Vastu tips (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಈಶಾನ್ಯ ಮೂಲೆಯಲ್ಲಿ ಈ ಗಿಡಗಳನ್ನು ನೆಡುವುದರಿಂದ ಬದಲಾಗುತ್ತೆ ನಿಮ್ಮ ಹಣೆಬರಹ! Vastu tips

Vastu tips: ವಾಸ್ತು ಶಾಸ್ತ್ರದಲ್ಲಿ, ಮನೆಯ ದಿಕ್ಕುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಮನೆಯ ಸಮೃದ್ದಿಯನ್ನು ಹೆಚ್ಚಿಸುವುದಲ್ಲದೇ, ಜೀವನದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಅಂದಹಾಗೇ, ಈಶಾನ್ಯ ದಿಕ್ಕನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಈ ದಿಕ್ಕು ಮನೆಯಲ್ಲಿ ಸಕರಾತ್ಮಕ ಶಕ್ತಿಯ ಹರಿವನ್ನು ಹರಿಸುತ್ತದೆ.
ಮನೆಯ ಈಶಾನ್ಯ ದಿಕ್ಕನ್ನು ಸರಿಯಾಗಿ ಸ್ವಚ್ಛಗೊಳಿಸುವುದರಿಂದ ಮನೆಯೊಳಗೆ ಸಂತೋಷ, ಶಾಂತಿ ಮತ್ತು ನೆಮ್ಮದಿ ಇರುತ್ತದೆ ಎಂದು ಭಾವಿಸಲಾಗುತ್ತದೆ. ವಿಶೇಷವಾಗಿ ಈ ಭಾಗದಲ್ಲಿ ನೆಟ್ಟ ಸಸ್ಯಗಳು ಪರಿಸರವನ್ನು ಶುದ್ಧೀಕರಿಸುವುದಲ್ಲದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಾಸ್ತು ಪ್ರಕಾರ, ಈಶಾನ್ಯ ದಿಕ್ಕಿಗೆ ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇದು ಜೀವನದಲ್ಲಿ ಶಕ್ತಿಯನ್ನು ಮುಂದುವರೆಸಲು ಸಹಾಯ ಮಾಡುವುದರ ಜೊತೆಗೆ ಸಮೃದ್ಧಿಯನ್ನು ತರುತ್ತದೆ. ಹಾಗಾದರೆ, ಮನೆಗೆ ಸಮೃದ್ದಿ ತರಲು ನೆಡಬೇಕಾದ ಸಸ್ಯಗಳು ಯಾವುದು ಎಂದು ನೋಡೋಣ ಬನ್ನಿ...

ಕ್ರಾಸ್ಸುಲಾ ಸಸ್ಯ

ವಾಸ್ತು ಶಾಸ್ತ್ರದಲ್ಲಿ, ಕ್ರಾಸ್ಸುಲಾ ಸಸ್ಯವನ್ನು ಅದೃಷ್ಟ ಮತ್ತು ಸಮೃದ್ಧಿಯನ್ನು ತರುವ ಸಸ್ಯವೆಂದು ಕರೆಯಲಾಗುತ್ತದೆ. ಇದು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಏನದರೂ ನಿಮಗೆ ಈಶಾನ್ಯ ದಿಕ್ಕಿನಲ್ಲಿ ಈ ಸಸ್ಯವನ್ನು ನೆಡಲು ಸಾಧ್ಯವಾಗದಿದ್ದರೆ, ಅದನ್ನು ಉತ್ತರ ಅಥವಾ ಪೂರ್ವದಲ್ಲಿಯೂ ನೆಡಬಹುದು. ಹೀಗೆ ಮಾಡುವುದರಿಂದ ಇದು ಮನೆಯಲ್ಲಿ ಸಕರಾತ್ಮಕ ಶಕ್ತಿ ನಿಮ್ಮನ್ನು ಒಳ್ಳೆ ದಾರಿಗೆ ಕೊಂಡೊಯ್ಯುತ್ತದೆ.

ಅಪರಾಜಿತ ಸಸ್ಯ

ಅಪರಾಜಿತ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪವಿತ್ರವಾದ ಸಸ್ಯ ಎಂದು ಕರೆಯಲಾಗುತ್ತದೆ. ಇದನ್ನು ಲಕ್ಷ್ಮಿ ದೇವತೆ, ವಿಷ್ಣು ಮತ್ತು ಶನಿ ದೇವರ ಇಷ್ಟವಾದ ಹೂವು ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ಇದು ಮನೆಗೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಜೊತೆಗೆ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಲ್ಲಿಗೆ ಸಸ್ಯ

ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಮಲ್ಲಿಗೆ ಸಸ್ಯವನ್ನು ನೆಡುವುದರಿಂದ ಇದು ಮನಸ್ಸಿಗೆ ಮತ್ತು ಮನೆಗೆ ಶಾಂತಿಯನ್ನು ನೀಡುತ್ತದೆ ಎಂದು ತಿಳಿಸಲಾಗುತ್ತದೆ. ಇದು ಪರಿಮಳ ಬೀಳುವುದರ ಜೊತೆಗೆ ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ಈ ಸಸ್ಯವನ್ನು ನೆಡುವುದು ಕುಟುಂಬದಲ್ಲಿ ಸಂತೋಷವನ್ನು ಪಡೆಯುವುದರ ಜೊತೆಗೆ ಎಲ್ಲಾ ಸಮಸ್ಯೆಗಳನ್ನು ಪರಿಹಾರ ನೀಡಲಾಗುತ್ತದೆ.

ಶಮಿ ಗಿಡ

ವಾಸ್ತು ಶಾಸ್ತ್ರದಲ್ಲಿ ಶಮಿಗಿಡವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವು ಶನಿ ದೇವರಿಗೆ ಅತ್ಯಂತ ಪ್ರಿಯವಾಗಿದ್ದು, ಇದನ್ನು ನಿಮ್ಮ ಮನೆಯಲ್ಲಿ ನೆಡುವುದರಿಂದ ಶನಿ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಪರಿಹಾರ ಒದಗಿಸುತ್ತದೆ. ಶಮಿ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಇದು ಮನೆಗೆ ಮತ್ತು ಸಂಪತ್ತಿಗೆ ಪ್ರಯೋಜನವನ್ನು ನೀಡುತ್ತದೆ (ಏಜೆನ್ಸೀಸ್).