ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಡಿಸೆಂಬರ್​ನಲ್ಲಿ ಈ ಮೂರು ರಾಶಿಯವರಿಗೆ ಸೂಪರ್​ ಲಕ್​! ನಿಮ್ದೂ ಇದೇ ರಾಶಿನಾ?Astrology

Astrology: ಡಿಸೆಂಬರ್‌ನಲ್ಲಿ ಹಲವಾರು ಗ್ರಹಗಳ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಶುಭ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಈ ತಿಂಗಳು, ಸೂರ್ಯನು ಧನು ರಾಶಿಯಲ್ಲಿ ಸಾಗುತ್ತಾನೆ ಮತ್ತು ಬುಧ ಡಿಸೆಂಬರ್ 6 ರ ಮೊದಲು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಇವೆರಡರ ಸಂಯೋಗವು ಬುಧಾದಿತ್ಯ ರಾಜ್ಯಯೋಗವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ವರ್ಷದ ಕೊನೆಯ ತಿಂಗಳಿನಲ್ಲಿ ಈ 3 ರಾಶಿಯ ಜನರು ಅದೃಷ್ಟವನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಕಾಣುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಗ್ರಹಗಳ ಸಂಚಾರವಾಗುವುದರಿಂದ ಡಿಸೆಂಬರ್​ ತಿಂಗಳನ್ನು ಅದೃಷ್ಟದ ತಿಂಗಳು ಎಂದು ಕರೆಯುತ್ತಾರೆ. ಈ ತಿಂಗಳು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆದರಿಂದ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ತಿಂಗಳ ಆರಂಭದಲ್ಲಿ ಬಡ್ತಿಯ ಸಾಧ್ಯತೆ ಹೆಚ್ಚಿದೆ. ವಿವಾಹವಾಗಲು ಬಯಸುತ್ತಿರುವವರಿಗೆ ಕಂಕಣ ಭಾಗ್ಯ ನೆರವೇರಲಿದೆ. ಈ ತಿಂಗಳು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ ಹಾಗೇ ಸಂಗಾತಿಯೊಂದಿಗೆ ಸಂತೋಷದ ವಾತಾವರಣವನ್ನು ಅನುಭವಿಸಲಿದ್ದೀರಿ.

ಕನ್ಯಾ ರಾಶಿ

ಡಿಸೆಂಬರ್ ತಿಂಗಳು ಕನ್ಯಾ ರಾಶಿಯವರಿಗೆ ಯಶಸ್ಸು ಮತ್ತು ಕನಸುಗಳನ್ನು ನನಸಾಗಿಸಲು ಅವಕಾಶಗಳನ್ನು ತರುತ್ತದೆ. ಈ ಅವಧಿಯಲ್ಲಿ ನೀವು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ಈ ತಿಂಗಳು ನಿಮ್ಮ ಕಚೇರಿಗಳಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಎರಡುಪಟ್ಟು ಉತ್ಸಾಹದಿಂದ ಇರುವುದರಿಂದ ಕೋಪ ನಿಯಂತ್ರಣದಲ್ಲಿರುತ್ತದೆ. ಈ ವೇಳೆ ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ವಿವಾದವನ್ನು ನೀವು ಎದುರಿಸುತ್ತಿದ್ದರೆ, ಆ ವಿವಾದಗಳನ್ನು ಪರಿಹರಿಸಬಹುದು.

ಧನು ರಾಶಿ

ಧನು ರಾಶಿಯವರಿಗೆ ಡಿಸೆಂಬರ್ ತಿಂಗಳು ಅದೃಷ್ಟದ ತಿಂಗಳು ಆಗಲಿದೆ. ಆದಾಗ್ಯೂ, ಈ ತಿಂಗಳಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದ ಸಣ್ಣ ಪ್ರವಾಸಗಳನ್ನು ಮಾಡಬೇಕಾಗಬಹುದು. ಈ ಸಮಯದಲ್ಲಿ ಅನೇಕ ಪ್ರಭಾವಿ ಜನರನ್ನು ಭೇಟಿಯಾಗಲಿದ್ದೀರಿ. ಉದ್ಯೋಗಿಗಳಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಹಿರಿಯ ಮತ್ತು ಕಿರಿಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಕೆಲಸದಲ್ಲಿ ನಿಮ್ಮ ವಿಶ್ವಾಸಾರ್ಹತೆ ಬಲವಾಗಿರುತ್ತದೆ. ಜನರು ನಿಮ್ಮ ಕೆಲಸದಿಂದ ನಿಮ್ಮನ್ನು ಆದಷ್ಟು ಇಷ್ಟಪಡುತ್ತಾರೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.