ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಸೂರ್ಯನ ಆಗಮನದಿಂದ ಈ 3 ರಾಶಿಯವರಿಗೆ ಜಾಕ್​ಪಾಟ್​ ! ನಿಮ್ದೂ ಇದೇ ರಾಶಿನಾ?Astrology

ಪ್ರಮುಖ ಮುಖ್ಯಾಂಶಗಳು

  • ಸೂರ್ಯನು ನವೆಂಬರ್ 19 ರಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ
  • ಸೂರ್ಯನು ಶಕ್ತಿ, ಆತ್ಮವಿಶ್ವಾಸ, ನಾಯಕತ್ವವನ್ನು ಪ್ರತಿನಿಧಿಸುತ್ತಾನೆ
  • ಶನಿ ನಕ್ಷತ್ರಕ್ಕೆ ಸೂರ್ಯನು ಪ್ರವೇಶ ಮಾಡುವುದರಿಂದ ಎರಡೂ ನಕ್ಷತ್ರಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ
  • ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ
Astrology : ಜ್ಯೋತಿಷ್ಯದ ಪ್ರಕಾರ, ಸೂರ್ಯನು ನವೆಂಬರ್ 19 ರಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ವಾಸ್ತವವಾಗಿ, ಸೂರ್ಯನು ಶಕ್ತಿ, ಆತ್ಮವಿಶ್ವಾಸ, ನಾಯಕತ್ವವನ್ನು ಪ್ರತಿನಿಧಿಸುತ್ತಾನೆ. ಮತ್ತೊಂದೆಡೆ, ಶನಿಯು ಶಿಸ್ತು, ಕ್ರಿಯೆ ಮತ್ತು ಸಂಘರ್ಷದ ಗ್ರಹವಾಗಿದೆ. ಈ ವೇಳೆ ಶನಿ ನಕ್ಷತ್ರಕ್ಕೆ ಸೂರ್ಯನು ಪ್ರವೇಶ ಮಾಡುವುದರಿಂದ ಎರಡೂ ನಕ್ಷತ್ರಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸುತ್ತಾನೆ. ಈ ಸಮಯದಲ್ಲಿ ಕೆಲವು ಬದಲಾವಣೆಗಳು ಆಗುವುದು ಸಹಜ.
ಈ ಎರಡು ಶಕ್ತಿಗಳು ಒಂದೇ ನಕ್ಷತ್ರದಲ್ಲಿ ಸಕ್ರಿಯವಾಗಿದ್ದಾಗ, ಜೀವನದಲ್ಲಿ ಸ್ಥಿರತೆ ಕಾಣುತ್ತದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ. ಈ ಸಮಯದಲ್ಲಿ ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಮಾಡುವ ಕೆಲಸಗಳಿಗೆ ಪ್ರಶಂಸೆ ಸಿಗುವ ಸಮಯ ಇದಾಗಿದೆ. ಹಲವಾರು ಜನರು ಗೌರವವನ್ನು ಸಂಪಾದಿಸುತ್ತಾರೆ. ಹಾಗಿದ್ದರೆ, ಈ ಸಮಯ ಯಾವ ರಾಶಿಚಕ್ರದವರಿಗೆ ಒಳ್ಳೆಯದು ಎಂದು ನೋಡೋಣ ಬನ್ನಿ..

ಮಿಥುನ ರಾಶಿ

ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಶುಭ ಸುದ್ದಿ ನೀಡಲಿದ್ದಾನೆ. ಇದು ನಿಮ್ಮ ವೃತ್ತಿ ಜೀವನಕ್ಕೆ ಹೊಸ ಆರಂಭವನ್ನು ನೀಡುತ್ತದೆ. ಅರ್ಧದಲ್ಲೇ ನಿಂತುಹೋಗಿದ್ದ ಕೆಲಸ ಕಾರ್ಯಗಳು ಮುಂದೆ ಸಾಗುತ್ತವೆ. ಬಡ್ತಿಯ ಸಾಧ್ಯತೆ ಹೆಚ್ಚಾಗಲಿದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಎಲ್ಲಾ ಕೆಲಸಗಳಲ್ಲಿ ಮುನ್ನಣೆ ಸಾಧಿಸಲಿದ್ದಾರೆ. ಎಲ್ಲಾ ಹಳೆಯ ವಾದ-ವಿವಾದಗಳು ಕೊನೆಗೊಳ್ಳಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ಸೂರ್ಯನ ಸಂಚಾರವು ತುಂಬಾ ಉಪಯೋಗವಾಗಲಿದೆ. ವ್ಯವಹಾರದಲ್ಲಿ ದೀರ್ಘಕಾಲದಿಂದ ಅಂದುಕೊಡಿದ್ದ ಕೆಲಸ ಕಾರ್ಯಗಳು ನೆರವೇರುತ್ತವೆ. ಒತ್ತಡವು ಕಡಿಮೆಯಾಗಲಿದ್ದು, ಇದರಿಂದ ಮನ್ನಣೆ ಸಿಗಲಿದೆ. ಹೊಸ ಜವಬ್ದಾರಿಗಳು ಸಹ ಸಿಗಲಿದೆ. ಹಳೆಯ ಹೂಡಿಕೆಗಳು ಲಾಭ ಹೆಚ್ಚಾಗುವ ಸಾಧ್ಯತೆ ಹೆಚ್ಚಲಿದೆ. ನಿಮ್ಮ ಪ್ರಯತ್ನಗಳ ಫಲಗಳು ಕಂಡುಬರುತ್ತವೆ.

ವೃಶ್ಚಿಕ ರಾಶಿ

ಈ ರಾಶಿ ಚಕ್ರದವರು ಸೂರ್ಯನ ನಕ್ಷತ್ರದಲ್ಲಿನ ಬದಲಾವಣೆಯಿಂದ ಪ್ರಯೋಜನ ಪಡೆಯಬಹುದು. ಈ ದಿನ ಶುಭವಾಗಿದ್ದು, ದೊಡ್ಡ ದೊಡ್ಡ ಯೋಜನೆಗಳು ಸಿಗಲಾರಂಭಿಸುತ್ತವೆ. ವೈವಾಹಿಕ ಜೀವನದಲ್ಲಿ ಸುಖಕರವಾಗಲಿದೆ. ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಎಷ್ಟೋ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ನೆರವೇರುತ್ತವೆ (ಏಜೆನ್ಸೀಸ್​).