ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಡಿಸೆಂಬರ್​ ಅಂತ್ಯದಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಮತ್ತು ಧನಲಾಭ! Astrology

Astrology: ಡಿಸೆಂಬರ್​ ನಾಲ್ಕನೇ ವಾರದಲ್ಲಿ ವರಿಷ್ಟ ಯೋಗದ ಶುಭ ಸಂಯೋಗವು ರೂಪುಗೊಳ್ಳುತ್ತದೆ. ಈ ವಾರ ಚಂದ್ರನು ಸೂರ್ಯನಿಂದ ಮೂರನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ವರಿಷ್ಠ ಯೋಗದ ಅತ್ಯಂತ ಶುಭ ಸಂಯೋಗವನ್ನು ಸೃಷ್ಟಿಸುತ್ತದೆ. ಈ ಸಮಯದಲ್ಲಿ ಕೆಲವೊಂದು ರಾಶಿಯವರು ಲಾಭವನ್ನು ಪಡೆಯಲಿದ್ದಾರೆ. ಅವರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ಕಾಣಲಿದ್ದಾರೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ತುಂಬಾ ಶುಭ ಮತ್ತು ಫಲಪ್ರದ ಎಂದು ಸಾಬೀತುಪಡಿಸುತ್ತದೆ. ಸೂರ್ಯ ಮತ್ತು ಶುಕ್ರರ ಸಂಯೋಗದಿಂದ, ಅನೇಕ ಲಾಭಗಳನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕುಟುಂಬದವರೊಂದಿಗೆ ಸಂತೋಷದ ಕ್ಷಣದಲ್ಲಿ ಭಾಗಿಯಾಗಲಿದ್ದೀರಿ. ನೀವು ನಿಮ್ಮ ಸಂಗಾತಿಗಳೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆಯುತ್ತೀರಿ. ವಿದ್ಯಾರ್ಥಿಗಳು ಕೆಲವು ವಿಚಾರದ ಬಗ್ಗೆ ಗೊಂದಲಕ್ಕೊಳಗಾಗಬಹುದು.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ತಿಂಗಳ ಕೊನೆಯವಾರ ತುಂಬಾ ಸಂತೋಷದಾಯಕವಾಗಿರುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಸಮಸ್ಯೆಗಳು ಗೊಂದಲಗಳು ಪರಿಹರಿಸಲ್ಪಡುತ್ತದೆ. ಈ ವಾರ ವಿದ್ಯಾರ್ಥಿಗಳು ಗೌರವವನ್ನು ಪಡೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಉತ್ತಮ ಲಾಭ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣವಿರಲಿದೆ. ಆದಾಗ್ಯೂ, ಈ ವಾರದ ಅಂತ್ಯದ ವೇಳೆಗೆ ನಿಮ್ಮ ಆರೋಗ್ಯವು ಸ್ವಲ್ಪ ಏರಿಳಿತಗೊಳ್ಳಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ತಿಂಗಳ ಕೊನೆಯ ವಾರವು ತುಂಬಾ ಫಲಪ್ರದವಾಗಲಿದೆ. ಇದು ಸ್ನೇಹಿತರು ಮತ್ತು ಸಹೋದ್ಯೀಗಿಗಳೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಕುಟುಂಬದೊಂದಿಗೆ ಸಂತೋಷದ ಕ್ಷಣವನ್ನು ಕಳೆಯಲಿದ್ದೀರಿ. ಉದ್ಯಮಿಗಳು ಸಣ್ಣ ಪ್ರವಾಸಗಳನ್ನು ಸಹ ಯೋಜಿಸಬಹುದು. ಬಟ್ಟೆ ಮತ್ತು ಐಷಾರಾಮಿ ವಸ್ತುಗಳನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ಸಹೋದರರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ದೂರದ ಸಂಬಂಧಿಕರನ್ನು ಭೇಟಿ ಮಾಡಬಹುದು (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.