ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಮಲಗುವ ಮೊದಲು ದಿಂಬಿನ ಕೆಳಗೆ ಈ ವಸ್ತುಗಳನ್ನು ಇರಿಸಿ; ನಿಮ್ಮ ಸಮಸ್ಯೆಗಳು ನಿಧಾನವಾಗಿ ಮಾಯವಾಗುತ್ತವೆ! Vastu tips

Vastu tips: ವಾಸ್ತು ಶಾಸ್ತ್ರವು ಜೀವನದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ವಿಭಿನ್ನ ಪರಿಹಾರಗಳನ್ನು ಒದಗಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ, ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಹೆಚ್ಚಿಸುವ ಕೆಲವು ಪರಿಹಾರಗಳಿವೆ. ಅಂತಹ ಕೆಲವು ಸರಳ ಪರಿಹಾರಗಳನ್ನು ನಾವಿಂದು ತಿಳಿಸಲಿದ್ದೇವೆ. ಈ ಪರಿಹಾರವನ್ನು ಮಾಡಲು ನೀವು ಬೇರೆ ಏನು ಮಾಡಬೇಕಿಂದಿಲ್ಲ. ಬದಲಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಈ ವಸ್ತುಗಳನ್ನು ಇಟ್ಟುಕೊಳ್ಳಿ. ಈ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗೆ ಇಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಗಳಾಗುತ್ತವೆ.

ತುಳಸಿ ಎಲೆ

ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಲಕ್ಷ್ಮಿ ದೇವಿಯ ವಾಸಸ್ಥಾನ. ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಒಣಗಿದ ತುಳಸಿ ಎಲೆಯನ್ನು ಇಟ್ಟುಕೊಳ್ಳುವುದರಿಂದ, ಮಾನಸಿಕವಾಗಿ ಶಾಂತಿ, ನೆಮ್ಮದಿಯನ್ನು ಪಡೆಯಬಹುದು. ಆತಂಕ, ಭಯ ದೂರಾಗುತ್ತವೆ. ಆರ್ಥಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ತಿಳಿಸಲಾಗಿದೆ.

ಬೆಳ್ಳಿ ನಾಣ್ಯ

ವಾಸ್ತು ಶಾಸ್ತ್ರದ ಪ್ರಕಾರ, ನಾಣ್ಯವು ಶುದ್ಧ ಲೋಹವಾಗಿದ್ದು ಅದು ಚಂದ್ರನೊಂದಿಗೆ ನೇರವಾಗಿ ಸಂಬಂಧಿಸಿದೆ. ಹಾಗಾಗಿ ಮಲಗುವಾಗ ಬೆಳ್ಳಿ ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಒತ್ತಡ ದೂರವಾಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ಹಾಗೆಯೇ ಅಧಿಕವಾಗಿ ಪೋಲಾಗುತ್ತಿರುವ ಹಣ ನಿಲ್ಲುತ್ತದೆ.

ನವಿಲು ಗರಿ

ಪ್ರತಿನಿತ್ಯ ದಿಂಬಿನ ಕೆಳಗೆ ನವಿಲು ಗರಿಯನ್ನು ಇಟ್ಟು ಮಲಗುವುದರಿಂದ ಇದು ನಿಮ್ಮ ಮನೆಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಗೆ ಲಕ್ಷ್ಮೀ ದೇವಿ ಒಲಿದು ಬರುತ್ತಾಳೆ. ಹಾಗೆಯೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ.

ಅರಿಶಿನ ತುಂಡು

ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಅರಿಶಿನ ತುಂಡನ್ನು ಇಟ್ಟು ಮಲಗುವುದರಿಂದ ಇದು ಮನೆಗೆ ಲಕ್ಷ್ಮೀ ದೇವಿಯ ಅನುಗ್ರಹವನ್ನು ಉಳಿಯುವಂತೆ ಮಾಡುತ್ತದೆ. ಜೀವನದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ಸಹಾಯ ಮಾಡುತ್ತದೆ.

ಬೇವಿನ ಎಲೆ

ಬೇವಿನ ಎಲೆಯು ಬಲವಾದ ಶಕ್ತಿಯನ್ನು ಹೊಂದಿದೆ. ಆದಾಗ್ಯೂ, ಬೇವಿನ ಎಲೆಯ ಮೇಲೆ ಮಂತ್ರವನ್ನು ಬರೆದು ಮಲಗುವುದರಿಂದ ನಿಮಗೆ ಬೀಳುವಂತಹ ಕೆಟ್ಟ ಕನಸುಗಳನ್ನು ತಡೆಯುತ್ತದೆ. ಇದು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಬೇವಿನ ಎಲೆಯ ಮೇಲೆ ಓಂ ನಮಃ ಶಿವಾಯ ಎಂದು ಮಂತ್ರ ಬರೆಯಿರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.