Astrology (ಸಾಂದರ್ಭಿಕ ಚಿತ್ರ)
Astrology: ಯುಗಾದಿ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭದ ಸಂಭ್ರಮದ ಹಬ್ಬ. ಬ್ರಹ್ಮದೇವನು ಸೃಷ್ಟಿ ಆರಂಭಿಸಿದ ದಿನವಿದು ಎಂದು ನಂಬಲಾಗಿದೆ. ಈ ದಿನ ಜನರು ಮುಂಜಾನೆ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಮನೆಗೆ ಮಾವಿನ ಎಲೆಗಳ ತೋರಣ ಕಟ್ಟಿ ಪೂಜಿಸುತ್ತಾರೆ. ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲ ಸವಿಯುವುದು ಈ ಹಬ್ಬದ ವಿಶೇಷ.
ಜ್ಯೋತಿಷ್ಯದ ಪ್ರಕಾರ ಈ ಹಬ್ಬದಿಂದ ಕೆಲವೊಂದು ರಾಶಿಯವರ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ..
ಧನು ರಾಶಿ
ಧನು ರಾಶಿಯವರು ಈ ಸಮಯದಲ್ಲಿ ಆರ್ಥಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಿಗಳು ಕಚೇರಿಗಳಲ್ಲಿ ಉತ್ತಮ ಸಂಬಂಧವನ್ನು ಹೊಂದಲಿದ್ದೀರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ.
ಕನ್ಯಾ ರಾಶಿ
ಈ ರಾಶಿಯವರಿಗೆ ಯುಗಾದಿ ನಂತರ ಬಹಳ ಪ್ರಯೋಜನಗಳು ಸಿಗಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕೆಲಸದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳದ ಸಾಧ್ಯತೆ ಇದ್ದು, ಉದ್ಯೋಗಿಗಳು ಶುಭ ಸುದ್ದಿಯನ್ನು ಕೇಳಲಿದ್ದೀರಿ. ಒಂಟಿ ಜೀವಗಳಿಗೆ ಮದುವೆ ಪ್ರಸ್ತಾಪಗಳು ಬರಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಯುಗಾದಿ ನಂತರ ಒಳ್ಳೆಯ ಪ್ರಯೋಜನಗಳು ಬರಲಿವೆ. ಈ ವೇಳೆ ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಈ ಸಮಯದಲ್ಲಿ ವಾಹನಗಳ ಖರೀದಿ ಮಾಡಲಿದ್ದೀರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಕಡೆಗೆ ನಿಮ್ಮ ಆಸಕ್ತಿ ಬದಲಾಗಬಹುದು. ಪ್ರೀತಿ ಸಂಬಂಧಗಳು ಸಿಹಿಯಾಗಿರುತ್ತವೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.