ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

2026 ರ ಆರಂಭದಲ್ಲಿ ರಾಜಯೋಗ: ಈ 3 ರಾಶಿಯವರಿಗೆ ಬಂಪರ್​ ಆಫರ್​! Astrology

ಪ್ರಮುಖ ಮುಖ್ಯಾಂಶಗಳು

  • ಇನ್ನೇನು ಕೆಲವೇ ದಿನಗಳಲ್ಲಿ 2026 ರ ಹೊಸ ವರ್ಷ ಪ್ರಾರಂಭವಾಗಲಿದೆ
  • ಈ ವರ್ಷದ ಆರಂಭವು ತುಂಬಾ ಶುಭ ಮತ್ತು ಪ್ರಯೋಜನಕಾರಿಯಾಗಲಿದೆ
  • ಈ ಸಮಯದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ
Astrology: ಇನ್ನೇನು ಕೆಲವೇ ದಿನಗಳಲ್ಲಿ 2026 ರ ಹೊಸ ವರ್ಷ ಪ್ರಾರಂಭವಾಗಲಿದೆ. ಈ ವರ್ಷದ ಆರಂಭವು ತುಂಬಾ ಶುಭ ಮತ್ತು ಪ್ರಯೋಜನಕಾರಿ ಎಂದು ಜ್ಯೋತಿಷ್ಯಗಳು ನಂಬಿವೆ. ಈ ಹೊಸ ವರ್ಷದಲ್ಲಿ ಅಪರೂಪದ ಘಟನೆಗಳು ಅನೇಕರಿಗೆ ಸಂಪತ್ತು, ಖ್ಯಾತಿಯನ್ನು ತರುತ್ತದೆ. ಈ ವೇಳೆ ಗ್ರಹಗಳ ಚಲನೆಯಿಂದ ಜನರು ಶುಕ್ರಾದಿತ್ಯ ರಾಜಯೋಗವನ್ನು ಅನುಭವಿಸುತ್ತಾರೆ. ಇದನ್ನು ಶಕ್ತಿ ಶಾಲಿ ಎಂದು ಪರಿಗಣಿಸಲಾಗುತ್ತದೆ. ಇದು ಗೌರವವನ್ನು ಪಡೆಯಲು ಸಹಾಯವಾಗುತ್ತದೆ. ಹಾಗಿದ್ದರೆ, ಹೊಸ ವರ್ಷ ಯಾರಿಗೆ ಶುಭವಾಗಲಿದೆ ಎಂದು ತಿಳಿಯೋಣ ಬನ್ನಿ...

ಮೇಷ ರಾಶಿ

ಹೊಸ ವರ್ಷದ ಆರಂಭದಲ್ಲಿ ಮೇಷ ರಾಶಿಯವರಿಗೆ ಶುಕ್ರಾದಿತ್ಯ ರೂಪುಗೊಳ್ಳಲಿದ್ದು, ಇದು ರಾಶಿಯವರ ಜೀವನದಲ್ಲಿ ತಿರುವು ಪಡೆದುಕೊಳ್ಳಲಿದೆ. ಈ ಸಮಯದಲ್ಲಿ ಹೊಸ ಅವಕಾಶಗಳು ಬರಲಾರಂಭಿಸುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ. ಹಳೆಯ ಹೂಡಿಕೆಗಳು ಲಾಭ ನೀಡುವ ಸಮಯ ಇದಾಗಿದೆ. ಸ್ವಂತ ವ್ಯವಹಾರ ನಡೆಸುವವರಿಗೆ ಬಹಳ ಲಾಭಗಳನ್ನು ಪಡೆಯಬಹುದು.

ಧನು ರಾಶಿ

ಧನು ರಾಶಿಯವರಿಗೆ ಶುಕ್ರಾದಿತ್ಯ ರಾಜಯೋಗವು ಸೃಷ್ಟಿಯಾಗುವುದರಿಂದ ಅವರ ಜೀವನದ ಹಲವು ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ವಿದೇಶದಲ್ಲಿ ಅವಕಾಶಗಳನ್ನು ಹುಡುಕಾಡುತ್ತಿರುವವರಿಗೆ ಸಕರಾತ್ಮಕ ಲಕ್ಷಣಗಳು ಸಿಗಲಾರಂಭಿಸುತ್ತವೆ. ನಿಮ್ಮ ಧೈರ್ಯದಿಂದ ನೀವು ಮನ್ನಣೆ ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳು ಇತರರ ಮೆಚ್ಚುಗೆಯನ್ನು ಪಡೆಯುತ್ತವೆ. ದೊಡ್ಡ ಹೂಡಿಕೆಗಳು ಲಾಭವಾಗಿ ಬದಲಾಗುವಂತಹ ಸಮಯ ಇದಾಗಿದೆ.

ಮೀನ ರಾಶಿ

ಈ ರಾಜ್ಯಯೋಗವು ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ಈ ಸಮಯದಲ್ಲಿ ಹಲವಾರು ಜನರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಹೊಸ ಉದ್ಯೋಗ, ಬಡ್ತಿ ಹುಡುಕುತ್ತಿರುವವರಿಗೆ ಶುಭಫಲ ಸಿಗುವಂತಹ ಸಮಯ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಂಸಾರದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ಗಳಿಸುತ್ತವೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.