- ಜ್ಯೋತಿಷ್ಯದ ಪ್ರಕಾರ, ಬುಧನು ಈ ತಿಂಗಳಲ್ಲಿ ಎರಡು ಬಾರಿ ಕುಂಭ ರಾಶಿಗೆ ಸಂಚಾರ ಮಾಡುತ್ತಾನೆ
- ಈ ಚಲನೆಯನ್ನು ಗ್ರಹದ ಅಸ್ತಮವನ್ನು ಶಕ್ತಿಯ ಕ್ಷೀಣತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ
- ಈ ಬದಲಾವಣೆಯು ಅನೇಕರಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ
Astrology: ಜ್ಯೋತಿಷ್ಯದ ಪ್ರಕಾರ, ಬುಧನು ಈ ತಿಂಗಳಲ್ಲಿ ಎರಡು ಬಾರಿ ಕುಂಭ ರಾಶಿಗೆ ಸಂಚಾರ ಮಾಡುತ್ತಾನೆ. ಆದಾಗ್ಯೂ, ಈ ಚಲನೆಯನ್ನು ಗ್ರಹದ ಅಸ್ತಮವನ್ನು ಶಕ್ತಿಯ ಕ್ಷೀಣತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬದಲಾವಣೆಯು ಅನೇಕರಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಮತ್ತು ಅದೃಷ್ಟವನ್ನು ಹೆಚ್ಚಿಸುವುದರ ಜೊತೆಗೆ ಗಣನೀಯ ಲಾಭವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಬುಧನ ಚಲನೆಯಿಂದ ಯಾವ ರಾಶಿಯವರಿಗೆ ಒಳ್ಳೆಯದಾಗಲಿದೆ ಎಂದು ನೋಡೋಣ ಬನ್ನಿ...
ಮಿಥುನ ರಾಶಿ
ಮಿಥುನ ರಾಶಿಯನ್ನು ಬುಧನು ಆಳುವುದರಿಂದ ಈ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಬಲವಾಗಿರುತ್ತದೆ. ನಿಮ್ಮ ನಿರ್ಧಾರಗಳನ್ನು ಸ್ವತಃ ನೀವೇ ತೆಗೆದುಕೊಳ್ಳಲು ಮುಂದಾಗುತ್ತೀರಿ. ಹಳೆಯ ಹೂಡಿಕೆಗಳು ಲಾಭವನ್ನು ನೀಡುತ್ತವೆ. ಕೆಲಸದಲ್ಲಿ ಹೊಸ ಜವಬ್ದಾರಿ ಹಾಗೂ ಬಡ್ತಿ ಸಿಗುವ ಸಮಯ ಇದಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇದು ಆರ್ಥಿಕ ಸ್ಥಿರತೆಯ ಸಮಯವಾಗಿರುತ್ತದೆ. ನಿಮ್ಮ ಆದಾಯದಲ್ಲಿ ಸುಧಾರಣೆ ಕಂಡುಬರುತ್ತದೆ. ನೀವೇನಾದರೂ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ಮಾರ್ಚ್ 13 ರ ನಂತರ ಮಾಡುವುದು ಉತ್ತಮ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹಳೆಯ ಸಾಲಗಳು ತೀರುವುದರ ಜೊತೆಗೆ ಹೊಸ ಜವಬ್ದಾರಿಗಳು ಸಿಗಲಿವೆ. ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ ಸಿಗುವ ಸಮಯ ಇದಾಗಿದೆ.
ಧನು ರಾಶಿ
ಧನು ರಾಶಿಯವರಿಗೆ ಬುಧನ ಚಲನೆಯು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಹೋದರ, ಸಹೋದರಿಯರಿಂದ ನೆರವು ಸಿಗಲಿದೆ. ಸಣ್ಣ ಪ್ರವಾಸಗಳನ್ನು ಕೈಗೊಳ್ಳಲಿದ್ದೀರಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದ್ದು, ಅಧಿಕಾರಿಗಳ ಬೆಂಬಲದಿಂದ ಹೊಸ ಅವಕಾಶಗಳು ಸಿಗಲಿವೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.