Vastu Shastra: ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಶಾಂತಿ, ನೆಮ್ಮದಿ, ಆರ್ಥಿಕ ಯೋಗಕ್ಷೇಮಗಳನ್ನು ಬಯಸುತ್ತಾರೆ. ಹಾಗೆಯೇ ಜೀವನದಲ್ಲಿ ಸಂತೋಷದಿಂದ ಇರುವಂತೆ ಬಹಳ ಕಾಳಜಿ ವಹಿಸುತ್ತೇವೆ. ಕೆಲವೊಮ್ಮೆ ಮನೆಯಲ್ಲಿರುವ ವಾಸ್ತು ದೋಷವು ಮನೆಯಲ್ಲಿ ಅಶಾಂತಿ, ಕಿರಿಕಿರಿಯನ್ನು ಉಂಟುಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಮನೆಯಲ್ಲೂ ಒಂದು ವಸ್ತುವನ್ನು ಬೆಳಗಿಸುವ ಮೂಲಕ ಮನೆಯಲ್ಲಿ ಸಕರಾತ್ಮಕ ಶಕ್ತಿಯನ್ನು ಹೊಂದಬಹುದು ಎಂದು ತಿಳಿಸಲಾಗಿದೆ. ಹಾಗಿದ್ದರೆ, ಆ ವಸ್ತು ಯಾವುದು ಅದು ಹೇಗೆ ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರು ಮನೆಯಲ್ಲಿ ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಇದು ವಾಸ್ತು ಶಾಸ್ತ್ರದಲ್ಲಿ ಕರ್ಪೂರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಇದನ್ನು ಪ್ರತಿನಿತ್ಯ ಮನೆಯಲ್ಲಿ ಹಚ್ಚಿ ದೇವರಿಗೆ ಬೆಳಗುವುದರಿಂದ ಇದು ಮನೆಯಲ್ಲಿ ಸಕರಾತ್ಮಕತೆಯನ್ನು ಹರಡುವಂತೆ ಮಾಡುತ್ತದೆ. ಇದು ಸುಗಂಧವನ್ನು ಹರಡುವುದರ ಜೊತೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಯುಎಇ ಲಾಟರಿ; ತನ್ನ ತಾಯಿಯ ಬರ್ತಡೇ ಸಂಖ್ಯೆಯನ್ನೇ ಆರಿಸಿಕೊಂಡು 240 ಕೋಟಿ ರೂ. ಗೆದ್ದ ಭಾರತೀಯ ವ್ಯಕ್ತಿ| UAE Lottery
ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತರಲು ನೀವೇನಾದರೂ, ಶ್ರಮಿಸಿದರೆ, ಅಂತಹ ಪ್ರಯುತ್ನಗಳು ಪದೇ ಪದೇ ವಿಫಲವಾಗುತ್ತಿದ್ದರೆ ಇವೆಲ್ಲಾ ನಿಮ್ಮ ಮನೆಯಲ್ಲಿರುವ ನಕರತಾತ್ಮಕ ಶಕ್ತಿಯ ಪರಿಣಾಮಗಳು ಎಂದು ತಿಳಿದುಬರುತ್ತದೆ. ಹಾಗಾಗಿ ಬೆಳಿಗ್ಗೆ ಹಾಗೂ ಸಂಜೆ ಕರ್ಪೂರವನ್ನು ಬೆಳಗುವುದರಿಂದ ಇದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇದು ವಾತಾವರಣವನ್ನು ಶುದ್ಧೀಕರಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ.
ನಿಮ್ಮ ಮನೆಯಲ್ಲಿ ಯಾವುದೇ ವ್ಯಕ್ತಿಯು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಆದಾಯಕ್ಕಿಂತ ಹೆಚ್ಚಿನ ಸಾಲವನ್ನು ಹೊಂದಿದ್ದರೆ ನಿಮ್ಮ ಅಡುಗೆ ಮನೆಯಲ್ಲಿ ದೋಷವಿದೆ ಎಂದು ತಿಳಿದುಕೊಳ್ಳಿ. ಇಂತಹ ಸಂದರ್ಭದಲ್ಲಿ ಅಡುಗೆಮನೆಯಲ್ಲಿ ಸ್ವಲ್ಪ ಕರ್ಪೂರ ಹಾಗೂ 2 ರಿಂದ 4 ಲವಂಗವನ್ನು ಇರಿಸಿ ಅವುಗಳನ್ನು ಬೆಳಗಿಸಿ. ಇವು ಅಡೆತಡೆಗಳನ್ನು ದೂರಗೊಳಿಸಿ, ಕ್ರಮೇಣ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತದೆ.
ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ದೂರ ಮಾಡಲು ಬಯಸಿದರೆ, ಕರ್ಪೂರವನ್ನು ಬೆಳಗಿರಿ. ಇದನ್ನು ಮನೆಯ ಪ್ರತಿಯೊಂದು ಮೂಲೆಯಲ್ಲೂ ಬೆಳಗಿಸುವುದರಿಂದ ಮನೆಯಲ್ಲಿ ಕರ್ಪೂರದ ತುಂಡುಗಳನ್ನು ಇರಿಸಿ. ಅವು ಸಂಪೂರ್ಣವಾಗಿ ಕರಗಿದಾಗ ಹೊಸ ತುಂಡುಗಳನ್ನು ಇರಿಸಿ. ಸ್ವಲ್ಪ ಸಮಯದಲ್ಲಿ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸುತ್ತವೆ.
ಕೆಲವೊಮ್ಮೆ ಮನೆಯ ಎಲ್ಲಾ ಸದಸ್ಯರು ಪರಸ್ಪರ ಹೊಂದಿಕೊಂಡರೂ ವಾತಾವರಣದಲ್ಲಿ ಅಸಮಾಧಾನ ಅಸ್ವಸ್ಥತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ತುಪ್ಪದಲ್ಲಿ ನೆನಸಿದ ಕರ್ಪೂರವನ್ನು ಸುಟ್ಟು ಅದರ ಪರಿಮಳ ಮನೆಯಾದ್ಯಂತ ಹರಡುವ ಸ್ಥಳದಲ್ಲಿ ಇರಿಸಿ. ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಉಳಿಯುತ್ತದೆ.
ಗಂಡ -ಹೆಂಡತಿ ನಡುವೆ ಆಗ್ಗಾಗೆ ವಾದಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯ ತೊಂದರೆಗಳನ್ನು ತೊಡೆದು ಹಾಕಲು ರಾತ್ರಿ ವೇಳೆ ಗಂಡ ಅಥವಾ ಹೆಂಡತಿಯ ದಿಂಬಿನ ಕೆಳಗೆ ಕರ್ಪೂರ ಇಟ್ಟು ಬೆಳಿಗ್ಗೆ ಎದ್ದಾಗ ಯಾರಿಗೂ ಹೇಳದೆ ಸದ್ದಿಲ್ಲದೇ ಅದನ್ನು ಬೆಳಗಿಸಿ, ಹಾಗೆ ಮಾಡುವುದರಿಂದ ಸಂಬಂಧದಲ್ಲಿನ ವಾದ-ವಿವಾದ ಕಡಿಮೆಯಾಗುತ್ತದೆ. ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ, ದೇವರ ಮನೆಯಲ್ಲಿ ಮತ್ತು ತಿಜೋರಿಯಲ್ಲಿ ಕರ್ಪೂರವನ್ನು ಇಡುವುದು ತುಂಬಾ ಶುಭ ಎಂದು ನಂಬಲಾಗುತ್ತದೆ. ಇದು ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ಸ್ಥಿರವಾಗಿರಿಸುತ್ತದೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.