ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಶನಿ-ಶುಕ್ರ ಸಮ್ಮಿಲನ: ಈ ರಾಶಿಯವರ ಬದುಕಿನಲ್ಲಿ 'ಗೋಲ್ಡನ್ ಟೈಮ್' ಫಿಕ್ಸ್! Astrology

Astrology: ಜ್ಯೋತಿಷ್ಯದ ಪ್ರಕಾರ, ಶುಕ್ರ ಮತ್ತು ಶನಿ ಬಹಳ ಪ್ರಭಾವಶಾಲಿ ಗ್ರಹಗಳು ಎಂದು ಹೇಳಲಾಗುತ್ತದೆ. ಈ ಎರಡು ಗ್ರಹಗಳು ಸಂಯೋಜನೆ ಹೊಂದಿದಾಗ ಇದು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಯೋಗವು ಫೆಬ್ರವರಿ 1 ರಂದು ಪ್ರಾರಂಭವಾಗಲಿದ್ದು, ಕೆಲವೊಂದು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ವೃಷಭ ರಾಶಿ

ಗ್ರಹಗಳ ಸಂಯೋಗವು ವೃಷಭ ರಾಶಿಯವರ ಜೀವನದಲ್ಲಿ ಉತ್ತಮ ಸಮಯವನ್ನು ಕಲ್ಪಿಸಲಿದೆ. ಇದು ಶುಕ್ರ ಮತ್ತು ಶನಿಯ ಸಂಯೋಗವನ್ನು ಕಾಪಾಡುವುದರ ಜೊತೆಗೆ ಮನೆಯಲ್ಲಿ ನೆಮ್ಮದಿಯನ್ನು ತರಲಿದೆ. ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಲಿದ್ದು, ಕಚೇರಿಯಲ್ಲಿ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ದಾಂಪತ್ಯ ಜೀವನದಲ್ಲಿ ಶಾಂತಿಯೂ ಇರುತ್ತದೆ. ಅಷ್ಟೇ ಅಲ್ಲದೇ, ಹಣದ ಬಗ್ಗೆ ಇರುವ ಚಿಂತೆಗಳು ದೂರವಾಗುತ್ತವೆ. ಈ ಸಮಯದಲ್ಲಿ, ನೀವು ತಾಳ್ಮೆಯಿಂದ ಕೆಲಸ ಮಾಡುತ್ತೀರಿ.

ಕನ್ಯಾ ರಾಶಿ

ಈ ಸಮಯವು ಕನ್ಯಾ ರಾಶಿಯವರಿಗೆ ಉತ್ತಮವಾಗಿರುತ್ತದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಈ ಸಮಯದಲ್ಲಿ ಜವಬ್ದಾರಿ ಹೆಚ್ಚಾಗಲಿದ್ದು, ಹಳೆಯ ಸಮಸ್ಯೆಗಳು ಪರಿಹಾರ ನೀಡುತ್ತವೆ. ಕುಟುಂಬಕ್ಕೆ ಸಂತೋಷ ಮತ್ತು ನೆಮ್ಮದಿ ಮರಳುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದೆ. ಬುದ್ಧಿವಂತಿಕೆಯಿಂದ ತೆಗೆದುಕೊಂಡ ನಿರ್ಧಾರಗಳಿಂದ ಆರ್ಥಿಕ ಲಾಭ ಹೆಚ್ಚಾಗುವ ನಿರೀಕ್ಷೆ ಇದೆ.

ತುಲಾ ರಾಶಿ

ಈ ಸಮಯವು ತುಲಾ ರಾಶಿಯವರಿಗೆ ಉತ್ತಮ ಸಮಯವನ್ನು ನೀಡುತ್ತದೆ. ಇದು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ದೀರ್ಘಕಾಲದಿಂದ ಅರ್ಧದಲ್ಲೇ ನಿಂತುಹೋಗಿದ್ದ ಕೆಲಸಗಳು ಮತ್ತೆ ಪೂರ್ತಿಯಾಗಲಿವೆ. ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳಲಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.