Astrology (ಸಾಂದರ್ಭಿಕ ಚಿತ್ರ)
Astrology: ಈ ಹೊಸ ವರ್ಷದಲ್ಲಿ ಸೂರ್ಯನು ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸುವುದನ್ನು ಒಂದು ಪ್ರಮುಖ ಘಟನೆ ಎಂದು ಹೇಳಲಾಗುತ್ತದೆ. ಈ ಚಲನೆಯನ್ನು ಜ್ಯೋತಿಷ್ಯದಲ್ಲಿ ಬಹಳ ಪ್ರಯೋಜನ ಎನ್ನಲಾಗುತ್ತದೆ. ಆದಾಗ್ಯೂ, ಏಪ್ರಿಲ್ 14 ರಂದು ಬೆಳಿಗ್ಗೆ 9:38 ಕ್ಕೆ ಸಂಭವಿಸುವ ಈ ಸಂಚಾರವು ಏಪ್ರಿಲ್ 28 ರವರೆಗೆ ಮುಂದುವರಿಯುತ್ತದೆ.
ಆತ್ಮವಿಶ್ವಾಸ, ನಾಯಕತ್ವ ಮತ್ತು ಯಶಸ್ಸನ್ನು ಸಂಕೇತಿಸುವ ಸೂರ್ಯ, ಕೇತು ಆಳ್ವಿಕೆ ನಡೆಸುವ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸಿದಾಗ, ಜೀವನದಲ್ಲಿ ಹಠಾತ್ ಪ್ರಗತಿ, ಹೊಸ ಮಾರ್ಗಗಳು ಮತ್ತು ತ್ವರಿತ ಬದಲಾವಣೆಗಳ ಸಾಧ್ಯತೆ ಇರುತ್ತದೆ. ಹಾಗಿದ್ದರೆ, ಸೂರ್ಯನ ಈ ಸಂಚಾರ ಯಾರಿಗೆ ಹೆಚ್ಚು ಪ್ರಯೋಜನಕಾರಿ ಎಂದು ನೋಡೋಣ ಬನ್ನಿ...
ಮಿಥುನ ರಾಶಿ
ಈ ಸಂಚಾರವು ಮಿಥುನ ರಾಶಿಯವರಿಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗಲಿವೆ. ಉದ್ಯೋಗಿಗಳಿಗೆ ಸಂಬಳ, ಬಡ್ತಿ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ನಡೆಸಲಿದ್ದೀರಿ.
ಮಕರ ರಾಶಿ
ಮಕರ ರಾಶಿಯವರಿಗೆ, ಈ ಬದಲಾವಣೆಯು ನಿಮ್ಮ ವೃತ್ತಿಜೀವನಕ್ಕೆ ಉತ್ತೇಜನ ನೀಡಬಹುದು. ಹೊಸ ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗಗಳು ಸಿಗಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದ್ದು, ಅರ್ಧದಲ್ಲೇ ನಿಂತುಹೋಗಿದ್ದ ಕೆಲಸಗಳು ಪೂರ್ನಗೊಳ್ಳಲಿವೆ.
ಸಿಂಹ ರಾಶಿ
ಈ ತಿಂಗಳು ಸಿಂಹ ರಾಶಿಯವರಿಗೆ ಯಶಸ್ಸು ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಹಠಾತ್ ಆರ್ಥಿಕ ಲಾಭಗಳು ಸಿಗಲಿವೆ. ವಿದ್ಯಾರ್ಥಿಗಳ ಓದಿಗೆ ಉತ್ತಮ ಸಮಯ ಇದಾಗಿದೆ. ಕೆಲಸದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಲಿದ್ದೀರಿ. ಉದ್ಯೋಗಿಗಳು ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆಯನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.