Astrology: ಜ್ಯೋತಿಷ್ಯದ ಪ್ರಕಾರ, ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಆದಾಗ್ಯೂ, ಈ ದಿನದಂದು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸಂಚಾರ ನಡೆಸುತ್ತಾನೆ. ಹಾಗಾಗಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ.
ಜ್ಯೋತಿಷಿಗಳ ಪ್ರಕಾರ, ಮಕರ ಸಂಕ್ರಾಂತಿಯ ಒಂದು ದಿನ ಮೊದಲು ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ, ಇದರ ಪರಿಣಾಮವಾಗಿ ಜನವರಿ 14 ರಂದು ಸೂರ್ಯ ಮತ್ತು ಶುಕ್ರ ಮಕರ ರಾಶಿಯಲ್ಲಿ ಸಂಯೋಗ ನಡೆಯುತ್ತದೆ. ಸೂರ್ಯ ಮತ್ತು ಶುಕ್ರರ ಅಪರೂಪದ ಸಂಯೋಗವು ಶುಕ್ರಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ದಿನವು ತುಂಬಾ ಶುಭವಾಗಿದ್ದು, ಇದರಿಂದ ಅನೇಕ ರಾಶಿಯವರು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಾಗಿದ್ದರೆ, ಯಾವ ರಾಶಿಯವರು ಶುಕ್ರಾದಿತ್ಯ ರಾಜಯೋಗದಂದು ಲಾಭವನ್ನು ಪಡೆಯಲಿದ್ದಾರೆ ಎಂದು ನೋಡೋಣ ಬನ್ನಿ...
ಮೇಷ ರಾಶಿ
ಮೇಷ ರಾಶಿಯವರಿಗೆ ಶುಕ್ರಾದಿತ್ಯ ರಾಜಯೋಗವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಯೋಗವು ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ರೂಪುಗೊಳ್ಳುವುದರಿಂದ ವೃತ್ತಿ ಪ್ರಗತಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ಉದ್ಯಮಿಗಳು ಹೊಸ ಒಪ್ಪಂದಗಳಿಗೆ ಸಿದ್ದಲಾಗಲಿದ್ದೀರಿ. ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಸಂತೋಷದಿಂದ ದಿನ ಕಳೆಯಲಿದ್ದೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಶುಕ್ರಾದಿತ್ಯ ರಾಜಯೋಗ ಶುಭವಾಗಲಿದೆ. ಈ ಜನರ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುವುದರ ಜೊತೆಗೆ ಹೊಸ ಆದಾಯದ ಮೂಲಗಳನ್ನು ತೆರೆಯಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದ್ದು, ಹಳೆಯ ಹೂಡಿಕೆಗಳು ಲಾಭವನ್ನು ನೀಡುತ್ತವೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ.
ಮಕರ ರಾಶಿ
ಮಕರ ರಾಶಿಯವರಿಗೆ ಶುಕ್ರಾದಿತ್ಯ ರಾಜಯೋಗವು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಈ ಯೋಗವು ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬಲಪಡಿಸುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡ ಯೋಜನೆಗಳು ಪುನಃ ಆರಂಭವಾಗಲಿದೆ. ಉದ್ಯೋಗಿಗಳು ಪ್ರಗತಿಯನ್ನು ಕಾಣುತ್ತಾರೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ವೈವಾಹಿಕ ಜೀವನವು ಹೆಚ್ಚು ಸಾಮರಸ್ಯದಿಂದ ಕೂಡಿರುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.