ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

2026 ಶನಿ ಸಂಚಾರ: ಈ ರಾಶಿಯವರಿಗೆ ಒತ್ತಡದ ಚಿಹ್ನೆ! ನಿಮ್ದೂ ಇದೇ ರಾಶಿನಾ? Astrology

Astrologyಜ್ಯೋತಿಷ್ಯದ ಪ್ರಕಾರ, 2026 ರ ಹೊಸ ವರ್ಷದಲ್ಲಿ ಶನಿಯ ನೇರ ಸಂಚಾರವು ಮೂರು ರಾಶಿಚಕ್ರಗಳ ಮೇಲೆ ಕರ್ಮದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ. ಇದರರ್ಥ ಕೆಲವು ರಾಶಿಚಕ್ರ ಚಿಹ್ನೆಗಳು 2026 ರ ಮೊದಲಾರ್ಧದಲ್ಲಿ ತೊಂದರೆಗಳನ್ನು ಎದುರಿಸಬಹುದು ಎಂದು ಸೂಚನೆ ನೀಡಿದೆ. ಹಾಗಿದ್ದರೆ ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮೇಷ ರಾಶಿಯವರಿಗೆ ಶನಿಯ ಚಲನೆಯು ಚಿಂತೆ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಮಾನಹಾನಿಯಾಗುವ ಸಾಧ್ಯತೆ ಇದೆ. ಅಪ್ಪಿ ತಪ್ಪಿ ಏನಾದರೂ ಕೆಟ್ಟ ಹೆಸರು ನಿಮಗೆ ಬಂದರೆ,  ಅನಾನುಕೂಲತೆ ಹೆಚ್ಚಾಗಲಿದೆ. ನಿಮ್ಮ ಹತ್ತಿರದವರೇ ನಿಮಗೆ ಕಳಂಕ ತರಲು ಮುಂದಾಗುತ್ತಾರೆ. ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ನೀವು ಕಷ್ಟಪಡಬೇಕಾಗಬಹುದು. ಕೆಲಸ ಕಾರ್ಯದಲ್ಲಿ ವಿಶೇಷವಾಗಿ ಗಮನ ಹರಿಸಬೇಕಾಗುತ್ತದೆ. 

ಸಿಂಹ ರಾಶಿ

ಸಿಂಹ ರಾಶಿಯ ಮೇಲೆ ಶನಿಯ ಪ್ರಭಾವ ಇದ್ದಕ್ಕಿಂದಂತಲೇ ಹೆಚ್ಚಾಗುತ್ತದೆ. ಇದರಿಂದ ವರ್ಷದ ಆರಂಭದಲ್ಲಿ ಸ್ಥಳಾಂತರದ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ನಿಮ್ಮ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು. ಈ ವೇಳೆ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಮುನ್ನಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಪಿತೂರಿಗಾರರು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. 

ಕುಂಭ ರಾಶಿ

ಕುಂಭ ರಾಶಿಯವರ ಮೇಲೆ ಶನಿಯ ಸಂಚಾರವು ತೀವ್ರವಾಗಿ ಕಂಡುಬಂದಿದೆ. ಈ ಜನರು ಹಣವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಹಣಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯ ಸ್ಥಿತಿಯು ಸ್ವಲ್ಪ ಹದಗೆಡಲಿದೆ. ಅನಗತ್ಯವಾಗಿ  ಖಿನ್ನತೆ, ಒತ್ತಡ ಅಥವಾ ಮಂದ ಭಾವನೆಗೆ ಜಾರಲಿದ್ದೀರಿ ಎಚ್ಚರವಾಗಿರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.