Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಷಡಷ್ಟಕ ಯೋಗದಿಂದ ಈ ರಾಶಿಯವರಿಗೆ ಬಂಪರ್ ಲಾಟರಿ! ನಿಮ್ದೂ ಇದೇ ರಾಶಿನಾ...Astrology

Astrology: ಜನವರಿ 2026 ರ ಕೊನೆಯ ದಿನವನ್ನು ಜ್ಯೋತಿಷ್ಯದ ಪ್ರಕಾರ, ವಿಶೇಷವೆಂದು ಕರೆಯಲಾಗುತ್ತದೆ. ಈ ತಿಂಗಳು ಬುಧ ಮತ್ತು ಶುಕ್ರ ತಮ್ಮ ಪಥವನ್ನು ಬದಲಾಯಿಸಲಿದ್ದಾರೆ. ಇದು ಬಹಳ ವರ್ಷಗಳ ನಂತರ ವಿರಳವಾಗಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಈ ಯೋಗವು ಸಂಭವಿಸಿದಾಗ, ಕೆಲವೊಂದು ರಾಶಿಗಳಿಗೆ ಬಹಳ ಶುಭ ಎಂದು ಕರೆಯಲಾಗುತ್ತದೆ.
ಪಂಚಾಂಗದ ಪ್ರಕಾರ, ಜನವರಿ 31, 2026 ರಂದು ಬೆಳಗಿನ ಜಾವ 2:26 ಕ್ಕೆ ಬುಧ ಮತ್ತು ಗುರುಗಳ ನಡುವೆ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಮಧ್ಯಾಹ್ನ 3:07 ಕ್ಕೆ, ಶುಕ್ರ ಮತ್ತು ಗುರು 150 ಡಿಗ್ರಿ ಕೋನೀಯ ದೂರದಲ್ಲಿ ಒಂದೇ ಸ್ಥಾನದಲ್ಲಿರುತ್ತಾರೆ. ಗ್ರಹಗಳ ಚಿಹ್ನೆಗಳಲ್ಲಿನ ಬದಲಾವಣೆಗಳು, ಒಂದೇ ದಿನಕ್ಕೆ 2 ಬಾರಿ ಕಾಣಿಸಿಕೊಳ್ಳುವುದರಿಂದ ಈ ರಾಶಿಗಳಿಗೆ ಪ್ರಯೋಜನ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಯಾವ ರಾಶಿಯವರಿಗೆ ಶುಭ ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ, ಈ ಸಂಯೋಗವು ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ಕೆಲಸಗಳು ವೇಗವಾಗಿ ಸಾಗಲಿವೆ. ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಉದ್ಭವಿಸುತ್ತವೆ. ಹಿಂದೆ ಇದ್ದ ಸಮಸ್ಯೆಗಳು ಕ್ರಮೇಣವಾಗಿ ಬಗೆಹರಿಯಲಿವೆ. ಗ್ರಹಗಳ ಸಂಯೋಗದಿಂದ ಮನಸ್ಸು ಶಾಂತವಾಗಿದ್ದು, ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯಲಿದ್ದೀರಿ.

ಸಿಂಹ ರಾಶಿ

ಈ ಯೋಗವು ಸಿಂಹ ರಾಶಿಯವರಿಗೆ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ಕಚೇರಿಯಲ್ಲಿ ಜನರ ಮೆಚ್ಚುಗೆಯನ್ನು ಪಡೆಯಲಿದ್ದಾರೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕಠಿಣ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ಸಿಗಲಿದೆ. ಮನೆಯಲ್ಲಿ ವಾತಾವರಣವು ಆರಾಮದಾಯಕವಾಗಿರುತ್ತದೆ ಮತ್ತು ಸಂಬಂಧಗಳು ಸಿಹಿಯಾಗಿರುತ್ತವೆ. ಆರೋಗ್ಯವು ಸಹಜವಾಗಿರುತ್ತದೆ.

ಧನು ರಾಶಿ

ಈ ಸಮಯ ಧನು ರಾಶಿಯವರಿಗೆ ಹೊಸ ಭರವಸೆಗಳನ್ನು ತರುತ್ತದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಕ್ರಮೇಣ ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. ವಿದ್ಯಾರ್ಥಿಗಳು, ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನಿಮ್ಮ ಯಶಸ್ಸನ್ನು ನಿರೀಕ್ಷಿಸಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಕುಟುಂಬದಲ್ಲಿ ಸಂತೋಷ ವಾತಾವರಣವಿರಲಿದ್ದು, ಮಾನಸಿಕವಾಗಿ ಮೊದಲಿಗಿಂತ ಹೆಚ್ಚು ಸಕರಾತ್ಮಕವಾಗಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.