Astrology: ಜ್ಯೋತಿಷ್ಯದಲ್ಲಿ, ಗ್ರಹಗಳ ಚಲನೆ ಮತ್ತು ನಕ್ಷತ್ರಪುಂಜಗಳ ಬದಲಾವಣೆಯನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ವಿವಿಧ ಶುಭ ಮತ್ತು ಅಶುಭ ಸಂಯೋಜನೆಯನ್ನು ಸೃಷ್ಟಿಸುತ್ತದೆ. ಇದು ಕೆಲವೊಂದು ರಾಶಿಗಳಿಗೆ ಸಕರಾತ್ಮಕ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಶುಕ್ರನು ಮೊದಲು ಶತಭಿಷ ನಕ್ಷತ್ರದಿಂದ ಫೆಬ್ರವರಿ 22, 2026 ರಂದು ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವು ಸುಮಾರು ಮಾರ್ಚ್ 05 ರವರೆಗೆ ಬೀರಲಿದ್ದು, ಸೂರ್ಯನು ಸಹ ಈ ನಕ್ಷತ್ರವನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ಪರಿಣಾಮದಿಂದ ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ..
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸಮಯವು ಆರ್ಥಿಕವಾಗಿ ತುಂಬಾ ಪ್ರಯೋಜನ ಎಂದು ಹೇಳಲಾಗುತ್ತದೆ. ದೀರ್ಘಕಾಲದಿಂದ ಬಾಕಿಯಿದ್ದ ಹಣ ಮತ್ತೆ ಮರಳಿ ಪಡೆಯಲಿದ್ದೀರಿ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರೆಯಲಿದೆ. ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಇದು ಬಡ್ತಿಗೆ ಕಾರಣವಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ವೃತ್ತಿ ಪ್ರಗತಿಗೆ ಅವಕಾಶಗಳು ಸಿಗುವಂತಹ ಸಮಯ ಇದಾಗಿದೆ. ಕೆಲಸದಲ್ಲಿ ಕಠಿಣ ಪರಿಶ್ರಮಗಳಿಂದಾಗಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಹೊಸ ಜವಬ್ದಾರಿಗಳು ನಿಮ್ಮನ್ನು ಉತ್ತುಂಗಕ್ಕೆ ಏರಲಿವೆ. ಕೆಲಸ, ಪ್ರಯಾಣ ಅಥವಾ ವಿದೇಶಿ ಉದ್ಯೋಗದ ಅವಕಾಶಗಳು ಉದ್ಭವಿಸಬಹುದು. ಇದು ನಿಮ್ಮ ಆದಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ, ಈ ಸಂಯೋಜನೆಯು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಈ ಜನರು ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಜನರಲ್ಲಿ ವಿಶೇಷ ವ್ಯಕ್ತಿತ್ವವನ್ನು ಪಡೆಯುತ್ತಾರೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭವಾಗಲಿದೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ಹಳೇಯ ಹೂಡಿಕೆಗಳು ಲಾಭವನ್ನು ನೀಡಲಿವೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.