Astrology: ಹಿಂದೂ ಧರ್ಮದಲ್ಲಿ ವಸಂತ ಪಂಚಮಿಗೆ ವಿಶೇಷ ಸ್ಥಾನವಿದೆ. ಈ ದಿನ ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆ ಸರಸ್ವತಿ ದೇವಿಯ ಆರಾಧನೆಗೆ ಸಮರ್ಪಿತವಾಗಿದೆ. ವಸಂತ ಪಂಚಮಿಯಂದು ಮಾಡುವ ಪೂಜೆಯು ಚಿಂತನೆ ಮತ್ತು ತಿಳುವಳಿಕೆಯನ್ನು ಹೆಚ್ಚಿಸುತ್ತದೆ.
ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಜೀವನಕ್ಕೆ ಸಕರಾತ್ಮಕತೆಯನ್ನು ನೀಡುತ್ತದೆ.
ಜ್ಯೋತಿಷ್ಯದ ಪ್ರಕಾರ, 2026 ವಸಂತ ಪಂಚಮಿ ಬರಲಿದ್ದು, ಈ ದಿನದ ಗ್ರಹಗಳ ಚಲನೆ ಮಹತ್ವದ್ದಾಗಿದೆ. ಈ ದಿನ ಎರಡು ಪ್ರಮುಖ ಗ್ರಹಗಳು ಸ್ಥಾನವನ್ನು ಬದಲಾಯಿಸುತ್ತಿದ್ದು, ಬುಧ ಗ್ರಹವು ಶ್ರಾವಣ ನಕ್ಷತ್ರವನ್ನು ಪ್ರವೇಶಿಸುತ್ತದೆ. ಇದರಿಂದ ಕೆಲವೊಂದು ರಾಶಿಗಳ ಮೇಲೆ ವಿಶೇಷ ಪ್ರಯೋಜನಗಳು ಬೀರುತ್ತವೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...
ಮೇಷ ರಾಶಿ
ಈ ಗ್ರಹಗಳ ಚಲನೆಯಿಂದ ಮೇಷ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಸಮಯದಲ್ಲಿ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಮುನ್ನುಗ್ಗಲು ಸಾಧ್ಯವಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅನೇಕ ಪ್ರಗತಿಗಳನ್ನು ಪಡೆಯಲಿದ್ದೀರಿ. ದೀರ್ಘಕಾಲದವರೆಗೆ ಸಿಲುಕಿಕೊಂಡಿದ್ದ ಹಣವನ್ನು ವಾಪಾಸ್ಸು ಸಿಗಲಿದೆ. ವೈಯಕ್ತಿಕ ಸಂಬಂಧಗಳಲ್ಲಿ ಹಠಾತ್ ಬದಲಾವಣೆಗಳು ಆಗಲಿದ್ದು, ಮನಸ್ಸು ಹೆಚ್ಚು ಶಾಂತಿಯಾಗಿರುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಜೀವನದಲ್ಲಿ ವಸಂತ ಪಂಚಮಿ ಸ್ಥಿರತೆಯನ್ನು ತರಲಿದೆ. ಇದು ಅವರ ಜೀವನದಲ್ಲಿ ಗುರಿಗಳನ್ನು ಹರಿಸಲು ಸಾಧ್ಯವಾಗುತ್ತದೆ. ಹಳೆಯ ಸ್ನೇಹಿತರ ಭೇಟಿಯು ಸಂತೋಷವನ್ನು ತರಲಿದೆ. ವಿವಾಹ ಪ್ರಸ್ತಾಪಗಳು ಕೇಳಿಬರಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಮೀನ ರಾಶಿ
ಈ ಗ್ರಹಗಳ ಚಲನೆಯು ಮೀನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರಲಿದೆ. ಇದು ನಿಮ್ಮ ಕನಸು ಮತ್ತು ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ. ಪ್ರೇಮ ಸಂಬಂಧಗಳಿದ್ದರೆ, ಅದು ಬಲಗೊಳ್ಳುತ್ತದೆ. ಈ ಸಮಯದಲ್ಲಿ ಆರೋಗ್ಯ ಬಹಳ ಸಮೃದ್ಧಿಯಾಗಿರುತ್ತದೆ. ಹಳೆಯ ಹೂಡಿಕೆಗಳು ಲಾಭಗಳನ್ನು ನೀಡಲಿದ್ದು, ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.