ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಜೂನ್ 22ಕ್ಕೆ ಅಪರೂಪದ 'ವಿಶ್ವ ಸಂಯೋಗ': ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಬಂಪರ್ ಪ್ರಗತಿ, ಕೈ ಇಟ್ಟಲ್ಲೆಲ್ಲಾ ಚಿನ್ನ! Astrology

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಾಹ್ಯಾಕಾಶದಲ್ಲಿ ಗ್ರಹಗಳ ಸಂಚಾರ ಮತ್ತು ಪರಿವರ್ತನೆಗಳು ಮಾನವ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಇದೀಗ ಜೂನ್ ತಿಂಗಳಿನಲ್ಲಿ ಇಂತಹದೇ ಒಂದು ಅತ್ಯಂತ ಅಪರೂಪದ, ಶಕ್ತಿಯುತ ಮತ್ತು ಶುಭದಾಯಕವಾದ 'ವಿಶ್ವ ಸಂಯೋಗ' ಘಟಿಸಲಿದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಜೂನ್ 22 ರಂದು ಕರ್ಕಾಟಕ ರಾಶಿಯಲ್ಲಿ ಅತ್ಯಂತ ಮಂಗಳಕರವಾದ 'ತ್ರಿಗ್ರಹಿ ಯೋಗ' ಮತ್ತು 'ಸರಸ್ವತಿ ರಾಜಯೋಗ'ಗಳು ಜಂಟಿಯಾಗಿ ರೂಪುಗೊಳ್ಳುತ್ತಿವೆ. ಈ ಮಹಾ ಯೋಗದ ಪ್ರಭಾವದಿಂದಾಗಿ ಮೂರು ಪ್ರಮುಖ ರಾಶಿಚಕ್ರಗಳ ಅದೃಷ್ಟದ ಚಕ್ರವು ಸಂಪೂರ್ಣವಾಗಿ ತಿರುಗಲಿದ್ದು, ಅವರ ವೃತ್ತಿ ಜೀವನ ಮತ್ತು ವ್ಯವಹಾರದಲ್ಲಿ ಬಂಪರ್ ಯಶಸ್ಸು ಸಿಗುವ ಸಾಧ್ಯತೆಯಿದೆ. ಹಾಗಿದ್ದರೆ ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ,..

ಮೇಷ ರಾಶಿ

ತ್ರಿಗ್ರಹಿ ಯೋಗದಿಂದ ಈ ರಾಶಿ ಜನರಿಗೆ ಹೊಸ ಉದಯವನ್ನು ತರುತ್ತದೆ ಎನ್ನಲಾಗಿದೆ. ಆದಾಗ್ಯೂ, ಬಹಳ ದಿನಗಳಿಂದ ಬಗೆಹರಿಯಲಾಗದ ಕಷ್ಟಗಳು ಈಗ ಕೊನೆಗೊಳ್ಳುತ್ತವೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದಾರೆ. ಉದ್ಯೋಗಿಗಳು ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಕೇಂದ್ರೀಕರಿಸಲು ಒಳ್ಳೆಯ ಸಮಯ ಇದಾಗಿದೆ.

ಕನ್ಯಾ ರಾಶಿ

ಈ ತ್ರಿಗ್ರಹಿ ಯೋಗದಿಂದ ಉತ್ತಮ ಫಲಿತಾಂಶಗಳನ್ನು ತರುವಂತದ್ದಾಗಿದೆ. ನಿಮ್ಮ ವೃತ್ತಿ ಜೀವನದಲ್ಲಿ ದೀರ್ಘಕಾಲದವರೆಗೆ ಯಾವುದೇ ನಿಶ್ಚಲತೆ ಇದ್ದರೆ, ಅದು ರಾಕೆಟ್​ ವೇಗದಲ್ಲಿ ತಲುಪುವ ಸಾಧ್ಯತೆ ಇದೆ. ಹೊಸ ವ್ಯವಹಾರ ಮಾಡುವವರಿಗೆ ಈ ಸಮಯ ಬಹಳ ಒಳ್ಳೆಯದಾಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯಲಿದ್ದೀರಿ.

ಸಿಂಹ ರಾಶಿ

ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ಅದೃಷ್ಟದ ಚಕ್ರ ತಿರುಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಹೊಸ ಉದ್ಯೋಗವಕಾಶಗಳು ಹುಡುಕಿಕೊಂಡು ನಿಮ್ಮ ಬಳಿ ಬರಲಿವೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ದೀರ್ಘಕಾಲದ ಆಸೆ ಈಡೇರುವ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ನಡೆಸಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.