Astrology: ಇಂದು ಚಂದ್ರನು ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ವೇಳೆ ಸೂರ್ಯನು ಮಕರ ರಾಶಿಯಲ್ಲಿ ನೆಲೆಸಿದ್ದಾನೆ. ಸೂರ್ಯ ಮತ್ತು ಚಂದ್ರರಲ್ಲದೆ, ಮಂಗಳ, ಬುಧ ಮತ್ತು ಶುಕ್ರ ಗ್ರಹಗಳು ಸಹ ಮಕರ ರಾಶಿಯಲ್ಲಿ ನೆಲೆಗೊಂಡಿವೆ. ಹೀಗೆ ಐದು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿರುವುದರಿಂದ 'ಪಂಚಗ್ರಹಿ ಯೋಗ' ಸೃಷ್ಟಿಯಾಗಿದೆ. ಜ್ಯೋತಿಷ್ಯದಲ್ಲಿ ಇದನ್ನು ಬಹಳ ಅಪರೂಪದ ಮಿಲನ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಸೂರ್ಯ ಮತ್ತು ಚಂದ್ರರ ಸಂಯೋಗದಿಂದ ಅನೇಕ ರಾಶಿಯವರು ಲಾಭವನ್ನು ಪಡೆಯಲಿದ್ದಾರೆ. ಹಾಗಿದ್ದರೆ, ಈ ದಿನ ಯಾವ ರಾಶಿಯವರು ಪ್ರಯೋಜನ ಪಡೆಯಲಿದ್ದಾರೆ ಎಂದು ನೋಡೋಣ ಬನ್ನಿ..
ವೃಷಭ ರಾಶಿ
ಸೂರ್ಯ-ಚಂದ್ರರ ಸಂಯೋಗದ ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರ ನಡೆಸುವವರಿಗೆ ಪ್ರಗತಿ ದೊರೆಯಲಿದೆ. ಕೆಲಸದಲ್ಲಿ ನಿಮಗೆ ಪ್ರಮುಖ ಜವಬ್ದಾರಿಗಳು ವಹಿಸಿಕೊಡಲ್ಪಡಬಹುದು. ಹಳೆಯ ಹೂಡಿಕೆಗಳು ಲಾಭವನ್ನು ತರಲಿವೆ. ಅರ್ದದಲ್ಲಿ ಸಿಲುಕಿದ್ದ ಹಣ ಮತ್ತೆ ಬರಲಿದೆ. ಭೌತಿಕ ಸೌಕರ್ಯಗಳು ಹೆಚ್ಚಾಗಲಿವೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಹೆಚ್ಚಿನ ಶಕ್ತಿ ಮತ್ತು ಉತ್ಸಾಹವನ್ನು ಅನುಭವಿಸುತ್ತಾರೆ. ಅನಿರೀಕ್ಷಿತ ಆರ್ಥಿಕ ಲಾಭಗಳು ಸಂತೋಷವನ್ನು ತರಲಿವೆ. ಪ್ರೇಮ ಸಂಬಂಧಗಳು ಸಿಹಿಯಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಪ್ರಭಾವಿ ಜನರೊಂದಿಗೆ ಸಂವಹನ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಸೌಲಭ್ಯಗಳು ಮತ್ತು ಸೌಕರ್ಯಗಳು ಹೆಚ್ಚಾಗುತ್ತವೆ.
ಮೀನ ರಾಶಿ
ಸೂರ್ಯ ಮತ್ತು ಚಂದ್ರರ ಸಂಯೋಗವು ಈ ರಾಶಿಯವರಿಗೆ ಅನೇಕ ಪ್ರಯೋಕಜನಗಳನ್ನು ನೀಡಲಿದೆ. ಇವರು ಭೂಮಿ, ಮನೆ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಅನೇಕ ರೀತಿಯಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಕೆಲವು ದಿನಗಳಿಂದ ಮಧ್ಯದಲ್ಲೇ ಸಿಲುಕಿಕೊಂಡಿರುವ ಹಣವನ್ನು ಮರುಪಡೆಯುವ ಸೂಚನೆಗಳಿವೆ. ಕೆಲಸದಲ್ಲಿರುವ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ನಿಮ್ಮ ಸುತ್ತಮುತ್ತಲಿನವರ ಬೆಂಬಲದೊಂದಿಗೆ ನೀವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.