Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ದುರ್ಗಾಷ್ಟಮಿಯ ಶುಭ ಫಲ: ಕೆಲಸದಲ್ಲಿ ಪ್ರಗತಿ, ಆರ್ಥಿಕ ಸುಧಾರಣೆ; ಈ ರಾಶಿಯವರಿಗೆ ಲಕ್ಕೋ ಲಕ್ಕು! Astrology

Astrology: ಇಂದು ನವರಾತ್ರಿಯ ದುರ್ಗಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ದುರ್ಗಾ ದೇವಿಯ ಜೊತೆಗೆ, ಮಹಾಗೌರಿಯ ಎಂಟನೇ ರೂಪವನ್ನು ತಾಳುತ್ತಾಳೆ. ಜ್ಯೋತಿಷಿಗಳ ಪ್ರಕಾರ, ಈ ದಿನ ಶುಭವಾಗಿದ್ದು, ಅನೇಕ ರಾಶಿಚಕ್ರದವರು ಇದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
ಆದಾಗ್ಯೂ, ದುರ್ಗಾಷ್ಟಮಿಯ ಶುಭ ದಿನದಂದು, ಈ ರಾಶಿಯವರ ಮೇಲೆ ಮಹಾಗೌರಿ ದೇವಿ ಆಶೀರ್ವಾದವನ್ನು ಬೀರಲಿದ್ದು, ಅವರ ಜೀವನದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ..

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನ ತುಂಬಾ ಶುಭವಾಗಿದ್ದು, ಕೆಲಸದಲ್ಲಿ ಮುನ್ನಣೆ ಸಾಧಿಸಲಿದ್ದೀರಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಬಹುದು. ಹಳೆಯ ಹೂಡಿಕೆಗಳು ಲಾಭವನ್ನು ನೀಡುತ್ತವೆ. ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ. ಈ ದಿನ ಶುಭವಾಗಲಿದ್ದು, ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ.

ಮಕರ ರಾಶಿ

ಮಕರ ರಾಶಿಯವರು ಈ ದಿನ ತಮ್ಮ ಕಠಿಣ ಪರಿಶ್ರಮದಿಂದ ಸಕರಾತ್ಮಕ ಫಲಿತಾಂಶಗಳನ್ನು ನೋಡಬಹುದು. ನಿಮ್ಮ ಗುರಿಗಳ ಮೇಲೆ ಗಮನಹರಿಸಿದರೆ, ಯಶಸ್ಸು ಸಾಧಿಸಲಿದ್ದೀರಿ. ಆತ್ಮ ವಿಶ್ವಾಸ ಹೆಚ್ಚಾಗಲಿದ್ದು, ಧೈರ್ಯದಿಂದ ಕೆಲಸವನ್ನು ಮಾಡಲಿದ್ದೀರಿ. ಹಿರಿಯರಿಂದ ಉತ್ತಮ ಮಾರ್ಗದರ್ಶನಗಳು ದೊರೆಯಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ, ಈ ದಿನ ಹೊಸ ಆರಂಭವನ್ನು ನೀಡುವಂತಹ ದಿನವಾಗಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ದಿನ ತುಂಬಾ ಉಪಯುಕ್ತವಾಗಿದೆ. ಉದ್ಯೋಗಿಗಳು ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗೃತಿ ವಹಿಸಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.