ಅವಕಾಶಗಳನ್ನು ತರುವಂತಹ ಸಾಧ್ಯತೆಯಿದೆ. ವ್ಯವಹಾರದಲ್ಲಿರುವವರಿಗೆ ಹೊಸ ಒಪ್ಪಂದಗಳು ಲಾಭವನ್ನು ನೀಡಲಿದೆ. ಪಿತ್ರಾರ್ಜಿತ ಆಸ್ತಿಗಳು ಧನನೀಯ ಸಹಾಯವನ್ನು ಮಾಡಲಿವೆ. ಉದ್ಯೋಗದಲ್ಲಿರುವವರಿಗೆ ಈ ಸಮಯವು ಬಹಳ ಉಪಯುಕ್ತವಾಗಿದ್ದು, ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.